ಸುಳ್ಯ: ಯಾದವ ಸಭಾ ಪ್ರಾದೇಶಿಕ ಸಮಿತಿ ಮಹಾಸಭೆ 

Advt_Headding_Middle

ಸುಳ್ಯ ಯಾದವ ಸಭಾ ಪ್ರಾದೇಶಿಕ ಸಮಿತಿ  ಮಹಾಸಭೆಯು ಶಿವಕೃಪಾ ಕಲಾ ಮಂದಿರದಲ್ಲಿ ಅ.24ರಂದು ಅಧ್ಯಕ್ಷ ನಾರಾಯಣ ಮಲ್ಲಮೂಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಸುಳ್ಯ ತಾ. ಸಮಿತಿ ಅಧ್ಯಕ್ಷ ಜನಾರ್ಧನ ಕಣಕ್ಕೂರು, ತಾ. ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ರಾಮನ್, ಸುಳ್ಯ ಉಸ್ತುವಾರಿ ಸಾವಿತ್ರಿ ಕಣೆಮರಡ್ಕ, ಯುವ ವೇದಿಕೆ ಅಧ್ಯಕ್ಷ ಪ್ರಕಾಶ್ ಕಿಲಾರ್ಕಜೆ, ಸುಳ್ಯ ತಾ. ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಶ್ರೀಧರ ಮೇನಾಲ, ಕೋಶಾಧಿಕಾರಿ ಗಂಗಾಧರ ನವರತ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದಿಂದ ಕೊಡಮಾಡುವ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ ಭಜನರಾದ ಅಚ್ಚುತ್ತ ಅಟ್ಲುರು ಮತ್ತು ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ತಾ. ಸಮಿತಿ ಅಧ್ಯಕ್ಷ ಜನಾರ್ಧನ ಕಣಕ್ಕೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯದರ್ಶಿ ಶ್ರೀಧರ ಮೇನಾಲ, ಕೋಶಾಧಿಕಾರಿ ಗಂಗಾಧರ ನವರತ್ನ ಮಂಡಿಸಿದರು. ನೂತನ ಅಧ್ಯಕ್ಷರಾಗಿ ನಾರಾಯಣ ಮಲ್ಲಮೂಲೆ, ಕಾರ್ಯದರ್ಶಿಯಾಗಿ ಶ್ರೀಧರ ಮೇನಾಲ, ಕೋಶಧಿಕಾರಿ ಗಂಗಾಧರ ನವರತ್ನ ಅವರನ್ನು ಮತ್ತು ಇತರ ಪದಾಧಿಕಾರಿಗಳನ್ನು ಮುಂದಿನ 3ವರ್ಷದ ಅವಧಿಗೆ ಆಯ್ಕೆಮಾಡಲಾಯಿತು. ಪ್ರಾರ್ಥನೆಯನ್ನು ಸಾವಿತ್ರಿ ಕಣೆಮರಡ್ಕ ನಡೆಸಿದರು. ಕಾರ್ಯದರ್ಶಿ ಶ್ರೀಧರ ಮೇನಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.