ಅಂಚೆ ಇಲಾಖೆ ಸಿಬ್ಬಂದಿ ಎಂ. ಎಲ್. ನಾರಾಯಣ ನಿವೃತ್ತಿ

Advt_Headding_Middle

 

 

ಸುಳ್ಯ ಉಪವಿಭಾಗ ಅಂಚೆ ಕಛೇರಿಯಲ್ಲಿ ಎಂ.ಟಿ.ಎಸ್. ಆಗಿದ್ದ ಎಂ. ಎಲ್. ನಾರಾಯಣ ತೊಡಿಕಾನ ಇವರು ಅ. 30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ತೊಡಿಕಾನ ಗ್ರಾಮದ ಮಾವಿನಕಟ್ಟೆಯವರಾಗಿರುವ ಎಂ. ಎಲ್. ನಾರಾಯಣ , ತೊಡಿಕಾನ ಶಾಖಾ ಅಂಚೆ ಕಛೇರಿಯಲ್ಲಿ 38 ವರ್ಷ ಸೇವೆ ಸಲ್ಲಿಸಿ ಬಳಿಕ ಪದೋನ್ನತಿ ಹೊಂದಿ ಪುತ್ತೂರು ಪ್ರಧಾನ ಅಂಚೆ ಕಛೇರಿಗೆ ಎಂ. ಟಿ. ಎಸ್. ಆಗಿ ವರ್ಗಾವಣೆಗೊಂಡಿದ್ದರು. ಅಲ್ಲಿ 1 ವರ್ಷ ಸೇವೆ ಸಲ್ಲಿಸಿ, ಬಳಿಕ ಸುಳ್ಯ ಅಂಚೆ ಕಛೇರಿಗೆ ವರ್ಗಾವಣೆಯಾಗಿದ್ದರು. ಸುಳ್ಯದಲ್ಲಿ ಒಂದು ವರ್ಷ, ಹೀಗೆ ಸುಧೀರ್ಘ 40 ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ನಾರಾಯಣರವರ ಪತ್ನಿ ಎಂ.ಎಲ್. ವೇದಾವತಿ ಗೃಹಿಣಿಯಾಗಿದ್ದಾರೆ. ಹಿರಿಯ ಪುತ್ರಿ ಎಂ. ಎಲ್. ವಿನುತಾರಿಗೆ ವಿವಾಹವಾಗಿದ್ದು , ಕಿರಿಯ ಪುತ್ರಿ ಎಂ.ಎಲ್. ಅಂಜಲಿ ಅರಂತೋಡು ಎನ್.ಯಂ. ಪಿ.ಯು. ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಎಂ. ಎಲ್. ನಾರಾಯಣರವರು ತೊಡಿಕಾನದಲ್ಲಿ ಸುದ್ದಿ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರು. ತೊಡಿಕಾನ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು.

ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ

ಅಂಚೆ ಇಲಾಖೆಯ ಎಂ.ಟಿ.ಎಸ್ ವೃತ್ತಿಯಿಂದ ನಿವೃತ್ತಿಯಾದ ಎಂ . ಎಲ್. ನಾರಾಯಣರವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಸುಳ್ಯ ಮುಖ್ಯ ಅಂಚೆ ಕಛೇರಿಯಲ್ಲಿ ಅ. 30 ರಂದು ನಡೆಯಿತು.
ಪ್ರಧಾನ ಅಂಚೆ ಪಾಲಕರಾದ ಶ್ರೀಮತಿ ಯಶೋಧ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಉಪ ವಿಭಾಗದ ಅಂಚೆ ನಿರೀಕ್ಷಕ ಸುದೀಪ್ ಕುಮಾರ್ ಹಾಗೂ ಉಪ್ಪಿನಂಗಡಿ ಅಂಚೆ ಪಾಲಕರಾದ ನರಸಿಂಹ ಕಾಮತ್ ನಾರಾಯಣ ದಂಪತಿಗಳನ್ನು ಸನ್ಮಾನಿಸಿದರು. ಸುಳ್ಯ ಅಂಚೆ ಕಛೇರಿ ಸಿಬ್ಬಂದಿಗಳು , ಶಾಖಾ ಅಂಚೆ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಳ್ಯ ಅಂಚೆ ಕಛೇರಿಯ ಮೋಹನ್ ಸ್ವಾಗತಿಸಿ , ಪ್ರವೀಣ್ ವಂದಿಸಿದರು. ಬಾಲಕೃಷ್ಣ ಅಡ್ಪಂಗಾಯ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.