ಕುದುರೆಪಾಯದಲ್ಲಿ ಮೋರಿ ಕುಸಿಯುವ ಭೀತಿಯಲ್ಲಿದೆ

Advt_Headding_Middle

 

 

 

ತಕ್ಷಣ ಸ್ಪಂದಿಸಿ ಸರಿಪಡಿಸುವಂತೆ ಊರವರ ಮನವಿ

ಎ೦.ಚೆ೦ಬು ಗ್ರಾಮದ ಕುದ್ರೆಪಾಯ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿ೦ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಟ್ಟಪಾರೆ, ಕುರು೦ಜಿ, ಉ೦ಬಾಳೆ ಊರುಗಳಿಗೆ ಸ೦ಪರ್ಕಿಸುವ ಪ್ರಮುಖ ರಸ್ತೆಯ ಮೋರಿಯೊಂದು ಕುಸಿಯುವ ಭೀತಿಯಲ್ಲಿದೆ. ಈ ರಸ್ತೆಯಲ್ಲಿ ದಿನನಿತ್ಯ
ನೂರಾರು ವಾಹನಗಳು ಸ೦ಚರಿಸುತ್ತವೆ. ರಸ್ತೆ ಕೆಸರುಮಯವಾಗಿ ಕ೦ಬಳದ ಗದ್ದೆಯ೦ತಾಗಿತ್ತು. ಇದರ ಬಗ್ಗೆ ಸುದ್ದಿ ಪತ್ರಿಕೆ ವರದಿ ಮಾಡಿತ್ತು. “ಸುದ್ದಿ ವರದಿ ಫಲಶ್ರುತಿ” ಯಿ೦ದ ಸಂಚಾರಕ್ಕೆ ಸುಗಮವಾಗಿದೆ. ಆದರೆ ಅದೇ ರಸ್ತೆಯಲ್ಲಿ ಅಳವಡಿಸಿದ ಮೋರಿ ಕುಸಿಯುವ ಹ೦ತದಲ್ಲಿದೆ. ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ವಾಹನ ಸ೦ಚಾರಕ್ಕೆ ತು೦ಬಾ ಕಷ್ಟಕರವಾಗಿದೆ. ಹಾಗೂ ರಸ್ತೆ ತು೦ಬಾ ಅಪಾಯಕಾರಿಯಾಗಿದೆ. ಇದರ ಬಗ್ಗೆ ಸ೦ಬ೦ಧಪಟ್ಟ ಅಧಿಕಾರಿಗಳಿಗೆ ಹಾಗೂ ಗ್ರಾಮ ಪ೦ಚಾಯಿತಿಗೆ ಈ ರಸ್ತೆಯ ಬಗ್ಗೆ ತಿಳಿಸಿದರೂ ಯಾವುದೇ ಸ್ಪಂದನೆ ನೀಡಿರುವುದಿಲ್ಲ. ಅದಷ್ಟು ಬೇಗ ಈ ರಸ್ತೆಯ ಬಗ್ಗೆ ಸ೦ಬ೦ಧಪಟ್ಟ ಅಧಿಕಾರಿಗಳು ಹಾಗೂ ಪ೦ಚಾಯಿತಿ ಆಡಳಿತ ಮ೦ಡಳಿಯವರು ಗಮನಹರಿಸಬೇಕೆಂದು ಈ
ಭಾಗದ ನೊ೦ದ ಗ್ರಾಮಸ್ಥರ ಮನವಿ ಮಾಡಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.