ಕೆ.ಎಸ್‌.ಎಸ್. ಕಾಲೇಜಿನಲ್ಲಿ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ಪ್ರವೇಶಾತಿ ಆರಂಭ

Advt_Headding_Middle

 

2021-22ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಳದ ಆಡಳಿತಕ್ಕೊಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಆದೇಶಿಸಿದ್ದು, ವಿವಿಧ ಕೋರ್ಸ್‌ ಗಳಿಗೆ ಪ್ರಸಕ್ತ ಸಾಲಿಗೆ ಪ್ರವೇಶಾತಿ ಆರಂಭಗೊಂಡಿದೆ ಎಂದು ಕೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಗೋವಿಂದ ಎನ್.ಎಸ್. ಅವರು ಹೇಳಿದರು.

ಅವರು ಅ.26 ರಂದು ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2021-22ನೇ ಸಾಲಿನ ಜುಲೈ ಮತ್ತು ನವೆಂಬರ್ ಆವೃತ್ತಿಯ ಬಿಎ, ಬಿಕಾಂ, ಬಿಬಿಎ, ಎಂಎ, ಎಂಕಾಂ, ಬಿ ಲಿಬ್, ಎಂಬಿಎ, ಎಂ ಎಸ್‌ ಸಿ, ಎಂ ಲಿಬ್, ಪಿಜಿಡಿ ಕೋರ್ಸ್, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭಗೊಂಡಿದ್ದು, ಕೆಎಸ್‌ಎಸ್ ಕಾಲೇಜಿನ ಕಲಿಕಾರ್ಥಿ ಸಹಾಯಕ ಕೇಂದ್ರಕ್ಕೆ ಬೇಟಿ ನೀಡಿ ಪ್ರವೇಶಾತಿ ಪಡೆದುಕೊಳ್ಳಬಹುದು. ಅ.7ರಿಂದ ಪ್ರವೇಶಾತಿ ಆರಂಭಗೊಂಡಿದ್ದು, ನ.18 ಕೊನೆ ದಿನಾಂಕವಾಗಿದೆ. ಶುಲ್ಕ ಪಾವತಿಯೊಂದಿಗೆ ಪ್ರವೇಶಾತಿಯ ಅಂತಿಮ ದಿನಾಂಕ ಡಿ.15 ಎಂದು ಅವರು ತಿಳಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇರುವ ಕೋರ್ಸ್ಗಳಾದ ಯುಜಿ, ಪಿಜಿ, ಪಿಜಿ ಸರ್ಟಿಫಿಕೇಟ್ , ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ಬಿಎ, ಬಿಕಾಂ, ಬಿಎಸ್‌ಸಿ, ಬಿಬಿಎ, ಬಿಸಿಎ, ಬಿ ಲಿಬ್, ಬಿಎಸ್‌ಸಿ(ಎಚ್‌ಒಎನ್‌ಎಸ್) ಮಾಹಿತಿ ತಂತ್ರಜ್ಞಾನ, ಬಿಎಸ್‌ಸಿ(ಹೋಮ್‌ಸೈನ್ಸ್), ಬಿಎಸ್‌ಸಿ(ಜನರಲ್), ಬಿಎಡ್, ಎಂಎ-ಕನ್ನಡ, ಇಂಗ್ಲಿಷ್, ಹಿಂದಿ ಹೀಗೆ ಹಲವು ಕೊರ್ಸ್ಗಳು ಲಭ್ತವಿದ್ದು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.