ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ

Advt_Headding_Middle

ನಮಗೆ ಏನು ಸಿಗಬೇಕು ಅದು ಹಕ್ಕು, ಏನು ಮಾಡಬೇಕು ಅದು ಕರ್ತವ್ಯ: ನ್ಯಾಯಾಧೀಶ ಸೋಮಶೇಖರ ಎ.

ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಗುತ್ತಿಗಾರು ಗ್ರಾಮ ಪಂಚಾಯತ್, ಸುದ್ದಿ ಸಮೂಹ ಮಾಧ್ಯಮ ಸುಳ್ಯ ಇದರ ಸಹಭಾಗಿತ್ವದಲ್ಲಿ 75ನೇ ವರ್ಷದ ಸ್ವಾತಂತ್ರ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಇಂದು ಗುತ್ತಿಗಾರು ಗ್ರಾಮ ಪಂಚಾಯತ್ ನ ಪ. ವರ್ಗ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ ಎ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಪ್ರಸ್ತಾವಿಕ ಮಾತನಾಡಿ ಮಾಹಿತಿ ಹಕ್ಕು ಕಾಯ್ದೆ ಬರಲು ಕಾರಣವಾದ ಅಂಶಗಳನ್ನು ತಿಳಿಸಿದರು. ನಮಗೆ ಏನು ಸಿಗಬೇಕು ಅದು ಹಕ್ಕು, ಏನು ಮಾಡಬೇಕು ಅದು ಕರ್ತವ್ಯ ಕಾನೂನು ಸೇವಾ ಪಾಧಿಕಾರವಿದ್ದು ಪ್ರತಿ ತಾಲೂಕಿನಲ್ಲಿದ್ದು ಏನೇ ಕಾನೂನು ಸಲಹೆ, ಸೇವೆ ಉಚಿತವಾಗಿ ದೊರೆಯಬೇಕಾದ್ರೆ ಕಾನೂನು ಸೇವಾ ಸಮಿತಿ ಇದೆ. ಅಗತ್ಯ ಇದ್ದವರು ನಮ್ಮನ್ನು ಸಂಪರ್ಕಿಸಬೇಕು. ಅದನ್ನು ಉಪಯೋಗಿಸಲು ತಿಳಿದುಕೊಳ್ಳಿ ಎಂದರು. ಮಾಹಿತಿ ಹಕ್ಕು ಜನರ ಸಹಕಾರ ಸಹಾಯಕ್ಕೆ ಇರುವಂತದ್ದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲರಾದ ದಿನೇಶ್ ನಳಿಯಾರು ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಮಾಹಿತಿ ನೀಡುತ್ತಾ ಪಾರದರ್ಶಕ ಆಡಳಿತವು ಭ್ರಷ್ಟಾಚಾರದ ದಾರಿ ಹಿಡಿದರೆ ಪಾರದರ್ಶಕತೆಯನ್ನು ಎತ್ತಿ ಹಿಡಿಯಲು ಮಾಹಿತಿ ಹಕ್ಕು ಸಹಕಾರಿಯಾಗಬಲ್ಲದು. ಮಾಹಿತಿ ಹಕ್ಕು ಮುಖಾಂತರ ಗ್ರಾಮಾಂತರ ಮಾಹಿತಿಯನ್ನು ಗ್ರಾಮ ಮಟ್ಟದ ಅಧಿಕಾರಿಗಳು ಕೊಡದಿದ್ದರೆ ತಾಲೂಕು ಸಿ ಇ ಒ ಕೇಳಬೇಕು. ಹೀಗೆ ಜಿಲ್ಲೆ, ರಾಜ್ಯ, ಕೇಂದ್ರದ ವರಗೆ ಮಾಹಿತಿ ಒದಗಿಸಬಲ್ಲ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿದೆ. ಇದಲ್ಲವೂ ಸಿಗದಿದ್ದರೆ ನ್ಯಾಯಾಲಯದ ಮೂಲಕ ರಿಟ್ ಸಲ್ಲಿಸಬಹುದಾಗಿದೆ ಎಂದರು.

ವೇದಿಕೆಯಲ್ಲಿದ್ದ ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಬಿ ಜನಾರ್ಧನ್ ಸಭಿಕರನ್ನು ಕಾನೂನೂ ಅರಿವು ಹಾಡಿನ ಮೂಲಕ ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ ವಹಿಸಿದ್ದರು. ಗೌರವ ಉಪಸ್ಥಿತರಾಗಿ ಉಪಾಧ್ಯಕ್ಷೆ ಪ್ರಮೀಳಾ ಭಾಸ್ಕರ ಎರ್ದಡ್ಕ, ಸುಬ್ರಮಣ್ಯ ಪೊಲೀಸ್ ಠಾಣಾ ಎಸ್ ಐ ಜಂಬೂರಾಜ್ ಮಾಹಾರಾಜ್ , ಗುತ್ತಿಗಾರು ಗ್ರಾಮ ಪಂಚಾಯತ್ ಪಿಡಿಓ ಧನಪತಿ, ನ್ಯಾಯವಾದಿಗಳಾದ ಹರೀಶ್ ಪೂಜಾರಿಕೋಡಿ, ಸಂದೀಪ್ ವಳಲಂಬೆ, ಡಾ. ಚೈತ್ರಾಬಾನು ವೇದಿಕೆಯಲ್ಲಿದ್ದರು.

ವೇದಾವತಿ ಅವರು ಪ್ರಾರ್ಥಿಸಿ, ಪಿ ಡಿ ಓ ಧನಪತಿ ಸ್ವಾಗತಿಸಿದರು, ಲತಾಕುಮಾರಿ ಆಜಡ್ಕ ವಂದಿಸಿದರು. ಶ್ರೀಕಾಂತ್ ಗುತ್ತಿಗಾರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಸಾರ್ವಜನಿಕರು, ಗುತ್ತಿಗಾರು ಜೂನಿಯರ್‌ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.