ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

Advt_Headding_Middle

 

380.24 ಕೋಟಿ ವ್ಯವಹಾರ ರೂ. 1.18 ಕೋಟಿ ಲಾಭ

ಸದಸ್ಯರಿಗೆ ಶೇ.6 ಡಿವಿಡೆಂಡ್ ಘೋಷಣೆ

ಸನ್ಮಾನ ಕಾರ್ಯಕ್ರಮ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಅ.28 ರಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ.ವರದಿ ಮಂಡಿಸಿದರು.

ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ವರು ಸ್ವಾಗತಿಸಿ ವರದಿ ವರ್ಷದಲ್ಲಿ ಸಂಘವು 380.24 ಕೋಟಿ ವ್ಯವಹಾರ ನಡೆಸಿ ರೂ.1,18,17,641 ಲಾಭ ಗಳಿಸಿರುತ್ತದೆ.
ಸದಸ್ಯರಿಗೆ ಶೇ.5.5 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಸಭೆಯಲ್ಲಿ ಸದಸ್ಯರ ಬೇಡಿಕೆಯ ಮೇರೆಗೆ ಡಿವಿಡೆಂಡ್ ಶೇ.6 ಕ್ಕೆ ಹೆಚ್ಚಿಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಎ ವಿ ತೀರ್ಥರಾಮ, ಕೇಶವ ಭಟ್ ಮುಳಿಯ, ಮಂಜುಳಾ ಎಂ ಡಿ, ರವಿಪ್ರಕಾಶ್ ಬಿ ವಿ, ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಎ ಆರ್, ನವೀನ್ ಬಾಳುಗೋಡು, ಚಂದ್ರಾವತಿ ಎಂ, ಕುಂಞ, ಆನಂದ ವಿ, ಕಾರ್ಯನಿರ್ವಹಣಾಧಿಕಾರಿ ಶರತ್ ಎ ಕೆ ಉಪಸ್ಥಿತರಿದ್ದರು.

ಶೈಲೇಶ್ ಅಂಬೆಕಲ್ಲು, ವೆಂಕಟ್ ವಳಲಂಬೆ, ಲೊಕೇಶ್ವರ ಡಿ ಆರ್, ಶಿವರಾಮ ಕಮಿಲ, ಗಿರಿಧರ ಅಂಬೆಕಲ್ಲು, ರಾಜೇಶ್ ಅಂಬೆಕಲ್ಲು, ನಾಗಪ್ಪ, ಸೂರ್ಯನಾರಾಯಣ, ಲಕ್ಷ್ಮಣ ದೇವಸ್ಯ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ವಿವಿಧ ವಿಭಾಗಳಲ್ಲಿ ಹೆಚ್ಚು ವ್ಯಾಪಾರ ನೀಡಿದ ಕುಮಾರ್ ಸೌರಭ, ದೇವಿಪ್ರಸಾದ್ ಚಿಕ್ಮುಳಿ, ಚಲನ್ ಕೊಪ್ಪಡ್ಕ, ಚಂದ್ರಶೇಖರ ಪುರ್ಲುಮಕ್ಕಿ, ಉಣ್ಣಿಕೃಷ್ಣನ್ ಕಾನತೋಟ, ರಾಘವ ಗೌಡ ದಂಬೆಕೋಡಿ, ಕಮಲಾಕ್ಷ ಸಂಪ್ಯಾಡಿ, ತಿರುಮಲೇಶ್ವರ ಚಣಿಲ, ಮುಳಿಯ ತಿಮ್ಮಪಯ್ಯ, ಬೆಳ್ಯಪ್ಪ ಗೌಡ, ದಯಾನಂದ ಎಂ, ಲಿಂಗರಾಜ್, ಹರೀಶ್ ಪೂಜಾರಿಕೋಡಿ, ಶಿವಪ್ರಕಾಶ್ ಕಡಪಳ, ಪದ್ಮನಾಭ ಕಾಜಿಮಡ್ಕ, ದಾಮೋದರ ಮೀನಾಜೆ, ರಘುರಾಮ ಚಣಿಲ ಹಾಗೂ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಶ್ರೀ ವಳಲಂಬೆ ಶಂಖಪಾಲ ದೇವಸ್ಥಾನ, ಶ್ರೀ ಉಳ್ಳಾಕುಲು, ಮಲೆ ದೈವ,ಅಜ್ಜಿದೈವಸ್ಥಾನ ಪೈಕ, ಶ್ರೀ ರಾಜ್ಯದೈವ ಮತ್ತು ಪುರುಷ ದೈವ ಕಂದ್ರಪ್ಪಾಡಿ ಸಂಸ್ಥೆಯವರನ್ನು ಗೌರವಿಸಲಾಯಿತು. ಸಭೆಯಲ್ಲಿ ತೆಂಗು ಬೆಲೆಯ ಬಗ್ಗೆ ಮಾಹಿತಿ ನೀಡಿಲಾಯಿತು. ಕಿಶೋರ್‍ ಕುಮಾರ್ ಬೊಮ್ಮದೇರ ಪೈಕ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.