ಐವರ್ನಾಡು ಸ.ಹಿ.ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿ ಸಭೆ

Advt_Headding_Middle

 

ಐವರ್ನಾಡು ಸ.ಹಿ.ಪ್ರಾ.ಶಾಲಾ ಶತಮಾನೋತ್ಸವ ಸಮಿತಿ
ಸಭೆಯು ಅ.12 ರಂದು ಸಮಿತಿ ಅಧ್ಯಕ್ಷರಾದ ದಿನೇಶ್ ಮಡ್ತಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು.
2020-21 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಧಾನಪರಿಷತ್ತು ಸದಸ್ಯರಾದ ಹರೀಶ್ ಕುಮಾರ್ ರೂ 3ಲಕ್ಷ ಅನುದಾನವನ್ನುಸ.ಹಿ.ಪ್ರಾ.ಶಾಲಾ ರಂಗಮಂದಿರದ ಮುಂದೆ ಸಭಾಂಗಣ ನಿರ್ಮಾಣಕ್ಕೆ ಒದಗಿಸಿದ್ದಾರೆ.
ಈ ಅನುದಾನ ಜತೆಗೆ ಶತಮಾನೋತ್ಸವ ಸಮಿತಿಯ ಉಳಿತಾ ಖಾತೆಯಲ್ಲಿರುವ ರೂ 2.5 ಲಕ್ಷವನ್ನು ಉಪಯೋಗಿಸಿಕೊಂಡು ಸಭಾಂಗಣವನ್ನು ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಂ ವೀರಪ್ಪ ಗೌಡರು ಸಭಾಂಗಣ ನಿರ್ಮಾಣಕ್ಕೆ ರೂ.2ಲಕ್ಷ ದೇಣಿಗೆಯನ್ನು ಘೋಷಿಸಿದರು.
ಸಮಿತಿ ಅಧ್ಯಕ್ಷ ದಿನೇಶ್ ಮಡ್ತಿಲರವರು ರೂ 50,000 ದೇಣಿಗೆಯನ್ನು ಘೋಷಿಸಿದರು.
ಸಭಾಂಗಣದ ಕಾಮಗಾರಿಯನ್ನು ಬೆಳ್ಳಾರೆಯ ಶ್ರೀರಾಮ ಇಂಡಸ್ಟ್ರೀಸ್‌ಗೆ ವಹಿಸಿಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.