ಕೆವಿಜಿ ಆಯರ್ವೇದ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆ

Advt_Headding_Middle

 

ಸುಳ್ಯ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿನವನ್ನು ಅ.೩೧ ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಲೀಲಾಧರ್ ಡಿ.ವಿ ಉಧ್ಘಾಟಿಸಿ, ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ರಚನಾ ಶಾರೀರ ವಿಭಾಗದ ಪ್ರೋಪೆಸರ್ ಡಾ. ವೇಣು ಎನ್. ಮುಖ್ಯ ಅಥಿತಿಯಾಗಿ ಭಾಗವಹಿಸಿ ರಾಷ್ಟ್ರೀಯ ಏಕತೆಯಲ್ಲಿ ಯುವ ಜನತೆಯ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದರು. ಎನ್.ಎಸ್.ಎಸ್.ಘಟಕದ ಘಟಕಾಧಿಕಾರಿ ಡಾ. ಪ್ರಮೋದ್ ಪಿ.ಎ. ರವರು, ಭೋದಕ- ಭೋದಕೇತರ ವರ್ಗದವರು ಮತ್ತು ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕು. ಗೌರಿ ಪಾರ್ವತಿ ಮತ್ತು ಕು. ಸೂರ್ಯಪ್ರಿಯ ಪ್ರಾರ್ಥಿಸಿ, ಕು.ನೇಹ ಎಸ್. ಮತ್ತು ಕು.ಪ್ರತೀಕ್ಷಎನ್. ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪ್ರಮೊದ್ ಕೆ.ವಿ. ಮತ್ತು ದ್ವಿತೀಯ ಬಹುಮಾನವನ್ನು ಕು. ಇಂದ್ರಾಣಿ ಸಿ. ಹಾಗೂ ಸಮೂಹ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕು. ಗೌರಿ ಪಾರ್ವತಿ ಮತ್ತು ತಂಡ ಹಾಗೂ ದ್ವಿತೀಯ ಬಹುಮಾನವನ್ನು ಕು. ಶರಧಿ ಮತ್ತು ತಂಡ ಪಡೆದುಕೊಂಡರು. ಕು. ಶರಧಿ ಸ್ವಾಗತಿಸಿ, ಕು.ಪ್ರಜೀತ ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.