ಕುಕ್ಕುಜಡ್ಕ ಪೈಲಾರು ರಸ್ತೆ ಮಧ್ಯೆ ನೇರಳಡ್ಕ ಸೇತುವೆ ಕಾಮಗಾರಿ ವಿಳಂಬ- ಸ್ಥಳೀಯರ ಆರೋಪ

Advt_Headding_Middle

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಪೈಲಾರು ರಸ್ತೆ ಮಧ್ಯೆ ನೇರಳಡ್ಕ ಎಂಬಲ್ಲಿಯ ಸೇತುವೆ ಕಾಮಗಾರಿ ಕೆಲ ಸ ವಿಳಂಬವಾಗುತ್ತಿದ್ದು ಈ ಭಾಗದ ನಾಗರಿಕರಿಂದ ಅಸಮಾಧಾನದ ಹೊಗೆ ಕಾಡಲಾರಂಭಿಸಿದೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಸಡಕ್ ಯೋಜನೆ ಯಡಿಯಲ್ಲಿ ಅಜ್ಜನಗದ್ದೆ ಪೈಲಾರು ಜಬಳೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕುಕ್ಕುಜಡ್ಕದಲ್ಲಿ ಸಚಿವರ ಮತ್ತು ಸಂಸದರ ಸಮ್ಮುಖದಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿತ್ತು.

ರಸ್ತೆ ಅಗಲೀಕರಣವಾಗಲಿದ್ದು ನೇರಳಡ್ಕ ಎಂಬಲ್ಲಿ ಕಿರಿದಾದ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆರಂಭದಲ್ಲಿ‌ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಬಳಿಕ‌ ನೂತನ ಸೇತುವೆ ನಿರ್ಮಾಣ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದ್ದು ಕಳೆದ 2 ತಿಂಗಳಿನಿಂದ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕಾಮಗಾರಿ ಸ್ಥಗಿತಗೊಂಡಿದೆ.ಇದರಿಂದ ಪೈಲಾರು ಭಾಗದ ನಾಗರಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಗತ್ಯ ವಸ್ತುಗಳಿಗಾಗಿ ಇನ್ನಿತರ ಕಚೇರಿ ಕೆಲಸಗಳಿಗಾಗಿ ಹಾಗೂ ಶಾಲೆಗೆ ವಿದ್ಯಾರ್ಥಿಗಳು ಬರಬೇಕಾದರೆ ಕಠಿಣ ರಸ್ತೆಯಲ್ಲಿ ಸುತ್ತು ಬಳಸಿ ಬರುವಂತ ಪರಿಸ್ಥಿತಿ ಇದೆ. ಕಡೆಯ ಪಕ್ಷ ಸೇತುವೆ ಕೆಡಹಿರುವ ಸ್ಥಳದಲ್ಲಿ ತಾತ್ಕಾಲಿಕ ಪರ್ಯಾಯ ರಸ್ತೆ ನಿರ್ಮಿಸಿ ಕೊಡಬೇಕೆಂಬ ಬೇಡಿಕೆ ಸ್ಥಳಿಯರದ್ದಾಗಿದೆ. ಸೇತುವೆ ನಿರ್ಮಾಣದ ಕೆಲಸ ಕಾರ್ಯ ತ್ವರಿತವಾಗಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ದೀಪಾವಳಿ ಹಬ್ಬ ಕಳೆದು ಹತ್ತು ದಿನದ ಒಳಗಾಗಿ ಈ ಭಾಗದ ಗ್ರಾಮಸ್ಥರೆಲ್ಲಾ ಸೇರಿ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.