ಸುಳ್ಯ ನಗರಕ್ಕೆ ಕೆಸರು ಮಿಶ್ರಿತ ನೀರು ಸರಬರಾಜು

Advt_Headding_Middle

 

ಸುಳ್ಯ ನಗರ ವ್ಯಾಪ್ತಿಯಲ್ಲಿ ನಗರ ಪಂಚಾಯತ್ ವತಿಯಿಂದ ಸರಬರಾಜಾಗುವ ಕುಡಿಯುವ ನೀರು ಪೂರ್ತಿ ಕೆಸರು ಮಿಶ್ರಿತವಾಗಿದ್ದು ಕೆಂಪು ಬಣ್ಣದ ನೀರು ಬರುತಿದೆ.
ಎರಡು ಮೂರು ದಿನದಿಂದ ಸಂಜೆ ಭಾರೀ ಮಳೆ ಸುರಿದ ಕಾರಣ ಪಯಸ್ವಿನಿ ನದಿಯಲ್ಲಿ ಕೆಸರು ಮಿಶ್ರಿತ ಕೆಂಪು ನೀರು ಹರಿಯುತಿದೆ. ಅದೇ ನೀರು ನಗರ ಪಂಚಾಯತ್ ನಳ್ಳಿಗಳ ಮೂಲಕ ಸಾರ್ವಜನಿಕರಿಗೆ ಕುಡಿಯಲು ಮತ್ತು ಇತರ ಬಳಕೆಗೆ
ನಗರಕ್ಕೆ ಸರಬರಾಜಾದ ಕೆಂಪು ಬಣ್ಣದ ನೀರು
ಶುದ್ಧೀಕರಣ ಮಾಡಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಪೂರ್ತಿ ಶುದ್ಧೀಕರಣ ಮಾಡಿ ಸರಬರಾಜು ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಆಗ ನೀರು ಸರಬರಾಜು ವ್ಯತ್ಯಯ ಆಗುವ ಸಾಧ್ಯತೆ ಇದೆ. ಜನರಿಗೆ ಸಮಸ್ಯೆ ಆಗಬಾರದು ಎಂದು ಶುದ್ಧೀಕರಣ ಘಟಕದ ಸಾಮರ್ಥ್ಯಕ್ಕೆ ತಕ್ಕಂತೆ ನೀರು ಶುದ್ದೀಕರಿಸಿ ಸರಬರಾಜು ಮಾಡಲಾಗುತ್ತಿದೆ.

ಶುದ್ದೀಕರಿಸದೇ ನೀರು ವಿತರಿಸಿ ನ.ಪಂ. ನಿರ್ಲಕ್ಷ್ಯ: ಶರೀಫ್ ಕಂಠಿ
ನೀರನ್ನು ಸಮರ್ಪಕವಾಗಿ ಶುದ್ಧೀಕರಣ ಮಾಡದೆ ಕೆಸರು ಮಿಶ್ರಿತ ನೀರು ಸರಬರಾಜು ಮಾಡಿರುವುದು ನಗರ ಪಂಚಾಯತ್ ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತಿದೆ ಎಂದು ನಗರ ಪಂಚಾಯತ್ ವಿಪಕ್ಷ ಸದಸ್ಯ ಶರೀಫ್ ಕಂಠಿ ಹೇಳಿದ್ದಾರೆ. ಕೆಸರು ಮಿಶ್ರಿತ ನೀರು ಕುಡಿಯಲು ಮತ್ತು ಇತರ ಅಗತ್ಯಕ್ಕೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರಿಂದ‌ ವ್ಯಾಪಕ ದೂರುಗಳು ಬಂದಿದೆ. ಗಾಂಧಿನಗರದ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಕಾರ್ಯಾಚರಿಸುತ್ತಿಲ್ಲ. ಹಲವು ಬಾರಿ ನಗರ ಪಂಚಾಯತ್ ಗೆ ಹೇಳಿದರೂ ಅದನ್ನು ಸರಿಪಡಿಸಿಲ್ಲ ಎಂದು ಶರೀಫ್ ಕಂಠಿ ಹೇಳಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.