ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಧಮಾಕ

Advt_Headding_Middle

ಸುಳ್ಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾದ ಶ್ರೀರಾಂ ಪೇಟೆಯ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡ್ಕಾರ್ ಎಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ಮತ್ತು ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದೆ. ಸಂಸ್ಥೆಯು 25 ವರ್ಷ ಪೂರ್ತಿಗೊಳಿಸಿ 26 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಬೆಳ್ಳಿ ವರ್ಷದ ಸಂಭ್ರಮವನ್ನೂ ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ಈ ವರ್ಷ ವಿಶೇಷ ಯೋಜನೆ ಹಮ್ಮಿಕೊಂಡಿದ್ದು 5.5 ಲಕ್ಷ ರೂಪಾಯಿ ವೆಚ್ಚದ ವಿಶೇಷ ಯೋಜನೆಯನ್ನು ಹಾಕಿಕೊಂಡಿದೆ.ಈ ಯೋಜನೆಯನ್ವಯ ಪ್ರತಿ ತಿಂಗಳು ರೂ 25 ಸಾವಿರ ಮೌಲ್ಯದ ವಸ್ತುಗಳನ್ನು ವಿಜೇತರಿಗೆ ನೀಡಲಾಗುತ್ತಿದೆ.ಈಗಾಗಲೇ ಹಲವಾರು ಮಂದಿ ಬಹುಮಾನ ವಿಜೇತರಾಗಿದ್ದಾರೆ. ಜನವರಿಯಲ್ಲಿ ಬಂಪರ್ ಬಹುಮಾನ ಡ್ರಾ ನಡೆಯಲಿದ್ದು,ಬಂಪರ್ ಬಹುಮಾನವಾಗಿ 2.50 ಲಕ್ಷ ಮೌಲ್ಯದ ಗ್ರಾಹಕರ ಆಯ್ಕೆಯ ವಸ್ತುಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ .ದೀಪಾವಳಿ ಧಮಾಕದ ಅಂಗವಾಗಿ ಸ್ಕ್ರಾಚ್ ಕಾರ್ಡಿನಲ್ಲಿ 10ಸಾವಿರ ದವರೆಗೆ ವಸ್ತುಗಳನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಕಲ್ಪಿಸಲಾಗಿದೆ.ಈ ಸಂದರ್ಭದಲ್ಲಿ ವಿನಿಮಯ ಕೊಡುಗೆ, ವಿಶೇಷ ರಿಯಾಯಿತಿ ,ಲಕ್ಷ ಗೆಲ್ಲುವ ಅವಕಾಶ ಗ್ರಾಹಕರಿಗೆ ಒದಗಿಸಲಾಗಿದೆ. ಇದಲ್ಲದೆ ಬಜಾಜ್ ಫೈನಾನ್ಸ್ ವತಿಯಿಂದ ಬಡ್ಡಿರಹಿತ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ವಿಶಾಲವಾದ ಮಳಿಗೆಯಲ್ಲಿ ಪ್ರಸಿದ್ಧ ಕಂಪೆನಿಯ ಎಲೆಕ್ಟ್ರಾನಿಕ್ ಮತ್ತು ಗೃಹೋಪ ಯೋಗಿ ವಸ್ತುಗಳು ಲಭ್ಯವಿದೆ. ಉತ್ಸವದಅಂಗವಾಗಿ ಗ್ರಾಹಕರಿಗೆ ನೆಚ್ಚಿನ ವಸ್ತುಗಳ ಅಪಾರ ಸಂಗ್ರಹ ಮಾಡಲಾಗಿದೆ ಎಂದು ಮಾಲಕರಾದ ದಿನೇಶ್ ಅಡ್ಕಾರ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.