ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

Advt_Headding_Middle

 

165.21 ಕೋಟಿ ವ್ಯವಹಾರ ರೂ.42.46 ಲಕ್ಷ ಲಾಭ

ಸದಸ್ಯರಿಗೆ ಶೇ.6.5 ಡಿವಿಡೆಂಡ್

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಅ.28 ರಂದು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾಸ್ ಸಿ.ಕೆ.ವರದಿ ಮಂಡಿಸಿದರು.

ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸ್ವಾಗತಿಸಿ ವರದಿ ವರ್ಷದಲ್ಲಿ ಸಂಘವು 165.21 ಕೋಟಿ ವ್ಯವಹಾರ ನಡೆಸಿ ರೂ.42.46ಲಕ್ಷ ಲಾಭ ಗಳಿಸಿರುತ್ತದೆ.
ಸದಸ್ಯರಿಗೆ ಶೇ.6.5 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ, ಮುಂದಿನ ಯೋಜನೆಗಳು,ಸಿಬ್ಬಂದಿ ವರ್ಗದ ಬಗ್ಗೆ, ಸ್ವಸಹಾಯ ಸಂಘಗಳ ವ್ಯವಹಾರ ಸಾಲದ ಬಡ್ಡಿಯ ಬಗ್ಗೆ, ಗೊಡೌನ್ ರಚನೆ ಬಗ್ಗೆ, ಸಂಘಕ್ಕೆ ಪಿಕಪ್ ಖರೀದಿಸುವ ಬಗ್ಗೆ, ರಾಸಾಯನಿಕ ಗೊಬ್ಬರ, ಸೂಪರ್ ಮಾರ್ಕೆಟ್, ವ್ಯವಹಾರದ ಬಗ್ಗೆ ,ಸದಸ್ಯರಿಗೆ ಇನ್ಸೂರೆನ್ಸ್ ಮಾಡುವ ಬಗ್ಗೆ ಚರ್ಚೆಗಳು ನಡೆದವು.
ಚಂದ್ರಾಕೋಲ್ಚಾರ್ , ಶೀನಪ್ಪ ಗೌಡ ನಿಡ್ಡಾಜೆ, ಶಿವರಾಮ ಗೌಡ ನೆಕ್ರೆಪ್ಪಾಡಿ, ಬೆಳ್ಯಪ್ಪ ಗೌಡ ಮಡ್ತಿಲ, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಮಾಧವ ಭಟ್ ಶೃಂಗೇರಿ, ಬಾಲಕೃಷ್ಣ ಕೀಲಾಡಿ, ಸುಬ್ರಹ್ಮಣ್ಯ ಬಾಂಜಿಕೋಡಿ,ಜಯಪ್ರಸಾದ್ ಕಜೆತ್ತಡ್ಕ,ದಿನೇಶ್ ಮಡ್ತಿಲ,ಶಾಂತಾರಾಮ ಕಣಿಲೆಗುಂಡಿಯವರು ಚರ್ಚೆ ನಡೆಸಿದರು.

ಸೂಪರ್ ಮಾರ್ಕೆಟ್ ನಲ್ಲಿ ವ್ಯವಹಾರ ಮಾಡಿದ ಉತ್ತಮ ಗ್ರಾಹಕರನ್ನು ಗುರುತಿಸಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ನಿರ್ದೇಶಕರಾದ ಮಹೇಶ ಜೆ,ಸತೀಶ ಎಡಮಲೆ, ಕುಸುಮಾಧರ ಮಡ್ತಿಲ, ಶ್ರೀಮತಿ ದೇವಕಿ ಸಿ.ಜಿ, ಶ್ರೀಮತಿ ಭವಾನಿ ಎಂ.ಸಿ, ಶ್ರೀಮತಿ ಸರಸ್ವತಿ ಕೆ, ಕೃಷ್ಣ ಬೆಳ್ಚಪ್ಪಾಡ, ಪುರಂದರ ಎಸ್, ಚಂದ್ರಶೇಖರ ಎಸ್ ಉಪಸ್ಥಿತರಿದ್ದರು.
ಸತೀಶ್ ಎಡಮಲೆ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.