ಪೆರಾಜೆ ಪ್ರಾ. ಕೃ. ಪ. ಸಹಕಾರ ಸಂಘದ ವಾರ್ಷಿಕ ಮಹಾಸಭೆ

Advt_Headding_Middle

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಾಲ್ಕನೇ ಮತ್ತು 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ವರದಿ ಸಾಲಿನಲ್ಲಿ 23.30 ಲಕ್ಷ ಲಾಭವಿದ್ದು. ಸದಸ್ಯರಿಗೆ 6 ಶೇಕಡ ಡಿವಿಡೆಂಡ್ ಹಂಚುವಂತೆ ತೀರ್ಮಾನಿಸಲಾಗಿದೆ. ಸದಸ್ಯರು ಕೃಷಿ ಚಟುವಟಿಕೆಗಳಿಗೆ ಅಂದರೆ ಸಾಲ ವ್ಯವಹಾರ, ಬೆಳೆದ ಉತ್ಪತ್ತಿ ಗಳನ್ನು ಮಾರಾಟ ಮಾಡುವುದು ಇತ್ಯಾದಿ ಎಲ್ಲ ಚಟುವಟಿಕೆಗಳನ್ನು ಸಹಕಾರ ಸಂಘಗಳ ಮುಖಾಂತರವೇ ಮಾಡುವುದರಿಂದ ಸಹಕಾರ ಸಂಘಗಳ ಲಾಭದಲ್ಲಿ ಸದಸ್ಯರು ಪಾಲುದಾರರು ಆಗುತ್ತೀರಿ. ಈ ಪ್ರಕಾರ ಕಾನೂನುಬದ್ಧ ವ್ಯವಹಾರದಿಂದ ದೇಶದ ಮತ್ತು ಜನಸಾಮಾನ್ಯರ ಸರ್ವತೋಮುಖ ಪ್ರಗತಿ ಸಾಧ್ಯ. ಕೃಷಿಭೂಮಿಯ ಫಲವತ್ತತೆಯನ್ನು ಕಾಪಾಡಲು ವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿ ಕೊರತೆಯಿರುವ ಅಥವಾ ಶಿಫಾರಸು ಮಾಡಿದ ರಸಗೊಬ್ಬರ ಮಾತ್ರ ಬಳಸಿ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ಸದಸ್ಯರು ಆಸಕ್ತಿ ತೋರಬೇಕಾಗಿದೆ. ನಮ್ಮ ಸಂಘವು 34 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದೆ. ಪ್ರಸ್ತುತ 1622 ಜನ ಸದಸ್ಯರಿದ್ದು 967.4 ಲಕ್ಷ ಠೇವಣಿ ಹೊಂದಿದೆ. 1590.47 ಲಕ್ಷ ಗಳ ವಿವಿಧ ಸಾಲಗಳನ್ನು ವಿತರಿಸಲಾಗಿದೆ. ಎಂದು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.


ಸಭೆಯಲ್ಲಿ ಮೊದಲಿಗೆ ಮಾಸ್ಟರ್ ಯತೀಶ್ ಕುಮಾರ ಪಿ.ಯು. ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೆಚ್  .ಕೆ.  ಸ್ವಾಗತಿಸಿ, ಮಹಾಸಭೆಯ ನೋಟಿಸನ್ನು ಓದಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಅಶೋಕ ಪಿ.ಎಂ, ನಿರ್ದೇಶಕರಾದ ಮೋನಪ್ಪ ನಿಡ್ಯಮಲೆ, ಪ್ರಸನ್ನ ನೆಕ್ಕಿಲ, ಗಾಂಧಿ ಪ್ರಸಾದ್ ಬಂಗಾರಕೋಡಿ, ದೀನರಾಜ್ ದೊಡ್ಡಡ್ಕ, ಜಯರಾಮ ಪಿ.ಟಿ, ಶೇಷಪ್ಪ ಎನ್.ವಿ,ಪ್ರಮೀಳಾ ಎನ್ ಬಂಗಾರಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ.ಎ., ದಾಸಪ್ಪ ಮಡಿವಾಳ, ಕಿರಣ ಬಂಗಾರಕೋಡಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾದ ರತ್ನಾಕರ ಗೌಡ ಬಳ್ಳಡ್ಕ, ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕರಾದ ಉದಯಕುಮಾರ ಕೆ.ಎ. ಉಪಸ್ಥಿತರಿದ್ದರು. ಸಭೆಯಲ್ಲಿ ಹೆಚ್ಚಿನ ಸದಸ್ಯರು ಪಾಲ್ಗೊಂಡು ಸಂಘದ ಸರ್ವತೋಮುಖ ಪ್ರಗತಿಯನ್ನು ಶ್ಲಾಘಿಸಿದರು. ಅಲ್ಲದೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು.
ನಿರ್ದೇಶಕರಾದ ಪ್ರಮೀಳಾ ಎನ್. ಬಂಗಾರಕೋಡಿ  ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಿ  ಸಹಭೋಜನ ಮಾಡಿ ತೆರಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.