ಬೆಳ್ಳಾರೆ: ಶಾಲೆ ಆರಂಭಕ್ಕೆ ಸಿದ್ದತೆ, 2ನೇ ತರಗತಿ ವಿದ್ಯಾರ್ಥಿಗಳಿಂದ ಹಾರೆ ಹಿಡಿದು ರಸ್ತೆ ದುರಸ್ತಿ!!

Advt_Headding_Middle

 

 

ಸರಕಾರದ ಆದೇಶದಂತೆ ಪ್ರಾಥಮಿಕ ಶಾಲಾ ತರಗತಿಗಳು ಅ.25 ರಂದು ಆರಂಭವಾಗಲಿದ್ದು, ಪೂರ್ವತಯಾರಿ ಎಂಬಂತೆ ಇಬ್ಬರು ಪುಟಾಣಿಗಳು ತಾವು ದಿನನಿತ್ಯ ಸಾಗಬೇಕಾದ ರಸ್ತೆಯನ್ನು ತಾವೇ ದುರಸ್ತಿ ಪಡಿಸುವ ದೃಶ್ಯ ಕಂಡುಬಂದಿದೆ.

ಬೆಳ್ಳಾರೆ ಗ್ರಾಮದ ಮೂಡಾಯಿತೋಟ – ಬೆಳ್ಳಾರೆ ರಸ್ತೆಯ ಮಂಡೇಪು ಎಂಬಲ್ಲಿ ಮಣ್ಣಿನ ರಸ್ತೆಯು ಕೆಸರುಮಯವಾಗಿದ್ದು, ನಡೆದುಕೊಂಡು ಹೋಗಲೂ ಅಸಾಧ್ಯವಾಗಿದೆ. ಇದೀಗ ಪ್ರಾಥಮಿಕ ಶಾಲೆ ಆರಂಭಕ್ಕೆ ಸರಕಾರ ದಿನ ನಿಗದಿಪಡಿಸಿದ್ದು ಆ ರಸ್ತೆಯಲ್ಲಿ ನಡೆದುಕೊಂಡು ತಮ್ಮ ಶಾಲಾ ಸಮವಸ್ತ್ರದಲ್ಲಿ ಕೆಸರಾಗುವುದು ಗ್ಯಾರಂಟಿ ಎಂದು ತಿಳಿದ ಸಮೀಪದ ನಿವಾಸಿಗಳಾದ ಸಂತೋಷ್ ಮತ್ತು ಕೇಶವ ಎಂಬವರ ಮಕ್ಕಳಾದ 2 ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ಹಾರೆ ಹಿಡಿದು ರಸ್ತೆಯಲ್ಲಿ ತುಂಬಿರುವ ಕೆಸನ್ನು ಬದಿಗೆ ಸರಿಸಿ ಗುಂಡಿಯಲ್ಲಿ ತುಂಬಿಕೊಂಡಿರುವ ನೀರನ್ನು ಹೊರಗೆ ಬಿಡುವ ಪ್ರಯತ್ನ ಮಾಡಿದ್ದಾರೆ.
ಈ ರಸ್ತೆಯ ಮೇಲೆ ಈ ಪುಟಾಣಿಗಳಿಗಿರುವ ಪ್ರೀತಿ, ಅಭಿವೃದ್ಧಿಯ ಅಭಿವೃದ್ಧಿಯ ಹೊಣೆ ಹೊರಬೇಕಾದ ದೊಡ್ಡವರಿಗೆ ಯಾಕಿಲ್ಲ ಎಂಬ ಪ್ರಶ್ನೆ ಮೂಡಿದೆ.
ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕಡೆ ಗಮನ ಹರಿಸಿ ರಸ್ತೆಯನ್ನು ದುರಸ್ತಿ ಪಡಿಸುವರೇ ಕಾದು ನೋಡಬೇಕಿದೆ.
” ಈ ರಸ್ತೆಯ ತುರ್ತು ದುರಸ್ತಿಗೆ ನಾವು ಪಂಚಾಯತ್ ಗೆ ಈಗಾಗಲೆ ಮನವಿ ಸಲ್ಲಿಸಿದ್ದೇವೆ. ಅವರು ಕೂಡಲೇ ಸ್ಪಂದಿಸಬೇಕೆಂದು ಬಯಸುತ್ತೇವೆ ” ಎಂದು ಸಂತೋಷ್ ರವರು ಹೇಳಿದರು.
ತಮ್ಮ ರಸ್ತೆಯನ್ನು ತಾವೇ ದುರಸ್ತಿ ಮಾಡಹೊರಟ ಪುಟಾಣಿ ಮಕ್ಕಳನ್ನು ಚಿತ್ರದಲ್ಲಿ ಕಾಣಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.