ಐವರ್ನಾಡು : ಯಶವಂತ‌ ಕುದುಂಗುರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

Advt_Headding_Middle

 

ಐವರ್ನಾಡು ಗ್ರಾಮದ ಕುದುಂಗು ಮನೆತನದ ಪ್ರಗತಿಪರ ಕೃಷಿಕ ಕುದುಂಗು ಯಶವಂತರವರು ಅ.5 ರಂದು ಅಕಾಲಿಕವಾಗಿ ನಿಧನರಾಗಿದ್ದು ಅವರಿಗೆ ಸಾರ್ವಜನಿಕ‌ ಶ್ರದ್ಧಾಂಜಲಿ ಸಭೆಯು ಅ.26 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಹಿರಿಯರಾದ ಮಾಧವ ಭಟ್ ಶೃಂಗೇರಿ, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಡಾ.ಬಾಲಸುಬ್ರಹ್ಮಣ್ಯ ಭಟ್ , ಶಿವಪ್ಪ ಗೌಡ ನೆಕ್ಕರೆಕಜೆ, ಶಿವರಾಮ ಗೌಡ ನೆಕ್ರೆಪ್ಪಾಡಿ, ಉಮೇಶ ಮಾಸ್ತರ್ ಪಲ್ಲತ್ತಡ್ಕ, ವೆಂಕಟ್ರಮಣ ಜಬಳೆ, ಜೆ.ಟಿ.ವೆಂಕಪ್ಪ ಗೌಡ, ದಾಮೋದರ ಗುಂಪಕಲ್ಲು,ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರುರವರು ಮಾತನಾಡಿ, ಯಶವಂತ ಕುದುಂಗುರವರು ಸಮಾಜ ಬಾಂಧವರಾಗಿ, ಧಾರ್ಮಿಕ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದವರು.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾತ್ರೋತ್ಸವ ಸಂದರ್ಭದಲ್ಲಿ ಸಕ್ರೀಯರಾಗಿ ಸೇವೆಸಲ್ಲಿಸಿದ್ದರು.
ಪ್ರಗತಿಪರ ಕೃಷಿಕರಾಗಿ ಮಡಂತ್ಯಾರಿನಲ್ಲಿ ನೆಲೆಸಿದ್ದ ಇವರು ಅಲ್ಲಿ ಸುಳ್ಯದ ಗೌಡರೆಂದು ಕರೆಯಲ್ಪಡುತ್ತಿದ್ದರು.
ಅಲ್ಲಿ ಹಲವಾರು ನ್ಯಾಯ ಪಂಚಾಯತಿಗೆಯನ್ನು ಕೂಡ ಮಡುತ್ತಿದ್ದರು.
ನ್ಯಾಯ ತೀರ್ಮಾನವನ್ನು ನಿಷ್ಟುರವಾಗಿ ಮಾಡುತ್ತಾ ಅನ್ಯಾಯವಾದವನಿಗೆ ನ್ಯಾಯ ಒದಗಿಸುತ್ತಿದ್ದರು.
ಎಲ್ಲರನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತಾ ಕುಟುಂಬದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ ಸಮಾಜದಲ್ಲಿಯೂ ಜನರೊಂದಿಗೆ ಆತ್ಮೀಯತೆಯಿಂದ ಬೆರೆಯುವವರಾಗಿದ್ದರು ಎಂದು ಹೇಳಿ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವುದರ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಎಂದು ಹೇಳಿದರು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ನಡೆದ ಬಳಿಕ ಆಗಮಿಸಿದ ಗಣ್ಯರು ದಿ.ಯಶವಂತ ಕುದುಂಗುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.