ಅರಂತೋಡು : ದುರ್ಗಾ ಮಾತಾ ಮಹಿಳಾ ಮಂಡಲದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Advt_Headding_Middle

ಅರಂತೋಡಿನಲ್ಲಿ ನೂತನವಾಗಿ ಪ್ರಾರಂಭವಾದ ದುರ್ಗಾ ಮಾತಾ ಮಹಿಳಾ ಮಂಡಲ ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅ.30ರಂದು ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ರಿ. ಸುಳ್ಯ ಇದರ ಅಧ್ಯಕ್ಷರಾದ ಶ್ರೀಮತಿ ಇಂದಿರಾ ರಾಜಶೇಖರ್ ರೈ ನೆರವೇರಿಸಿದರು.

ಸಭಾಧ್ಯಕ್ಷತೆಯನ್ನು ದುರ್ಗಾ ಮಾತಾ ಮಹಿಳಾ ಮಂಡಲದ ನೂತನ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ ವಹಿಸಿದ್ದರು. ಪದಸ್ವೀಕಾರ ಕಾರ್ಯಕ್ರಮವನ್ನು ದುರ್ಗಾ ಮಾತಾ ಮಹಿಳಾ ಮಂಡಲ ದ ಗೌರವಾಧ್ಯಕ್ಷೆ ಶ್ರೀಮತಿ ಯಶೋಧ ಹೂವಯ್ಯ ಉಳುವಾರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರಿಮತಿ ಹರಿಣಿ ದೇರಾಜೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಮಾರಿ ಶ್ವೇತಾ ಅರಮನೆಗಯ,ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಶ್ರಿಮತಿ ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು. ಮಾಧ್ಯಮ ನಿರ್ದೇಶಕಿ ಶ್ರೀಮತಿ ಗೀತಾ ಶೇಖರ್ ಉಳುವಾರು ಮತ್ತು ಕ್ರೀಡಾ ನಿರ್ದೇಶಕಿ ರೀನಾ ಚೋಡಿಪಣೆ ಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕಾರ್ಯದರ್ಶಿ ಶ್ರೀಮತಿ ಲತಾ ಶಿವಪ್ರಸಾದ್ ಸ್ವಾಗತಿಸಿ ಖಜಾಂಜಿ ಶ್ರಿಮತಿ ಭಾರತಿ ಪುರುಷೋತ್ತಮ್ ಉಳುವಾರು ವಂದಿಸಿದರು. ಕುಮಾರಿ ಶ್ರದ್ಧಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಹಿಳಾ ಮಂಡಲದ ನೂತನ ಪದಾಧಿಕಾರಿಗಳುನೂತನ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾ ಮೇದಪ್ಪ, ಕಾರ್ಯದರ್ಶಿಯಾಗಿ ಶ್ರೀಮತಿ ಲತಾ ಶಿವಪ್ರಸಾದ್, ಖಜಾಂಜಿಯಾಗಿ ಶ್ರಿಮತಿ ಭಾರತಿ ಪುರುಷೋತ್ತಮ್, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಲತಾ ರಾಧಾಕೃಷ್ಣಕೋಡಿ ಮತ್ತು ಶ್ರೀಮತಿ ವಾಣಿ ಯಶವಂತ ಉಳುವಾರು ಜೊತೆ ಕಾರ್ಯದರ್ಶಿ ಯಾಗಿ ಶ್ರಿಮತಿ ವಿಮಲಾ ಸೋಮಶೇಖರ್ ಪೈಕ, ಮಾಧ್ಯಮ ನಿರ್ದೇಶಕರಾಗಿ ಶ್ರಿಮತಿ ಗೀತಾ ಶೇಖರ್ ಉಳುವಾರು,ಕ್ರೀಡಾ ನಿರ್ದೇಶಕರಾಗಿ ಶ್ರಿಮತಿ ರೀನಾ ಶೇಖರ್ ಚೋಡಿಪಣೆ, ಸಾಂಸ್ಕೃತಿಕ ನಿರ್ದೇಶಕರಾಗಿ ಶ್ರಿಮತಿ ಮಾಲಿನಿ ವಿನೋದ್ ಉಳುವಾರು ನಿರ್ದೇಶಕರುಗಳಾಗಿ ಶ್ರಿಮತಿ ಚಂಚಲಾಕ್ಷಿ, ಶ್ರಿಮತಿ ಶಾಂತಿ ಚೆನ್ನಕೇಶವ ಮತ್ತು ಶ್ರಿಮತಿ ಸೀಮಾ ಶಿವಾನಂದ್ ಕುಕ್ಕುಂಬಳ್ಳ ಪದ ಸ್ವೀಕರಿಸಿದರು.
ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವ ಜಯಂತ ಪೂಜಾರಿಯ ವರಿಗೆ ಕಿಟ್ ಹಾಗೂ ಧನಸಹಾಯ ವನ್ನು ದುರ್ಗಾ ಮಹಿಳಾ ಮಂಡಲವತಿಯಿಂದ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.