ತಕ್ಷಣಕ್ಕೆ ನಗರಕ್ಕೆ ಶುದ್ದ ನೀರು ಸರಬರಾಜು ಕಷ್ಟ ಸಾಧ್ಯ

Advt_Headding_Middle

 

ಶುದ್ಧೀಕರಣ ಘಟಕಕ್ಕೆ 103 ಕೋಟಿ ರೂ ವೆಚ್ಚದ ಅಂದಾಜು ಪಟ್ಟಿ ಸರಕಾರದ ಹಂತದಲ್ಲಿದೆ

ಭರವಸೆ ನೀಡದೇ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ : ನ.ಪಂ. ಅಧ್ಯಕ್ಷ ವಿನಯ್ ಕಂದಡ್ಕ

ನಗರದ ನೀರಿನ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. ತಕ್ಷಣದಲ್ಲಿ ನಗರಕ್ಕೆ ಶುದ್ಧ ನೀರು ಸರಬರಾಜು ಮಾಡಬೇಕೆಂದರೆ ಅದು ಕಷ್ಟ ಸಾಧ್ಯ. ನೀರು ಶುದ್ಧೀಕರಣ ಘಟಕಕ್ಕಾಗಿ ಈಗಾಗಲೇ ೧೦೩ ಕೋಟಿ ರೂ ಅಂದಾಜು ಪಟ್ಟಿ ಸರಕಾರದ ಹಂತದಲ್ಲಿದೆ. ಜನರಿಗೆ ನಾವು ಭರವಸೆಯನ್ನು ನೀಡದೇ ಇಲ್ಲಿನ ನೀರಿನ ಸಮಸ್ಯೆಯನ್ನು ಪರಿಹಾರಕ್ಕೆ ಪ್ರಾಮಾಣಿಕ ಪಯತ್ನ ಮಾಡಿ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದ್ದಾರೆ.
ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ ರವರು ಇಂದು ನ.ಪಂ. ನಲ್ಲಿ ಪತ್ರಿಕಾಗೋಷ್ಠಿ ಕರೆದು ನೀರು ಸಮಸ್ಯೆಯ ಹಾಗೂ ಪರಿಹಾರಕ್ಕೆ ಪಯತ್ನದ ನಡೆಸುತ್ತಿರುವ ವಿವರ ನೀಡಿದರು.
“ಇಲ್ಲಿಯ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅದರ ಪರಿಹಾರಕ್ಕೆ ವ್ಯವಸ್ಥೆಗಳಾದರೂ ತಾಂತ್ರಿಕ ಕಾರಣಗಳಿಂದ ಬಾಕಿಯಾಗಿದೆ. ೪೫ ವರ್ಷಗಳ ಹಿಂದಿನ ನೀರು ಶುದ್ದೀಕರಣ ಘಟಕ ಸುಳ್ಯದಲ್ಲಿದೆ. ಆಗಿನ ಜನಸಂಖ್ಯೆಗನುಗುಣವಾಗಿ ಅದನ್ನು ಮಾಡಲಾಗಿತ್ತು. ಕಾಲ ಕಾಲಕ್ಕೆ ಸುಳ್ಯವೂ ಬೆಳೆದು ಜನ ಸಂಖ್ಯೆಯೂ ಹೆಚ್ಚಾಯಿತು.

ನೀರು ಶುದ್ದೀಕರಣ ಘಟಕವನ್ನು ಕಾಲ ಕಾಲಕ್ಕೆ ಅಪ್‌ಡೇಟ್ ಮಾಡಲಾಗಿದೆಯಾದರೂ ಅದರ ಕೆಪಾಸಿಟಿ ಕಡಿಮೆಯೇ ಇದೆ.
ನೀರಿನ ಅಭಾವ ಎದುರಾದಾಗ ಬೋರ್‌ವೆಲ್‌ಗಳನ್ನು ಕೊರೆಯುಲಾಗಿತ್ತು. ಅದರಲ್ಲಿಯೂ ಕಲ್ಮಶಗಳು ತುಂಬಿ ಅದನ್ನು ಶುಚಿಗೊಳಿಸುವ ಕೆಲಸವನ್ನು ಮಾಡುತ್ತಾ ಬರಲಾಗಿದೆ.
ಮೂರು ವರ್ಷಗಳ ಹಿಂದೆ ಮಡಿಕೇರಿ ಭಾಗದಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಮಣ್ಣು ಮಿಶ್ರಿತ ನೀರು ಹೊಳೆಯಲ್ಲಿ ಹರಿದು ಬರುತ್ತಿತ್ತು. ಈಗಲೂ ಜೋರು ಮಳೆ ಬಂದಾಗ ಜೇಡಿ ಮಿಶ್ರಿತ ನೀರು ಬರುತ್ತಿದೆ. ಸಹಜವಾಗಿ ನಗರದ ಶುದ್ದೀಕರಣ ಘಟಕದ ಕೆಪಾಸಿಟಿ ಬಹಳ ಕಡಿಮೆ. ಇಲ್ಲಿಯ ಜನರು ೨೪ ಗಂಟೆ ನೀರು ಕೊಡಬೇಕೆಂದು ಕೇಳುತ್ತಾರಾದರೂ ಶುದ್ದೀಕರಣ ಮಾಡಿ ನೀರು ಕೊಡುವುದಾದರೆ ೨ ಗಂಟೆಯೂ ಕೊಡುವುದು ಕಷ್ಟ.

೫ ವರ್ಷಗಳ ಹಿಂದೆ ಶುದ್ದೀಕರಣ ಘಟಕಕ್ಕಾಗಿ ೬೬ ಕೋಟಿ ರೂ ವೆಚ್ಚದ ಪರಿಷ್ಕೃತ ಅಂದಾಜು ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಇಲ್ಲಿಯ ವಾಸ್ತವಿಕತೆಯನ್ನು ಬೆಂಗಳೂರಿನಲ್ಲಿ ಕುಳಿತಿರುವ ಅಧಿಕಾರಿಗಳು ಅರಿಯದೆ ಈಗ ಇರುವ ಪೈಪ್ ಲೈನ್ ಉಪಯೋಗಿಸಬೇಕೆಂದು ಹೇಳಿ ವರದಿ ಮಾಡಿದ್ದರಿಂದ ಅದು ಬಾಕಿ ಆಯಿತು. ಇಲ್ಲಿನ ನೀರಿನ ವ್ಯವಸ್ಥೆ ಸರಿಯಾಗಬೇಕಾದರೆ ಈಗಿರವ ಲೈನ್ ಬದಲಾಯಿಸಿ ಹೊಸ ಸಿಸ್ಟಮ್‌ಗಳನ್ನು ಅಳವಡಿಸಬೇಕು. ನಮ್ಮ ಹೊಸ ಆಡಳಿತ ಮಂಡಳಿ ಬಂದ ಬಳಿಕ ರೂ. ೧೦೩ ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ಮಾಡಿ ಸರಕಾರದ ಹಂತಕ್ಕೆ ಕಳುಹಿಸಲಾಗಿದೆ. ಇದರಲ್ಲಿ ನೀರು ಶುದ್ದೀಕರಣ ಘಟಕ, ೪ ಕಡೆ ನಿರು ಸರಬರಾಜಿಗೆ ಟ್ಯಾಂಕ್ ಎಲ್ಲವೂ ಒಳಗೊಂಡಿದೆ ಎಂದು ವಿನಯ ಕಂದಡ್ಕ ವಿವರ ನೀಡಿದರು.

ಈ ಬಾರಿ ಅಕ್ಟೋಬರ್‌ನಲ್ಲಿ ಮಳೆ ಬಿಟ್ಟು ಬಿಟ್ಟು ಬಂದುದರಿಂದ ಮಣ್ಣು ಮಿಶ್ರಿತ ನೀರು ಬಂದಿದೆ. ಈಗ ಮಳೆ ಕಡಿಮೆಯಾದ ಕೂಡಲೇ ಅದು ಸರಿಯಾಗುತ್ತದೆ ಎಂದ ಅವರು ತಕ್ಷಣದಲ್ಲಿ ಶುದ್ದ ನೀರು ಕೊಡಬೇಕೆಂದರೆ ಸಾಧ್ಯವೇ ಇಲ್ಲ. ನಾವು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದರಿಂದ ಶುದ್ಧ ನೀರು ಬರುವುದಾದರೆ ಮನೆಗೆ ಹೋಗಲು ರೆಡಿ ಇzವೆ. ಹಾಗೆಂದ ಮಾತ್ರಕ್ಕೆ ಇದು ನಮ್ಮ ಅಸಹಾಯಕತೆ ಎಂದು ಭಾವಿಸುವುದು ಬೇಡ. ಯಾಕೆಂದರೆ ಭರವಸೆ ಕೊಟ್ಟು ದಿನ ದೂಡುವುದರ ಬದಲು ಪ್ರಾಕ್ಟಿಕಲ್ ವಿಚಾರವನ್ನೇ ಜನರಿಗೆ ಹೇಳುತ್ತಿzವೆ. ನಾವು ಅಧಿಕಾರಕ್ಕೆ ಬಂದ ಆರಂಭದಲ್ಲೇ ಹೇಳಿದಂತೆ ಸುಳ್ಯದ ಕಸದ ಸಮಸ್ಯೆ ಮತ್ತು ನೀರಿನ ಸಮಸ್ಯೆಯನ್ನು ಪರಿಹರಿಸಲು ಗಂಭಿರ ಪ್ರಯತ್ನ ಮಾಡುತ್ತಿzವೆ. ಈಗಾಗಲೇ ಕಲ್ಚೆರ್ಪೆಯ ಕಸದ ಸಮಸ್ಯೆ ಹಾಗೂ ಸುಳ್ಯದ ಕಸದ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಯಶಸ್ವಿಯಾಗಿ ಕಲ್ಚೆರ್ಪೆಯಲ್ಲಿ ಅಳವಡಿಸಿರುವ ಬರ್ನಿಂಗ್ ಮಿಷನ್ ಶೀರ್ಘದಲ್ಲೇ ಉದ್ಘಾಟನೆ ಆಗಲಿದೆ. ಅದೇ ರೀತಿ ಸುಳ್ಯದ ನೀರಿನ ಸಮಸ್ಯೆ ಬಗೆ ಹರಿಸಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬೆಟ್ಟಂಪಾಡಿಯಲ್ಲಿ ನೀರು ಸೀಮೆ ಎಣ್ಣೆ ವಾಸನೆ ಬರುತ್ತಿರುವುದರಿಂದ ಅಲ್ಲಿಗೆ ವ್ಯವಸ್ಥೆ ಕಲ್ಪಿಸಲು ಪೈಚಾರಿನಲ್ಲಿರುವ ಬೋರ್‌ಗೆ ಪಂಪ್ ಅಳವಡಿಸಿ ನೀರು ಸರಬರಾಜಿಗೆ ಕೈಗೊಂಡಿರುವ ಕ್ರಮದ ಕುರಿತು ವಿವರಿಸಿದರು.
ಗುರುಂಪಿನಲ್ಲಿ ಪೈಪ್ ಒಡೆದು ರಸ್ತೆಯಿಂದ ನೀರು ಬರುತ್ತಿದ್ದು ಪ್ರತ್ಯೇಕ ಪೈಪ್ ಲೈನ್‌ಗಾಗಿ ರೂ.೫ ಲಕ್ಷ ಅನುದಾನ ಇರಿಸಿರುವ ಬಗ್ಗೆಯೂ ವಿವರಿಸಿದರು.
ಯಾರೂ ಪ್ರಚಾರಕ್ಕಾಗಿ ಹೇಳಿಕೆಯನ್ನು ನೀಡಬಾರದು. ನಾವು ಸಮಸ್ಯೆಗಳ ಭಾಗವಾಗಿರದೇ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ವಿನಯ್ ಹೇಳಿದರು.
ಪ್ಲಾಸ್ಟಿಕ್ ನಿಷೇಧ, ಸುಳ್ಯದಲ್ಲಿ ಉದ್ಯಾನವನ, ಇತ್ತೀಚೆಗೆ ಬೆಂಗಳೂರಿಗೆ ತೆರಳಿದ ನಿಯೋಗದಿಂದ ನಗರಕ್ಕೆ ಸರಕಾರದಿಂದ ಅನುದಾನ ಬರುವುದು ಮತ್ತಿತರ ವಿಚಾರದ ಕುರಿತು ಅವರು ಪತ್ರಕರ್ತರ ಜತೆ ಅಭಿಪ್ರಾಯ ಹಂಚಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.