ವಿನೋಬಾನಗರ : ಕೆಎಸ್‌ಎ ಕಾಮತ್ & ಸನ್ಸ್ ಗೇರುಬೀಜ ಕಾರ್ಖಾನೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Advt_Headding_Middle

 

ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ತಾಲೂಕು ಆಡಳಿತ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ, ಪೋಲಿಸ್ ಇಲಾಖೆ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸುಳ್ಯ, ಶಿಕ್ಷಣ ಇಲಾಖೆ ಸುಳ್ಯ, ಸುದ್ದಿ ಸಮೂಹ ಮಾಧ್ಯಮ ಸುಳ್ಯ, ಕೆ ಎಸ್ ಎ ಕಾಮತ್ & ಸನ್ಸ್ ಗೇರುಬೀಜ ಕಾರ್ಖಾನೆ ವಿನೋಬನಗರ ಸುಳ್ಯ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ವಿನೋಬಾನಗರದ ಕ್ಯಾಶ್ಯೂ ಫ್ಯಾಕ್ಟರಿಯ ಸಭಾಂಗಣದಲ್ಲಿ ಅ. ೨೮ರಂದು ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಅನಿತಾಲಕ್ಷ್ಮಿ, ಗೇರುಬೀಜ ಕಾರ್ಖಾನೆಯ ಮಾಲಕರಾದ ಉಪೇಂದ್ರ ಕಾಮತ್ ಹಾಗೂ ಸುಧಾಕರ ಕಾಮತ್ ಗೌರವ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಜನಾರ್ದನ ಬಿ., ಸುಳ್ಯ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ, ತಾ.ಪಂ. ಕಚೇರಿಯ ವ್ಯವಸ್ಥಾಪಕ ಹರೀಶ್, ವಕೀಲರಾದ ನಾರಾಯಣ ಜಟ್ಟಿಪಳ್ಳ, ಭಾಸ್ಕರ ರಾವ್ ಹಾಗೂ ಎಂ.ಎಂ. ಬೊಳ್ಳಪ್ಪ, ಸುದ್ದಿ ಕಚೇರಿಯ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿಯವರು ‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ ನಿಷೇಧ ಮತ್ತು ಪರಿಹಾರ ) ಕಾಯ್ದೆ ೨೦೧೩’ ಇದರ ಬಗ್ಗೆ ಮಾತನಾಡಿದರು.
ಸುಧಾಕರ ಕಾಮತ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.