ನ. 8 : ಬೆಳ್ಳಾರೆಯಲ್ಲಿ ಅಲ್ಪಸಂಖ್ಯಾತರ ದೊಡ್ಡಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘದ ನೂತನ ಶಾಖೆ ಶುಭಾರಂಭ

Advt_Headding_Middle

 

ನ. 8 ರಂದು ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಅಲ್ಪಸಂಖ್ಯಾತರ ದೊಡ್ಡಪ್ರಮಾಣದ ವಿವಿದೋದ್ದೇಶ ಸಹಕಾರಿ ಸಂಘ ನಿ ಇದರ ನೂತನ ಶಾಖೆ ಶುಭಾರಂಭಗೊಳ್ಳಲಿದೆ ಎಂದು ಅಲ್ಪಸಂಖ್ಯಾತರ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಳ್ಯ ಸಹಕಾರಿ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಇವರು ನಮ್ಮ ಸಂಸ್ಥೆಯು 1997 ರಲ್ಲಿ ಪ್ರಾರಂಭಗೊಂಡು ಸುದೀರ್ಘ 24 ವರ್ಷಗಳನ್ನು ಪೂರೈಸಿದೆ. 25ನೆಯ ವರ್ಷಕ್ಕೆ ಕಾಲಿಡುತ್ತಿರುವ ನಮ್ಮ ಸಹಕಾರಿ ಸಂಘವು ಅಲ್ಪಸಂಖ್ಯಾತರ ವರ್ಗದ ಜನರ ಅಭಿವೃದ್ಧಿಗಾಗಿ ಹಾಗೂ ಪ್ರಗತಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು. ಪ್ರಸ್ತುತ ಸಂಘದಲ್ಲಿ ಒಟ್ಟು 2404 ಸದಸ್ಯರಿದ್ದು ಸಂಘದ ಹಿಂದಿನ ಸಾಲಿನಲ್ಲಿ ಶೇಕಡ 10 ರಷ್ಟು ಡಿವಿಡೆಂಟ್ ನೀಡಿರುತ್ತೇವೆ. ಕಳೆದ ಮಾರ್ಚ್ 31ಕ್ಕೆ ಸಂಘದ ಲಾಭವು 741927 ರೂ ಇದ್ದು, ಪಾಲು ಬಂಡವಾಳವು 2540283 ರೂ ಇರುತ್ತದೆ. ವಿವಿಧ ಠೇವಣಾತಿಗಳಿಗೆ ವಾರ್ಷಿಕ ಶೇಕಡಾ 5 ರಿಂದ 10 ರ ತನಕ ಬಡ್ಡಿ ನೀಡುತ್ತಿದ್ದೇವೆ. ಠೇವಣಿಗಳು ರೂ 2,8164623 ಮತ್ತು ನಿಧಿಗಳು ರೂ 3,300265 ರಷ್ಟು ಇರುತ್ತದೆ.2,9326674 ರೂ ಸಾಲ ವಿತರಿಸಲಾಗಿದ್ದು ಕಳೆದ ಮಾರ್ಚ್ ತಿಂಗಳಿಗೆ ಸಂಘದ ವ್ಯವಹಾರವು ರೂ 237812947 ಇರುತ್ತದೆ ಎಂದು ಹೇಳಿದರು. ಪ್ರಸ್ತುತ ಸಂಘದಲ್ಲಿ ಜಾಮೀನು ಸಾಲ,ಅಡಮಾನ ಸಾಲ, ಆಸ್ತಿ ಅಡವು ಸಾಲ, ವಾಹನ ಸಾಲ, ಯಂತ್ರೋಪಕರಣ ಸಾಲ, ತ್ವರಿತಗತಿಯಲ್ಲಿ ಚಿನ್ನದ ಸಾಲವನ್ನು ನೀಡಲಾಗಿದ್ದು ಕಳೆದ ಸಾಲಿನಲ್ಲಿ ಉತ್ತಮ ವಸೂಲಾತಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಈ ಎಲ್ಲಾ ಬೆಳವಣಿಗೆಯಿಂದ ನಮ್ಮ ನೂತನ ಶಾಖೆಯು ಬೆಳ್ಳಾರೆ ಯಲ್ಲಿ ಪ್ರಾರಂಭಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರೆಯಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಬೆಳ್ಳಾರೆಯ ನೂತನ ಶಾಖಾ ಉದ್ಘಾಟನ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್, ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ರಾಜಕೀಯ ಕಾರ್ಯದರ್ಶಿ ಐವನ್ ಡಿಸೋಜಾ, ಮಾಜಿ ಸಚಿವರಾದ ಬಿ ರಮನಾಥ ರೈ, ಹಾಗೂ ರಾಜಕೀಯ ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಗಾಗಿ ಸೇವೆಸಲ್ಲಿಸಿದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮೊಹಿಯದ್ದೀನ್ ಫ್ಯಾನ್ಸಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಜ್ವಲ್ ನಾಯಕ್, ನಿರ್ದೇಶಕರುಗಳಾದ ಶಂಸುದ್ದೀನ್ ಅರಂಬೂರು, ಆರ್ ಕೆ ಮಹಮ್ಮದ್, ಹಸೈನಾರ್ ಕಲ್ಲುಗುಂಡಿ, ಜಾರ್ಜ್ ಡಿಸೋಜ, ಆಮಿನಾ ಜಯನಗರ, ಜೂಲಿಯಾನ ಕ್ರಾಸ್ತ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.