ಡಾ.ಉಮ್ಮರ್ ಬೀಜದಕಟ್ಟೆ ತಂಡಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿಯ ಪ್ರಶಸ್ತಿ

Advt_Headding_Middle

 

‘ಏಷ್ಯಾ-ಪೆಸಿಫಿಕ್ ಎಚ್ ಆರ್ ಎಂ’ ವತಿಯಿಂದ ನಡೆಸಿದ “ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿನ ಅವಿಷ್ಕಾರಗಳು” ಪ್ರಶಸ್ತಿಗೆ ಪ್ರತಿಷ್ಠಿತ ಔಷಧಿ ಕಂಪನಿಯಾದ ಫಾರ್ಮೆಡ್ ಲಿಮಿಟೆಡ್ ಭಾಗಿಯಾಗಿದೆ. ಅಕ್ಟೋಬರ್ 26ರಂದು ಬೆಂಗಳೂರಿನ ಹೋಟೆಲ್ ತಾಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರು ತರಬೇತಿ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರಾದ ಗೂನಡ್ಕದ ಡಾ. ಉಮ್ಮರ್ ಬೀಜದಕಟ್ಟೆಯವರು ತನ್ನ ಸಹೋದ್ಯೋಗಿಗಳಾದ ಶ್ರೀ ವಿಕ್ರಮ್ ಸಾಗರ್ ಸಕ್ಸೇನಾ ಮತ್ತು ಶ್ರೀ ಆರಿಸ್ ಪಿ ಎಂ (ಡಿಜಿಎಂ – ಎಚ್.ಆರ್) ರವರು ಪ್ರಸ್ತುತ ಪಡಿಸಿದ “ಫಾರ್ಮೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಆವಿಷ್ಕಾರಗಳು ಮತ್ತು ಮೈಲಿಗಲ್ಲುಗಳು” ವಿಷಯದ ಬಗ್ಗೆ ಪ್ರಸ್ತುತಪಡಿಸಿದಾಗ ಫಾರ್ಮೆಡ್ ಗೆ ಈ ಪ್ರಶಸ್ತಿ ಲಭಿಸಿದೆ. ಕೊರನಾ ಸಂದರ್ಭದಲ್ಲಿ ಫಾರ್ಮೆಡ್ ಸಂಸ್ಥೆ ಉದ್ಯೋಗಿಗಳನ್ನು ನೋಡಿಕೊಂಡ ರೀತಿ, ಕೋವಿಡ್ ನಿರ್ವಹಣೆಯನ್ನು ಶ್ಲಾಘಿಸಿದ ತೀರ್ಪುಗಾರರ ತಂಡ ಈ ಪ್ರಶಸ್ತಿ ಘೋಷಿಸಿರುವುದಾಗಿ ಪ್ರಕಟಿಸಿದ್ದಾರೆ. ಅನೇಕ ಕೈಗಾರಿಕೋದ್ಯಮಿಗಳು, ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ಕ್ಷೇತ್ರದ ಅನೇಕ ಹಿರಿಯರು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಫಾರ್ಮೆಡ್ ನ ಮಾನವ ಸಂಪನ್ಮೂಲ ವಿಭಾಗ ತಂಡ ಈ ಪ್ರಶಸ್ತಿಯನ್ನು ಪಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.