ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾಂಗರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ

Advt_Headding_Middle

 

ಸೇವಾಭಾರತಿ ಇದರ ಸೇವಾಧಾಮದ ಸಹಯೋಗದಲ್ಲಿ ರೋಟರಿ ಕ್ಲಬ್, ಸುಳ್ಯ, ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಸುಳ್ಯ, ಕೃಷಿ ಪತ್ತಿನ ಸಹಕಾರಿ ಸಂಘ ಸುಳ್ಯ, ನಗರ ಪಂಚಾಯತ್, ಸುಳ್ಯ, ಕೆನರಾ ಸ್ಪೈನ್ ಫೋರಮ್ ಟ್ರಸ್ಟ್, ಮಂಗಳೂರು, ಕೆ. ವಿ. ಜಿ
ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ,ಎ. ಪಿ. ಡಿ, ಬೆಂಗಳೂರು, ಲಯನ್ಸ್ ಕ್ಲಬ್ ‌ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಕೆ. ವಿ. ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ‌ ಸುಳ್ಯದಲ್ಲಿ ಅ.೨೭,೨೮ ರಂದು ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾಂಗರಿಗೆ 2 ದಿನದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ ಏರ್ಪಡಿಸಲಾಗಿತ್ತು.


ಕೆ. ವಿ. ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯದ ಡೀನ್ ಡಾ. ನೀಲಂಬಿಕೇಯ ನಟರಾಜನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೇವಾಧಾಮದ ಸಂಚಾಲಕ ಕೆ .
ಪುರಂದರ ರಾವ್ ರವರು ಸೇವಾಭಾರತಿ ಸೇವಾಧಾಮದ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಶಿಬಿರಾರ್ಥಿಗಳು ಶಿಬಿರದಲ್ಲಿ ಸಿಗುವ ಸೌಲಭ್ಯಗಳು ಪಡೆದು ಉತ್ತಮ ಆರೋಗ್ಯವಂತ ಜೀವನ ನಡೆಸಲಿ ಎಂದು ಶುಭಹಾರೈಸಿದರು. ಅತಿಥಿ ಗಳಾಗಿ ಆಗಮಿಸಿದ ಅಕಾಡೆಮಿಕ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ. ಕೆ. ವಿ ಚಿದಾನಂದ ರವರು ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾಂಗರ ಬಗ್ಗೆ ಸೇವಾಧಾಮ ಮಾಡುತ್ತಿರುವ ಕೆಲಸ ಮತ್ತು ಕಾಳಜಿಗೆ ಅಭಿನಂದಿಸಿದರು. ಸೇವಾಧಾಮದಿಂದ ಈ ಹಿಂದೆ ಕೂಡಾ ಇದೆ ರೀತಿ ಶಿಬಿರ ನಡೆಸಿದ್ದು ಅನೇಕರು ಶಿಬಿರದ ಪ್ರಯೋಜನ ಪಡೆದಿದ್ದಾರೆ ಮತ್ತು ಈ ಸಲ ಕೂಡಾ ಶಿಬಿರ ಆಯೋಜಿಸಿದ್ದು ನಮ್ಮಿಂದ ಆಗುವ ಎಲ್ಲಾ ರೀತಿಯ ಸಹಾಕಾರ ನೀಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು. ರೋಟರಿ ಕ್ಲಬ್ ನ ಅಧ್ಯಕ್ಷ ರೋ ಪ್ರಭಾಕರನ್ ನಾಯರ್ ರವರು ಮಾತನಾಡಿ ಸೇವಾಭಾರತಿ ಸೇವಾಧಾಮವು ಉತ್ತಮ ರೀತಿಯ ಯೋಜನೆ ನಿರೂಪಿಸಿ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು ಇಂತಹ ಸೇವಾಕಾರ್ಯವನ್ನು ಶ್ಲಾ ಘಿಸಿದರು. ಸುಳ್ಯ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಹರೀಶ್ ಬೂಡುಪನ್ನೆ , ಸಿದ್ದಿ ವಿನಾಯಕ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ಉಮೇಶ್ ಪಿ. ಕೆ, ಡಾ.ಸುಬ್ರಮಣ್ಯ ಎಮ್. ಪಿ, ಲಯನ್ಸ್ ಕ್ಲಬ್ ಸುಳ್ಯ ಅಧ್ಯಕ್ಷ ಆನಂದ ಪೂಜಾರಿ, ಶ್ರೀಮತಿ ಶೈಲಜಾ, ತಾಲೂಕು ನೋಡಲ್ ಅಧಿಕಾರಿ ರವರು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸೇವಾಧಾಮದ ನಿರ್ದೇಶಕ ರಾಯನ್ ಫೆರ್ನಾಂಡೀಸ್, ಶಿಬಿರದಲ್ಲಿ ಅನೇಕ ಸಂಘ ಸಂಸ್ಥೆಯ ಗಣ್ಯರು, ಶಿಬಿರಾರ್ಥಿಗಳು ಮತ್ತು ಅವರ ಪೋಷಕರು, ಕೆ. ವಿ. ಜಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸೇವಾಭಾರತಿಯ ಕಾರ್ಯಕರ್ತರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೇವಾಭಾರತಿಯ ಕಾರ್ಯಕರ್ತ ಕೇಶವ ಕನ್ಯಾಡಿ ನಿರೂಪಿಸಿದರು. ಸೇವಾಭಾರತಿಯ ಸಿಬ್ಬಂದಿ ಅಖಿಲೇಶ್. ಎ ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.