ಅಮರಪಡ್ನೂರು: ರಸ್ತೆ ನಿರ್ಮಿಸಲು ಅನುವುಮಾಡಿಕೊಡುವಂತೆ‌‌ ಡಿ.ಸಿ.ಗೆ ಮನವಿ, ತಹಶಿಲ್ದಾರ್ ಸ್ಥಳಕ್ಕೆ ಭೇಟಿ, ಮಾತುಕತೆಯಿಂದ ಬಗೆ ಹರಿದ ಸಮಸ್ಯೆ

Advt_Headding_Middle

 

 

ಅಮರಪಡ್ನೂರು ಗ್ರಾಮದ ಹೊಸಮಜಲು ಕಲ್ಮಲೆ ರಸ್ತೆಯನ್ನು ಮುಂದುವರೆಸಿ ತನ್ನ ಮನೆಯ ತನಕ‌ ರಸ್ತೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಮಾಧವ ಮುಗೇರ ಎಂಬವರ ಅ. 10ರಂದು ಅಮರಮಡ್ನೂರು ಗ್ರಾ.ಪಂ.ನಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯಕ್ಕೆ ಬಂದಾಗ ಮನವಿ ಮಾಡಿದ್ದು, ಡಿ.ಸಿ.ಯವರ ಆದೇಶದನ್ವಯ ಸುಳ್ಯ ತಹಶಿಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿದ ಘಟನೆ ಅ. 26ರಂದು ನಡೆದಿದೆ.
ಮಾಧವ ಮುಗೇರರ ಮನೆಗೆ ಈಗಾಗಲೇ ಕಾಲುದಾರಿಯಿದ್ದು, ಅದೇ ಕಾಲು ದಾರಿಯನ್ನು ಅಗಲೀಕರಿಸಿ ರಸ್ತೆ ನಿರ್ಮಿಸಲು ಅನುವುಮಾಡಿಕೊಡಬೇಕೆಂಬುದು ಅವರ ಬೇಡಿಕೆಯಾಗಿತ್ತು. ಆದರೆ ಅದು ಅಮರಮಡ್ನೂರು ಗ್ರಾ.ಪಂ. ಮಾಜಿ ಸದಸ್ಯ ನಾರಾಯಣ ಆಚಾರ್ಯರ ವರ್ಗಸ್ಥಳದಲ್ಲಿ ಹಾದುಹೋಗಬೇಕಿತ್ತು. ಮನವಿಯನ್ನು ಸ್ವೀಕರಿಸಿದ ಡಿ.ಸಿ.ಯವರು ಸ್ಥಳ ಪರಿಶೀಲನೆ ಮಾಡಿ ವರದಿ ಒಪ್ಪಿಸುವಂತೆ ಸುಳ್ಯ ತಹಶಿಲ್ದಾರರಿಗೆ ಆದೇಶಿದ್ದರು. ಇದರ ಪ್ರಕಾರ ಅ. 26ರಂದು ತಹಶಿಲ್ದಾರರು ಸ್ಥಳ ಮಹಜರು ನಡೆಸಿದಾಗ ನಾರಾಯಣ ಆಚಾರ್ಯರು ಈಗಿರುವ ಕಾಲುದಾರಿಯನ್ನು ಸೇರಿದ ಒಟ್ಟು 8 ಫೀಟ್ ರಸ್ತೆ ನಿರ್ಮಿಸಲು ತಮ್ಮ ವರ್ಗಸ್ಥಳವನ್ನು ಬಿಟ್ಟುಕೊಡಲು ಒಪ್ಪಿದರೆನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣ ಆಚಾರ್ಯರು ಮಾಧವ ಮುಗೇರ ಮತ್ತು ನಾವು ಹಲವು ವರ್ಷಗಳಿಂದ ಸದ್ರಿ ಸ್ಥಳದಲ್ಲಿ ವಾಸವಾಗಿದ್ದು, ಅನ್ಯೋನ್ಯತೆಯಿಂದ‌ ಇದ್ದೇವೆ. ಸದ್ರಿ ರಸ್ತೆ ನಿರ್ಮಿಸುವ ಜಾಗದಲ್ಲಿ ನನ್ನ ಜಾಗದ ಗಡಿರೇಖೆಯ ಕಲ್ಲಿನ ಕಂಪೌಂಡ್ ಇದ್ದು, ರಸ್ತೆಗೆ ಬೇಕಾದಷ್ಟು ಜಾಗದಲ್ಲಿ ಕಂಪೌಂಡ್ ತೆರವುಗೊಳಿಸಿ ಬಳಿಕ ರಸ್ತೆಯ ಬದಿ ಬರುವ ಜಾಗದಲ್ಲಿ ಕಂಪೌಂಡ್ ನಿರ್ಮಿಸಿಯೇ ರಸ್ತೆಯ ಕೆಲಸವನ್ನು ಆರಂಭಿಸಬೇಕೆಂಬ ನನ್ನ ಬೇಡಿಕೆಗೆ ಮಾಧವ ಮುಗೇರರು ಒಪ್ಪಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಎಸ್. ಅಂಗಾರ ಮತ್ತು ಮಾಜಿ ತಾ. ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರುರವರ ಮಾರ್ಗದರ್ಶನದಲ್ಲಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದೇವೆ ಎಂದು ತಿಳಿಸಿದರು. ತಹಶಿಲ್ದಾರ್ ಕು. ಅನಿತಾಲಕ್ಷ್ಮಿ, ತಾ.ಪಂ.‌ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್, ಗ್ರಾಮ ಸಹಾಯಕ ಸೀತಾರಾಮ, ಕಂದಾಯ ನಿರೀಕ್ಷಕರ ಕಛೇರಿ ಸಹಾಯಕ ನಾರಾಯಣ ಕೆ
ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.