ವಾಷ್ಠರ್ ‌ ಫೈವ್ ಸ್ಟಾರ್ ಸಂಗೀತ ಬಳಗದ ವಾರ್ಷಿಕೋತ್ಸವ

Advt_Headding_Middle

ಸಂಗೀತ ಸಿಂಚನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪ್ರದರ್ಶನ

ಸುಳ್ಯದ ವಾಷ್ಠರ್ ಸಂಗೀತ ಬಳಗದ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಂಗೀತ ಸಿಂಚನ ಪ್ರಶಸ್ತಿ ಪತ್ರ ಪ್ರಧಾನ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಅ.24 ರಂದು ಸುಳ್ಯದ ದೇವಮ್ಮ ಕಾನತ್ತಿಲ ಸಭಾಂಗಣದಲ್ಲಿ ನಡೆಯಿತು.
ಸಂಗೀತ ಬಳಗದ ಅಧ್ಯಕ್ಷ ಹೆಚ್. ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು. ‌ ಸಪ್ತಸ್ವರ ಸಂಗೀತ ಕಲಾ ಕೇಂದ್ರದ ವ್ಯವಸ್ಥಾಪಕ ಅರುಣ್ ರಾವ್ ಜಾಧವ್ ಡೋಲ್ ಬಾರಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿಸುದ್ಧಿ ವರದಿಗಾರ ,ಗಾಯಕ ಶಿವಪ್ರಸಾದ್ ಆಲೆಟ್ಟಿ, ಕೆ.ವಿ.ಜಿ.ಇಂಜಿನಿಯರಿಂಗ್ ಉಪನ್ಯಾಸಕರು, ಹಿರಿಯ ಸಾಹಿತಿ ವಿಜಯಕುಮಾರ್ ಕಾಣಿಚ್ಚಾರ್, ರಂಗಕಲಾವಿದ ನಾಗರಾಜ್ ಕುಂದಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾವಿದ ನಾಗರಾಜ್ ಪ್ರಾರ್ಥಿಸಿದರು. ಪ್ರಮೀಳಾ ರಾಜ್ ಐವರ್ನಾಡು ಪ್ರಾಸ್ರಾವಿಕ ಮಾತನಾಡಿದರು. ಪೆರುಮಾಳ್ ಐವರ್ನಾಡು ಸ್ವಾಗತಿಸಿದರು. ಕುಸುಮಾಧರ ರೈ ಬೂಡು ವಂದಿಸಿದರು. ಈ ಸಂದರ್ಭದಲ್ಲಿ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಕಲಾವಿದರನ್ನು ಸಂಗೀತ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಬಳಿಕ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನಗೊಂಡಿತು. ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು. ಕಲಾ ಬಳಗದ ಸದಸ್ಯರು ಸಹಕರಿಸಿದರು. ಈ ಸಂದರ್ಭ ಉದಯೋನ್ಮುಖ ಗಾಯಕ ಹರಿಪ್ರಸಾದ್ ಇವರನ್ನು ಸನ್ಮಾನಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.