ಅನ್ಸಾರಿಯ ಎಜುಕೇಶನ್ ಸೆಂಟರ್‌ ನಲ್ಲಿ ಮಿಲಾದ್ ಫೆಸ್ಟ್ ಆರ್ಟ್ಸ್ ಎ ಲೈವ್ ಕಾರ್ಯಕ್ರಮ ಮತ್ತು ಬುರ್ದಾ ವಾರ್ಷಿಕ

Advt_Headding_Middle

 

ಅನ್ಸಾರಿಯ ಎಜುಕೇಶನ್ ಸೆಂಟರ್ ನಾವೂರು ಜಟ್ಟಿಪಳ್ಳ ಇದರ‌ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಅನ್ಸಾರಿಯ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಅ.22 ರಿಂದ 24 ರವರೆಗೆ ಅನ್ಸಾರಿಯ ಸಭಾಂಗಣದಲ್ಲಿ ನಡೆಯಿತು.
ಅ.22 ರಂದು ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಸಹದಿ ಉದ್ಘಾಟಿಸಿ ದುವಾಶಿರ್ವಚನ ಮಾಡಿದರು.
ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ
ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಜಯನಗರ ಅನ್ಸಾರಿಯ ಕ್ಯಾಲೆಂಡರ್ ಅನಾವರಣಗೊಳಿಸಿದರು.
ಅನ್ಸಾರಿಯ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಯಾರ್,ಅನ್ಸಾರಿಯ ಮಹಿಳಾ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಶೌಕತ್ ಆಲಿ ಅಮಾನಿ ಪ್ರಸ್ತಾವಿಕ ಭಾಷಣ ಮಾಡಿದರು.ಸಭೆಯಲ್ಲಿ ದ‌ಅವಾ ಕಾಲೇಜು ಪ್ರಾಂಶುಪಾಲರಾದ ಅಬೂಬಕ್ಕರ್ ಹಿಮಮಿ ಸಖಾಫಿ,ಸಂಸ್ಥೆಯ ಅಧ್ಯಾಪಕರಾದ ನೌಶಾದ್ ಮದನಿ,ಹಂಝತುಲ್ ಕರ್ರಾರ್ ಮುಈನಿ,ಗ್ರೀನ್ ವ್ಯೂ ಮುಖ್ಯೋಪಾಧ್ಯಾಯರಾದ ರಹೀಂ ಮಾಸ್ಟರ್,ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅನ್ಸಾರಿಯಾ ಮದರಸ ಸದರ್ ಉಸ್ತಾದ್ ಝುಬೈರ್ ಹಿಮಮಿ ಪರಪ್ಪು ಸ್ವಾಗತಿಸಿದ ಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಉವೈಸ್ ಬೀಟಿಗೆ ವಂದಿಸಿದ್ದರು.

ಅನ್ಸಾರಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ,ದ‌.ಕ ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಹಾಜಿ ಕೆ.ಎಂ ಮಸ್ತಾಫ,ಅನ್ಸಾರಿಯ ನಿರ್ದೇಶಕರಾದ ಎಸ್ ಪಿ ಅಬೂಭಕ್ಕರ್,ಕೆ ಬಿ ಮಜೀದ್ ,ಅಬ್ದುಲ್ ಖಾದರ್ ಹಾಜಿಜನಕ ಪಟೇಲ್, ಅನ್ಸಾರುಲ್ ಮುಸ್ಲಿಂಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್,ಬಿ.ಎಂ ಅಬೂಭಕ್ಕರ್ ಹಾಜಿ,ಬಾಬ ಹಾಜಿ ಎಲಿಮಲೆ,ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರಿಯ ಮಹಿಳಾ ಶರೀಅತ್ ವಿದ್ಯಾರ್ಥಿನಿಯರ ಸಾಂಸ್ಕೃತಿಕ ಕಾರ್ಯಕ್ರಮ,ಮದ್ ಹುರ್ರಸೂಲ್ ಪ್ರಭಾಷಣ ಹಾಗೂ ಬುರ್ದಾ ಮಜ್ಲೀಸ್ ವಾರ್ಷಿಕ ಕಾರ್ಯಕ್ರಮ ನಡೆಯಿತು.

ಅ23 ಮತ್ತು 24 ದಿನಾಂಕಗಳಲ್ಲಿ ಅನ್ಸಾರಿಯ ದ‌ಅವಾ ಕಾಲೇಜು,ಮದರಸ ಮತ್ತು ದರ್ಸ್ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಆದಿತ್ಯವಾರದಂದು ಇಶಾ ನಮಾಝಿನ ಬಳಿಕ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾರಥಿಗಳು,ಅಧ್ಯಾಪಕರ ವೃಂದ,ಊರ ಮತ್ತು ಪರವೂರ ಅನ್ಸಾರಿಯ ಹಿತೈಷಿಗಳು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.