ಆಲೆಟ್ಟಿ ಪಂಚಾಯತ್ ಸಮಾನ್ಯ ಸಭೆ

Advt_Headding_Middle

ಸಿಬ್ಬಂದಿ ವೇತನ ಹೆಚ್ಚಳಕ್ಕೆ ಸದಸ್ಯರೊಬ್ಬರ ಆಕ್ಷೇಪ

ಆಲೆಟ್ಟಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂ.ಅಧ್ಯಕ್ಷೆ
ಪುಷ್ಪಾವತಿ ಕುಡೆಕಲ್ಲು ರವರ ಅದ್ಯಕ್ಷತೆಯಲ್ಲಿ ಅ.೨೫ ರಂದು ನಡೆಯಿತು. 1500 ಕಸಿ ಹಣ್ಣಿನ ಗಿಡ ಮತ್ತು ತೆಂಗಿನಗಿಡ ವನ್ನು ಪ್ರತಿ ವಾರ್ಡ್ ಗೆ ವಿತರಿಸಲು ಈ ಸಂದರ್ಭ ನಿರ್ಧರಿಸಲಾಯಿತು. ಬೀದಿ ದೀಪ ದುರಸ್ತಿ ಮಾಡಿಕೊಡುವಂತೆ ಸದಸ್ಯರು ಒತ್ತಾಯಿಸಿದರು . ಕಳೆದ ಅವಧಿಯ ಕೆಲಸಗಳು ಬಾಕಿಯಿರುವ ಬಗ್ಗೆ ಕೂಡಲೆ ಕೆಲಸ ಆರಂಭಿಸುವಂತೆ ತಿರ್ಮಾನಿಸಲಾಯಿತು. ಗ್ರಾಮದ ಕೆಲವು ತ್ಯಾಜ್ಯ ಎಸೆದು ಪರಿಸರ ನಾಶ ಮಾಡುತ್ತಿರುವುದರ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ ಪಂಚಾಯತ್ ನಿಂದ ಬಹುಮಾನ‌ ನೀಡುವ ಘೋಷಣೆ ಮಾಡುವಂತೆ ತೀರ್ಮಾನಿಸಬೇಜೆಂದು ಸದಸ್ಯರು ಒತ್ತಾಯಿಸಿದರು. ಜಲಜೀವನ್ ಮೆಶಿನ್ ಯೊಜನೆಯಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ವಾರ್ಡ್ ಸಮೀಕ್ಷೆ ನಡೆಸುವಂತೆ ಮಾಹಿತಿ ನೀಡಲಾಯಿತು.ನೀರಿನ ಬಿಲ್ ಕಲೆಕ್ಟ್ ಮಾಡುವ ಸಿಬಂದಿಗೆ ಐಡೆಂಟಿಟಿ ಕಾರ್ಡ್ ಕೊಡದಿರುವ ಬಗ್ಗೆ ಚರ್ಚೆ ನಡೆಯಿತು. ಕಾರ್ಡ್ ವಿತರಿಸುವ ಭರವಸೆ ಪಿಡಿಒ ನೀಡಿದರು. ತೆರಿಗೆ ಸಂಗ್ರಹದ ಬಗ್ಗೆ ಚರ್ಚಿಸಲಾಯಿತು . ಸದಸ್ಯರಾಗಿ 9 ತಿಂಗಳು ಅದರೂ ಇನ್ನು ನಾಮ ಫಲಕ‌ ಮಾಡದಿರುವ ಬಗ್ಗೆ ಅಧ್ಯಕ್ಷರನ್ನು ,ಪಿಡಿಓರನ್ನು ಸದಸ್ಯರು ಪ್ರಶ್ನಿಸಿದರು. ಸಿಬಂದಿಗಳ ಸಂಬಳ ಜಾಸ್ತಿ ಮಾಡುವಂತೆ ಕೆಲವು ಸದಸ್ಯರು ಕೇಳಿಕೊಂಡಾಗ ಚರ್ಚೆಗಳು ನಡೆಯಿತು. ಸಂಪೂರ್ಣವಾಗಿ ಶೇ. 100 ರಷ್ಟು ತೆರಿಗೆ ಸಂಗ್ರಹ ಅದಮೇಲೆಯೇ ಸಂಬಳ ಜಾಸ್ತಿ ಮಾಡುವಂತೆ ಸದಸ್ಯ ಧರ್ಮಪಾಲರು ಅಭಿಪ್ರಾಯ ವ್ಯಕ್ತಪಡಿಸಿದರು. ಉಪಾಧ್ಯಕ್ಷ ದಿನೇಶ್ ಕಣಕ್ಕೂರು ರವರು ಪ್ರಸ್ತುತ ರೂ. 1000 ದಂತೆ ವೇತನ ಜಾಸ್ತಿ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಅದಕ್ಕೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಬೆಂಬಲ ಸೂಚಿಸಿದರು . ಸದಸ್ಯರಾದ ಮುತ್ತಪ್ಪ ಪೂಜಾರಿ ಸತ್ಯಕುಮರ್ ಅಡಿಂಜರವರು ಸಂಬಳ ಏರಿಕೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಧರ್ಮಪಾಲ ಕೊಯಿಂಗಾಜೆಯವರು ಪ್ರಸ್ತುತ ವೇತನ ಏರಿಕೆ ಮಾಡುವುದಕ್ಕೆ ನನ್ನ ವಿರೋಧವಿದೆ . ಏಕೆಂದರೆ ನಾವು ವಾರ್ಡ್ ನಲ್ಲಿ ಕೆಲಸ ಮಾಡಬೇಕೆಂದರೆ ಶೇ. 100 ರಷ್ಟು ತೆರಿಗೆ ಸಂಗ್ರಹ ಅದರೆ ಇನ್ನಷ್ಟು ಅನುದಾನ ನಮಗೆ ಸಿಗುತ್ತದೆ . ಇದರಿಂದ ಎಲ್ಲಾ ಸದಸ್ಯರಿಗೂ ವಾರ್ಡ್ ನಲ್ಲಿ ಕೆಲಸ ಮಾಡಲು ಉಪಯೋಗವಾಗುತ್ತದೆ. ಈಗ ಸಂಬಳ ಏರಿಕೆ ಮಾಡಲು ಸರ್ಕಾರದ ಆದೇಶವೇನಾದರೂ ಇದೆಯೇ ಎಂದು ಪ್ರಶ್ನಿಸಿದರು .
ಏಕಾ ಏಕಿ ಸಂಬಳ ಏರಿಕೆ ಮಾಡುವುದಕ್ಕೆ ಧರ್ಮಪಾಲ ಕೊಯಿಂಗಾಜೆಯವರ ವಿರೋಧವಿರುತ್ತದೆ ಎಂದು ನಿರ್ಣಯ ಪುಸ್ತಕದಲ್ಲಿ ಬರೆಯುವಂತೆ ಹೇಳಿದರು . ಸದಸ್ಯರೊಬ್ಬರ ವಿರೋಧವಿದ್ದರೂ ವೇತನ‌ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳುವ ಬಗ್ಗೆ ಉಳಿದ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ನಮ್ಮ ಪಂಚಾಯತ್ ಯಾಕೆ ಗಾಂಧಿ ಪುರಸ್ಕಾರಕ್ಕೆ ಅರ್ಜಿ ಹಾಕಿಲ್ಲ ? ಮನೆ ಮನೆಗೆ ತೆರಳಿ ತೆರಿಗೆ ಯಾಕೆ ಸಂಗ್ರಹ ಮಾಡುತ್ತಿಲ್ಲ ? ಎಸ್ಕ್ರೋ ಖಾತೆಯಲ್ಲಿರುವ ಹಣಕ್ಕೆ ಯಾವಾಗ ಕ್ರಿಯಾಯೋಜನೆ ಮಾಡುತ್ತಿರಿ ? ಎಂದು ಸದಸ್ಯರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ
ಅದ್ಯಕ್ಷರು ಮತ್ತು ಪಿಡಿಒರವರು ಮುಂದಿನ ತಿಂಗಳು ಮಾಡುತ್ತೇವೆ ಎಂದು ಉತ್ತರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, , ಪಿಡಿಒ ಕೀರ್ತಿ ಪ್ರಸಾದ್, ‌ ಕಾರ್ಯದರ್ಶಿ ಸೃಜನ್ ಉಪಸ್ಥಿತರಿದ್ದರು. ಸಭೆಯಲ್ಲಿ‌ ಪಂಚಾಯತ್ ಸದಸ್ಯರು ಹಾಜರಿದ್ದರು .

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.