ಸುಳ್ಯ ಸಿ.ಎ.‌ಬ್ಯಾಂಕ್ ಮಹಾಸಭೆ

Advt_Headding_Middle

 

63 ಲಕ್ಷ 69 ಸಾವಿರ ರೂ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್

ಸುಳ್ಯ ಸಿ.ಎ.‌ಬ್ಯಾಂಕ್ ನ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ‌ಹರೀಶ್‌ಬೂಡುಪನ್ನೆಯವರ ಅಧ್ಯಕ್ಷತೆಯಲ್ಲಿ, ‌ಬ್ಯಾಂಕ್ ನ ಎ.ಎಸ್. ವಿಜಯಕುಮಾರ್ ಸಭಾಭವನದಲ್ಲಿ ನಡೆಯಿತು.

ಸಂಘ ದ ಅಧ್ಯಕ್ಷ ‌ಹರೀಶ್‌ಬೂಡುಪನ್ನೆ ಮಾತನಾಡಿ, “ಸಂಘವು ವರದಿ ವರ್ಷದಲ್ಲಿ 63 ಲಕ್ಷದ 69 ಸಾವಿರದ 757 ಲಾಭಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು.

2021-22 ರ ವರದಿ ವರ್ಷದಲ್ಲಿ ಸಂಘವು ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಪಡಿತರ ವಿತರಣಾ ಕೇಂದ್ರ ತೆರೆಯುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಸಂಘದ ಪ್ರಧಾನ ಕಚೇರಿಯ ಮೇಲ್ಚಾವಣಿಗೆ ಶೀಟ್ ಅಳವಡಿಸಲು ಅನುಮತಿ ನೀಡಬೇಕಾಗಿದೆ. ದುಗಲಡ್ಕ ಮತ್ತು ಅಜ್ಜಾವರ ಶಾಖೆಯ ಸಂಘದ ಆಸ್ತಿಗೆ ಪಂಚಾಯಿತಿ ಖಾತೆ ಮಾಡಿಸಲಾಗುವುದು. ಅಡಿಕೆ, ತೆಂಗಿನ ಕಾಯಿ ತೆಗೆಯುವ ಕೆಲಸ ಮಾಡುವವರಿಗೆ ಅಪಘಾತ ವಿಮಾ ಯೋಜನೆ ರೂಪಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

“ದುಗಲಡ್ಕ ಶಾಖೆ ಯಲ್ಲಿ ಅಜ್ಜಾವರ ಶಾಖೆಯಲ್ಲಿರುವಂತೆ ಎಲ್ಲಾ ಸೇವೆಗಳು ದೊರೆಯುವಂತೆ ಮಾಡಬೇಕು” ಎಂದು ಕೆ.ಟಿ. ವಿಶ್ವನಾಥ್ ಸಲಹೆ ನೀಡಿದರು. “ಈ ಬಗ್ಗೆ ಆಡಳಿತ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಅಧ್ಯಕ್ಷರು ತಿಳಿಸಿದರು.
” ವಿದ್ಯಾರ್ಥಿವೇತನಕ್ಕೆ ಇಟ್ಟಿರುವ ಡೆಪಾಸಿಟ್ ಗೆ ಬಡ್ಡಿ ಹಣ ಕಡಿಮೆಯಾಗಿದೆ” ಎಂದು ಅಡ್ಡಂತಡ್ಕ ದೇರಣ್ಣ ಗೌಡರು ಹೇಳಿದಾಗ, “ನಾವು ನೀಡುವ ಸಾಲಗಳ ಬಡ್ಡಿಯೂ ಇಳಿಕೆಯಾಗಿದೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ಇರುವಾಗ ಇಲ್ಲಿ ಕೂಡ ನಾವು ಸದಸ್ಯರಿಗೆ ಹೊರೆಯಾಗದ ರೀತಿಯಲ್ಲಿ ಸಾಲಗಳಿಗೆ ನೀಡಬೇಕಾಗುತ್ತದೆ. ಆದ್ದರಿಂದ ಬಡ್ಡಿ ಸ್ವಲ್ಪ ಕಡಿಮೆ ಇದೆ” ಎಂದು ಮುಖ್ಯ ಕಾರ್ಯನಿರ್ವಾಹಕ ಸುದರ್ಶನ್ ತಿಳಿಸಿದರು.
” ಬ್ಯಾಂಕಿನ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕೆಂದು” ಆನಂದರಾವ್ ಕಾಂತಮಂಗಲ ಸಲಹೆ ನೀಡಿದಾಗ, “ನಾವು ಸುಳ್ಯ ಮತ್ತು ಅಜ್ಜಾವರ ನಮ್ಮ ಕಾರ್ಯಕ್ಷೇತ್ರ. ಆದರೆ ವಾಹನ ಸಾಲ, ಚಿನ್ನಾಭರಣ ಸಾಲ ತಾಲೂಕಿನಲ್ಲಿ ನೀಡಲು ನಮಗೆ ಅವಕಾಶ ಪಡೆದುಕೊಂಡಿದ್ದೇವೆ ಎಂದು ಸಿಇಓ ಸುದರ್ಶನ್ ಹೇಳಿದರು.
” ಬ್ಯಾಂಕುಗಳಲ್ಲಿ ಠೇವಣಿಗಳು ಹೆಚ್ಚು ಇಡುವುದರ ಬದಲು ಅದನ್ನು ಸಾಲ ವಿತರಿಸಲು ಒತ್ತು ನೀಡಿದರೆ ಸಂಘಕ್ಕೂ ಹೆಚ್ಚು ಲಾಭ ಸಿಗಬಹುದು” ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಸಲಹೆ ನೀಡಿದರು.
” ಸಂಸ್ಥೆಗೆ ಸಂಸ್ಥೆಯಲ್ಲಿ ಸೋಲಾರ್ ಅಳವಡಿಕೆ ಮಾಡುವಂತೆ ಪಿ.ಕೆ. ಉಮೇಶ್ ಸಲಹೆ ನೀಡಿದರು.

“ನಗರದ ಹಸಿ ಕಸವನ್ನು ಆಧುನಿಕ ಯಂತ್ರ ಖರೀದಿಸಿ ಅದನ್ನು ಗೊಬ್ಬರವನ್ನಾಗಿ ತಯಾರಿಸುವ ಯೋಜನೆ ಇದೆ. ಅದಕ್ಕೆ ಬ್ಯಾಂಕ್ ಸಹಕಾರ ನೀಡಬೇಕು” ಎಂದು ನ.ಪಂ. ಅಧ್ಯಕ್ಷ ವಿನಯಕುಮಾರ ಕಂದಡ್ಕ ಕೇಳಿಕೊಂಡಾಗ, ಈ ಬಗ್ಗೆ ಆಡಳಿತ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ಹರೀಶ್ ಹೇಳಿದರು.
ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ, ನಿರ್ದೇಶಕರುಗಳಾದ ಬಾಲಗೋಪಾಲ ಸೇರ್ಕಜೆ, ನವೀನ್ ಕುಮಾರ್, ಮನ್ಮಥ ಎ.ಎಸ್., ವಾಸುದೇವ ನಾಯಕ್, ಹೇಮಂತ್ ಕುಮಾರ್ ಕಂದಡ್ಕ, ಸುಮತಿ ರೈ, ಹರಿಣಿ ಸದಾನಂದ, ಅಬ್ದುಲ್ ಕುಂಞಿ ನೇಲ್ಯಡ್ಕ, ಶೀನಪ್ಪ ಬಯಂಬು, ದಾಮೋದರ ಮಂಚಿ, ಜಯರಾಮ ಪಿ.ಜಿ., ಕಾನೂನು ಸಲಹೆಗಾರರಾದ ಭಾಸ್ಕರ್ ರಾವ್, ರಂಜಿತ್ ಕುಕ್ಕೆಟ್ಟಿ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.