ಸುಳ್ಯಕ್ಕೆ ಶುದ್ದ ನೀರು ವಿತರಿಸಲು ಆಗ್ರಹಿಸಿ‌ ನ.ಪಂ. ನಲ್ಲಿ ವಿಪಕ್ಷದಿಂದ ಪ್ರತಿಭಟನೆ

Advt_Headding_Middle

 

 

ನೀರು ತುಂಬಿದ ಬಾಟಲಿ ಹಿಡಿದು ಧರಣಿ

ಆಡಳಿತ ಸದಸ್ಯರ ರಾಜೀನಾಮೆಗೆ ಆಗ್ರಹ : ಚುನಾವಣೆಗೆ ಹೋಗೋಣವೆಂದು ಸಲಹೆ

ನಗರಕ್ಕೆ ಶುದ್ಧ ಕುಡಿಯುವ ನೀರು‌ ವಿತರಿಸಬೇಕೆಂದು ಆಗ್ರಹಿಸಿ ನ.ಪಂ. ವಿಪಕ್ಷ ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಕೆ.ಎಸ್. ಉಮ್ಮರ್ ಇಂದು ಪ್ರತಿಭಟನೆ ನಡೆಸಿದರು.

ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಶುದ್ದ ನೀರು ವಿತರಿಸಲು ಆಗ್ರಹಿಸಿ ನ.ಪಂ. ಎದುರು‌ ಧರಣಿ ಕುಳಿತ‌ ಸದಸ್ಯರು ಶುದ್ದ ನೀರಿಗಾಗಿ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸದಸ್ಯ ಶರೀಫ್ ಕಂಠಿಯವರು, ಕಳೆದ ಒಂದು ತಿಂಗಳಿನಿಂದ ಮಣ್ಣು ಮಿಶ್ರಿತ ನೀರು ಮನೆಗಳಿಗೆ ನಳ್ಳಿಯಲ್ಲಿ ಬರುತ್ತಿದೆ. ಸರಿ ಪಡಿಸಲು ಮನವಿ ಮಾಡಿದರೂ ಮಾಡುತ್ತಿಲ್ಲ. ಶೌಚಾಲಯ ಕ್ಕೇ ಉಪಯೋಗಿಸಲೂ ಇದು ಯೋಗ್ಯವಲ್ಲದ ನೀರನ್ನು ಜನರಿಗೆ ಕುಡಿಯಲು ನೀಡುತ್ತಿದ್ದಾರೆ ಎಂದು ಹೇಳಿದರು.


ಡೇವಿಡ್ ಧೀರಾ ಕ್ರಾಸ್ತ ಮಾತನಾಡಿ, ನ.ಪಂ. ನಲ್ಲಿ ಮೂರು ಅವಧಿಯಿಂದ ಬಿಜೆಪಿ ಆಡಳಿತದಲ್ಲಿದೆ. ಕಾಂಗ್ರೆಸ್ ನ್ನು ಪ್ರಶ್ನಿಸುವ ಬಿಜೆಪಿಯವರು ನಗರದಲ್ಲಿ ಮಾಡಿದ್ದೇನು?. ಜನರಿಗೆ ನಿರಂತರ ಕೊಳಕು ನೀರು ನೀಡಿ ಜನರನ್ನು ಸಾಯಿಸುವ ಪರಿಸ್ಥಿತಿಯನ್ನು ಆಡಳಿತ ಮಾಡುತ್ತಿದೆ. ನದಿಯ ನೀರು ಶುದ್ಧ ಮಾಡಿ ಕೊಡಲು ಸಾಧ್ಯವಾಗದಿದ್ದರೆ ಪ್ರತೀ ವಾರ್ಡ್ ನಲ್ಲಿ ಕೊಳವೆ ಬಾವಿ ತೆಗೆದು ನೀರು ಕೊಡಲಿ ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಎಂ. ವೆಂಕಪ್ಪ ಗೌಡರು ಮಾತನಾಡಿ, ನಾವು ಜನರ ಧ್ವನಿಯಾಗಿ ಬಂದರೆ ನಮ್ಮ ಅಹವಾಲು ಸ್ವೀಕರಿಸಲು ಅಧಿಕಾರಿಗಳು, ಅಧ್ಯಕ್ಷರು ಇಲ್ಲದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ನೀರಿನ ಅವ್ಯವಸ್ಥೆ ಸರಿ ಪಡಿಸಲು ಇವರಿಗೆ ಸಾಧ್ಯವಾಗುತ್ತಿಲ್ಲ. ಅಹವಾಲು ಸ್ವೀಕರಿಸಲು ಬಾರದೆ ಅಹಂಕಾರ ಭಾವನೆ ತೋರಿಸ್ತಾ ಇದ್ದಾರೆ. ನ.ಪಂ. ಸಾಮಾನ್ಯ ಸಭೆಯನ್ನು ಕರೆಯದೇ ಸುಮ್ಮನೇ ಕುಳಿತಿದ್ದಾರೆ. ಮಣ್ಣು ಮಿಶ್ರಿತ ಕೊಳಕು ನೀಡಿ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಇದರ ವಿರುದ್ಧ ನಿರಂತರ ಪ್ರತಿಭಟನೆ ನಡೆಯುತ್ತದೆ. ಶುದ್ದ ನೀರಿನ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ಇಲ್ಲಿ ಶಾಸಕರು ಸಚಿವರಾಗಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

2004 ನಂತರ ಇಲ್ಲಿ ಬಿಜೆಪಿ ಆಡಳಿತ ಇದೆ. ಇಲ್ಲಿಯ ಯಾವ ವ್ಯವಸ್ಥೆ ಬೇಕು ಎಂದು ನಿಮಗೆ ಗೊತ್ತಿಲ್ಲವೇ? ಯಾಕೆ ನೀವು ಮಾಡಿಲ್ಲ. ನಿಮಗೆ ಜನರ ಬಗ್ಗೆ ಕಾಳಜಿ ಇಲ್ಲವೇ. ನಿಮ್ಮ ಭಾಷಣಗಳು ನಮಗೆ ಬೇಡ. ಜನರಿಗೆ ಯೋಗ್ಯವಾದ ವ್ಯವಸ್ಥೆ ಮಾಡಿ ಎಂದು ಹೇಳಿದರು.

ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ, “ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗದೆ ನಗರದ ಆಡಳಿತ ವಿಫಲವಾಗಿದೆ. ಜನರಿಗೆ ಬೇಕಾದ್ದನ್ನು ಕೊಡಲು ಸಾಧ್ಯವಾಗದಿದ್ದರೆ ನೀವೆ ಹೇಳಿದಂತೆ ಆಡಳಿತದ ಎಲ್ಲರೂ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿ. ನಾವು ಕೂಡಾ ರಾಜೀನಾಮೆ ಕೊಡುತ್ತೇವೆ. ಮತ್ತೆ ಚುನಾವಣೆಗೆ ಹೋಗೋಣ. ಬಳಿಕ ಜನರೇ ಆಯ್ಕೆ ಮಾಡಲಿ. ಒಂದು ವಾರದೊಳಗೆ ಸಾಮಾನ್ಯ ಸಭೆ ಕರೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನತೆಗೆ ನ್ಯಾಯ ಸಿಗುವ ತನಕ ನಾವು ನ.ಪಂ. ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆ ಬಳಿಕ ಸದಸ್ಯರು ತಂದ ನೀರಿನ ಬಾಟಲಿಯನ್ನು ಮುಖ್ಯಾಧಿಕಾರಿಗಳ ಹಾಗೂ ಅಧ್ಯಕ್ಷರ ಛೇಂಬರ್ ನಲ್ಲಿ ಇಟ್ಟರು.

ಕೊಠಡಿ ಕೊಡಿ : ನಗರದಲ್ಲಿ ಆಡಳಿತದಲ್ಲಿದ್ದವರು ಕೆಲಸ ಮಾಡುತ್ತಿಲ್ಲ. ನಮಗೆ ಒಂದು ಕೊಠಡಿ ಕೊಡಿ. ನಾವು ಅಲ್ಲಿ ಕುಳಿತು ಜನರ ಕಷ್ಟ ಸುಖಗಳನ್ನು ಕೇಳಿ ಸಮಸ್ಯೆಗೆ ಸ್ಪಂದಿಸಲು ತಯಾರಿದ್ದೇವೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಬಳಿಕ ಜಿಲ್ಲಾಧಿಕಾರಿ ಗಳಿಗೆ ಬರೆಯಲಿದ್ದೇವೆ ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.