ಜಯನಗರ : ರಸ್ತೆಯ ಮಧ್ಯದಲ್ಲೇ ಕೆರೆ!

Advt_Headding_Middle

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 19 ನೇ ವಾರ್ಡ್ ಜಯನಗರ ರಸ್ತೆಯ ಕಾಂಕ್ರಿಟೀಕರಣ ನಡೆಯುತ್ತಿದ್ದು, ಆ ಭಾಗದ ಜನರು ಜಯನಗರ ಸರಕಾರಿ ಪ್ರಾಥಮಿಕ ಶಾಲೆಯ ಬಳಿಯಾಗಿ ಕೊಡಿಯಾಲಬೈಲು- ಬ್ರಹ್ಮರಗಯ – ಹಳೆಗೇಟು ಸೇರುವ ರಸ್ತೆಯಲ್ಲೇ ಸಂಚರಿಸುವ ಅನಿವಾರ್ಯ ಪರಿಸ್ಥಿತಿ ಇದೆ. ಆದರೆ ಜಯನಗರ ಶಾಲಾ ಬಳಿಯ ರಸ್ತೆಯಲ್ಲಿ ಮಳೆಯ ನೀರು ನಿಂತಿದ್ದು, ಜನರಿಗೆ ಸಂಚರಿಸಲು ಕಷ್ಟಕರವಾಗಿದೆ. ರಸ್ತೆ ಬದಿ ಚರಂಡಿಯ ವ್ಯವಸ್ಥೆ ಇಲ್ಲದೆ ಮಳೆಯ ನೀರು ನಿಂತು ರಸ್ತೆಯ ಮಧ್ಯದಲ್ಲೇ ಕೆರೆ ನಿರ್ಮಾಣವಾದಂತಾಗಿದೆ. ದಿನಂಪ್ರತಿ ನೂರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ವಾಹನ ಸಂಚರಿಸುವಾಗ ಪಾದಾಚಾರಿಗಳಿಗೆ ಕೆಸರಿನ ಅಭಿಷೇಕವಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲೂ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಿದರೆ ಈ ಸಮಸ್ಯೆ ಪರಿಹರಿಸಬಹುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ನ.ಪಂ. ಸದಸ್ಯರು ಗಮನ ಹರಿಸಬೇಕೆಂದು ಆ ಭಾಗದ ಜನತೆ ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.