ಬಿಜೆಪಿ ಆಡಳಿತದ ವೈಫಲ್ಯವೇ ನ್ಯಾಯಾಧೀಶರ ಮಧ್ಯ ಪ್ರವೇಶಕ್ಕೆ ಕಾರಣ : ಎಸ್.ಡಿ.ಪಿ.ಐ

Advt_Headding_Middle

 

 

▪️ಸಮಸ್ಯೆಯನ್ನು ಅರಿತು ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರ ನಡೆ ಶ್ಲಾಘನೀಯ

ಸುಳ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ಬಿಜೆಪಿ ಆಡಳಿತ ವಿರುವ ಕೆಲವು ಕಡೆಗಳಲ್ಲಿ ಆಡಳಿತದ ವೈಫಲ್ಯವು ಎದ್ದು ಕಾಣುತ್ತಿದೆ.ಇದಕ್ಕೆ ದೃತ್ಸಾಕ್ಷಿಯಾಗಿ ಬೆಳ್ಳಾರೆಯಲ್ಲಿ ಹದಗೆಟ್ಟ ರಸ್ತೆಯನ್ನು ಶಾಲೆಗೆ ಹೋಗುವ ಮಕ್ಕಳು ಶ್ರಮದಾನದ ಮೂಲಕ ಸರಿಪಡಿಸಿದ ಸಂದರ್ಭದಲ್ಲಿ ಮತ್ತು ಸುಳ್ಯ ನಗರ ವ್ಯಾಪ್ತಿಯಲ್ಲಿ ಸರಬರಾಜು ಆಗುತ್ತಿರುವ ಕುಡಿಯುವ ನೀರು ಕೆಸರು ಮಿಶ್ರಿತಗೊಂಡು ಕುಡಿಯಲು ಅಯೋಗ್ಯವೆಂದು ಅರಿತಾಗ ಆಡಳಿತ ನಡೆಸುವ ಪಕ್ಷಗಳು/ಸರಕಾರಗಳು ಯಾವುದೇ ರೀತಿಯಲ್ಲಿ ಮುತುವರ್ಜಿ ವಹಿಸದೆ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಖುದ್ದು ಸುಳ್ಯ ನ್ಯಾಯಾಲಯದ ನ್ಯಾಯಾಧೀಶರೇ ಮಧ್ಯ ಪ್ರವೇಶ ಮಾಡಿ ಈ ಸಮಸ್ಯೆಗೆ ಸ್ಪಂಧಿಸುವಷ್ಟರ ಮಟ್ಟಿಗೆ ಇಲ್ಲಿ ಸಮಸ್ಯೆಗಳು ತಲೆ ಎತ್ತಿ ನಿಂತಿದೆ. ಇದು ಬಿಜೆಪಿ ಆಡಳಿತದ ವೈಫಲ್ಯದ ಗಂಭೀರತೆಯನ್ನು ಎತ್ತಿ ತೋರಿಸಿದೆ.

ಇಂತಹ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಖುದ್ದು ನ್ಯಾಯಾಧೀಶರು ಮಧ್ಯ ಪ್ರವೇಶ ಮಾಡಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿರುವುದು ಶ್ಲಾಘನೀಯ ವಾಗಿದೆ.

ಅಭಿವೃದ್ಧಿ ಕೆಲಸದಲ್ಲಿ ಮತ್ತು ಸಮಸ್ಯೆಯನ್ನು ಪರಿಹರಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ತೆರೆಸುವಂತಾಗಿದೆ ಎಂದು ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಝೀರ್ ಸಿಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.