ಬಾಂಗ್ಲಾದೇಶದಲ್ಲಿ ಹಿಂದೂಗಳ‌ ಮೇಲೆ ದೌರ್ಜನ್ಯ

Advt_Headding_Middle

 

ಸುಳ್ಯದಲ್ಲಿ ಯುವ ಬ್ರಿಗೇಡ್ ಪಂಜಿನ ಮೆರವಣಿಗೆ

ಬಾಂಗ್ಲಾದೇಶ ದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಸುಳ್ಯದಲ್ಲಿ‌ ಯುವ ಬ್ರಿಗೇಡ್ ಸಂಘಟನೆಯು ಪಂಜಿನ ಮೆರವಣಿಗೆ ನಡೆಸಿತು.

ಸುಳ್ಯದ ಶ್ರೀರಾಮ ಭಜನಾ ಮಂದಿರದ ಬಳಿಯಿಂದ ಹೊರಟ ಪಂಜಿನ ಮೆರವಣಿಗೆಯು ಸುಳ್ಯದ ಮುಖ್ಯ‌ ಬೀದಿಯಲ್ಲಿ‌ ಸಾಗಿ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪಣಗೊಂಡಿತು.‌

ಹಿಂದು ಸಂಘಟನೆಯ ಮುಖಂಡ ರಾಜೇಶ್ ಶೆಟ್ಟಿ ಮೇನಾಲ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುವ ಆಕ್ರಮಣ ಇಂದು ನಿನ್ನೆಯದಲ್ಲ. ಮತ್ತು ಇಲ್ಲಿ‌ ಮಾತ್ರ ಹಿಂದುಗಳ ಮೇಲೆ ದೌರ್ಜನ್ಯ ನಡೆಯುವುದಲ್ಲ. ಇತರ ಕಡೆಗಳಲ್ಲೂ ನಡೆಯುತ್ತಿದೆ. ಮತಾಂತರ ಆಗಲು ಒಪ್ಪದ ಹಿಂದುಗಳಿಗೆ ಅಲ್ಲಿ ಹಿಂಸೆ ನೀಡುತ್ತಿದ್ದಾರೆ. ಹಿಂದುಗಳ ಆ ದೇಶದಿಂದ ಓಡಿ ಹೋಗಬೇಕೆಂದು ಹೇಳುವ ಸ್ಥಿತಿ ಇದೆ. ಇದನ್ನು ನಾವು ಖಂಡಿಸಿತ್ತೇವೆ. ಹಿಂದುಗಳು ಬಾಂಗ್ಲಾದೇಶ ದಲ್ಲಿ ಬದುಕುವ ರೀತಿಯಲ್ಲಿ ಅಲ್ಲಿಯ ಪ್ರಧಾನಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಷ್ಟ್ರ ಸೇವಿಕಾ ಸಮಿತಿಯ ಶ್ರೀದೇವಿ ನಾಗರಾಜ್ ಭಟ್ ಮಾತನಾಡಿ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಇದು ಮೊದಲಲ್ಲ. 75 ವರ್ಷಗಳ ಹಿಂದೆಯೂ ನಡೆದಿತ್ತು. ಇದೀಗ ಮತ್ತೆ ದೌರ್ಜನ್ಯ ನಡೆಯುತ್ತಿದ್ದು ಇದನ್ನು ನಾವು ಖಂಡಿಸುತ್ತೇವೆ. ಅಲ್ಲಿಯ ಸರಕಾರ ದೌರ್ಜನ್ಯ ನಡೆಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳಿದರು

ಯುವ ಬ್ರಿಗೇಡ್ ‌ಜಿಲ್ಲಾ ಸಂಚಾಲಕ ಮನೀಷ್ ಗೂನಡ್ಕ ಸ್ವಾಗತಿಸಿದರು.

ಸಂಘಟನೆಯ ಪ್ರಮುಖರಾದ ದಾಮೋದರ ಮಂಚಿ, ಯಶೋಧ ರಾಮಚಂದ್ರ, ಕಿಶೋರ್ ಕೊಡೆಂಕಿರಿ, ಲೋಕೇಶ್ ಕೆರೆಮೂಲೆ, ಮಹೇಶ್ ಉಗ್ರಾಣಿಮನೆ, ಲತೀಶ್ ಗುಂಡ್ಯ, ಪ್ರಕಾಶ್ ಯಾದವ್, ರವಿ ಭಸ್ಮಡ್ಕ, ವರ್ಷಿತ್ ಚೊಕ್ಕಾಡಿ, ಶರತ್ ಪರಿವಾರ, ಕೇಶವ ನಾಯಕ್, ಬಾಲಚಂದ್ರ ನೆಡ್ಚಿಲ್ , ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.