ಮರ್ಕಂಜ ಅಂಗನವಾಡಿ ಶಾಲಾ ಶಿಕ್ಷಕಿ ಯಶೋದ ಎ.ಅಡ್ತಲೆ ನಿವೃತ್ತಿ

Advt_Headding_Middle

 

 

ಮರ್ಕಂಜ ಅಂಗನವಾಡಿ ಶಾಲಾ ಶಿಕ್ಷಕಿ ಯಶೋದ ಎ.ಅಡ್ತಲೆರವರು ತಮ್ಮ ೩೭ ವರ್ಷದ ಸುದೀರ್ಘ ಸೇವೆಯಿಂದ ಅ.೨೮ರಂದು ನಿವೃತ್ತಿ ಹೊಂದಿದರು.

ಇವರು ೧೯೮೩ರಲ್ಲಿ ಮಣಿಪಾಲದಲ್ಲಿ ಅಂಗನವಾಡಿ ಶಿಕ್ಷಕಿ ತರಬೇತಿ ಪಡೆದರು. ೧೯೮೪ರಲ್ಲಿ ಮಿತ್ತಡ್ಕ ಅಂಗನವಾಡಿ ಶಾಲಾ ಶಿಕ್ಷಿಕಿಯಾಗಿ ೨ವರುಷ ಕರ್ತವ್ಯ ನಿರ್ವಹಿಸಿ, ಬಳಿಕ ೧೯೮೬ರಲ್ಲಿ ಮರ್ಕಂಜ ಅಂಗನವಾಡಿ ಕೇಂದ್ರಕ್ಕೆ ಸೇರ್ಪಡೆಗೊಂಡರು.
ಇಲ್ಲಿ ೩೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸೆ.೨೮ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.

ಗ್ರಾಮದಲ್ಲಿ ಮಹಿಳಾ ಮಂಡಳಿ, ಯುವತಿ ಮಂಡಳಿಗಳ ರಚನೆ ಮಾಡಿ ಹಲವಾರು ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ನೀಡಿ ಪ್ರಸಿದ್ಧಿ ಪಡೆದವರು. ಇದರೊಂದಿಗೆ ಅಂಗನವಾಡಿ ಮಕ್ಕಳಿಗೆ ಕಲಿಕೆಯ ಜೊತೆಗೆ ಡಾನ್ಸ್ ಕಲಿಸಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಗೂ ದೇವಾಲಯದ ಜಾತ್ರೋತ್ಸವದ ಸಂದರ್ಭದಲ್ಲಿ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಸುತ್ತಿದ್ದರು. ಒಟ್ಟಿನಲ್ಲಿ ತಮ್ಮ ೩೭ ವರ್ಷಗಳ ವೃತ್ತಿ ಜೀವನದಲ್ಲಿ ಮರ್ಕಂಜ ಗ್ರಾಮದ ಶೈಕ್ಷಣಿಕ, ಆರೋಗ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೂರಾರು ಪುಟಾಣಿ ಹಾಗೂ ಗ್ರಾಮಸ್ಥರಿಗೆ ದಾರಿದೀಪವಾಗಿದ್ದರು.
ಇವರು ನಿವೃತ್ತ ಶಿಕ್ಷಕ ಅಡ್ತಲೆ ಜಯರಾಮ ಮಾಸ್ತರ್‌ರವರ ಪತ್ನಿ. ಇವರಿಗೆ ಮೂವರು ಮಕ್ಕಳು. ಮಗಳು ದೀಪಿಕಾ ಅಡ್ತಲೆ ಸಾಫ್ಟ್ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರ ಪ್ರದೀಪ್ ಅಡ್ತಲೆ ಇಂಟೀರಿಯರ್ ಆರ್ಕಿಟೆಕ್ಟ್ ಆಗಿ ಊರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇನ್ನೋರ್ವ ಪುತ್ರ ಸಂದೀಪ್ ಅಡ್ತಲೆ ಬೆಂಗಳೂರಿನ ರವಿಂದು ಟೊಯೋಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.