ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

Advt_Headding_Middle

ರೂ. 421 ಕೋಟಿ ವ್ಯವಹಾರ, ರೂ.1.೦4ಕೋಟಿ ಲಾಭ, ಶೇ.12  ಡಿವಿಡೆಂಡ್

ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು 2020-21 ನೇ ಸಾಲಿನಲ್ಲಿ ರೂ.421 ಕೋಟಿ 9೦ ಲಕ್ಷ ವ್ಯವಹಾರ ನಡೆಸಿ ರೂ.1,೦4,೦4,815  ಲಾಭಗಳಿಸಿದೆ. ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.12  ಡಿವಿಡೆಂಡ್ ವಿತರಿಸಲಾಗುವುದು. ಲೆಕ್ಕಪರಿಶೋಧನೆಯಲ್ಲಿ ಸಂಘವು ಸತತವಾಗಿ ಎ ಶ್ರೇಣಿಯನ್ನು ಪಡೆದುಕೊಂಡಿರುತ್ತದೆ ಎಂದು ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.
ಸಭೆಯು ಅ.31 ರಂದು ದರ್ಬೆ ಪ್ರಶಾಂತ್ ಮಹಲ್ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಜಿಲ್ಲೆಯಲ್ಲಿ ಒಟ್ಟು ೧೨ ಶಾಖೆಗಳನ್ನು ಹೊಂದಿದ್ದು, ವರ್ಷಾಂತ್ಯಕ್ಕೆ ಸಂಘದಲ್ಲಿ ೬೯೦೪ ಸದಸ್ಯರಿಂದ ರೂ.೨,೩೨,೩೮,೧೦೦ ಪಾಲು ಬಂಡವಾಳ ಹೊಂದಿದೆ. ರೂ.೯೭,೧೦ಕೋಟಿ ಠೇವಣಿ ಹೊಂದಿರುತ್ತದೆ. ರೂ.೬೭,೧೦,೯೬,೧೭೯ನ್ನು ವಿವಿಧ ರೂಪದ ಸಾಲ ವಿತರಿಸಲಾಗಿದ್ದು ರೂ.೧,೮೮,೨೨,೨೮೪ ಸುಸ್ತಿಯಾಗಿರುತ್ತದೆ. ವಿವಿಧ ನಿಧಿಗಳಲ್ಲಿ ರೂ.೩,೪೪,೮೬,೦೯೮-೦೯, ರೂ.೧೫,೬೫,೩೨,೬೧೧ನ್ನು ವಿವಿಧ ಬ್ಯಾಂಕ್ಗಳಲ್ಲಿ ಧನ ವಿನಿಯೋಗಿಸಲಾಗಿದೆ. ಕಳೆದ ಸಾಲಿಗಿಂತ ಈವರ್ಷ ಸಂಘವು ರೂ.೪೨,೦೬,೪೨೦-೨೮ ಹೆಚ್ಚು ಲಾಭ ಗಳಿಸಿರುತ್ತದೆ. ಲಾಭಾಂಶವನ್ನು ಉಪನಿಬಮಧನೆಯಂತೆ ವಿಂಗಡಣೆ ಮಾಡಲಾಗಿದ್ದು ಸದಸ್ಯರಿಗೆ ಶೇ.೧೨ ಡಿವಿಡೆಂಡ್ ಹಾಗೂ ಸಿಬಂದಿಗಳಿಗೆ ಎರಡು ತಿಂಗಳ ವೇತನದ ಬೋನಸ್ ವಿತರಿಸಲಾಗುವುದು ಎಂದರು.
ಸಂಘದ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಸವಣೂರಿನಲ್ಲಿ ೭೫ ಸೆಂಟ್ಸ್ ಜಾಗ ಖರೀದಿಸಿ ಸುಮಾರು ರೂ.೨.೫ಕೋಟಿ ವೆಚ್ಚದ ಭವ್ಯ ಕಟ್ಟಡ ನಿರ್ಮಿಸಲಾಗುವುದು. ಕೇಂದ್ರ ಕಚೇರಿಯ ಜೊತೆಗೆ ಅದರಲ್ಲಿ ಜಿಲ್ಲೆಯ ಸಹಕಾರಿ ನೌಕರರಿಗೆ ತರಬೇತಿ, ಸಹಕಾರಿ ಕ್ಷೇತ್ರದ ಸೌಲಭ್ಯಗಳನ್ನು ಹಳ್ಳಿಯ ಜನರಿಗೆ ತಿಳಿಸುವುದು, ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಮಳಿಗೆ ತೆರೆಯಲಾಗುವುದು. ಇಲಾಖೆಯಿಂದ ಮಂಜೂರಾತಿ ಆದೇಶ ದೊರೆತ ಕೂಡಲೇ ಕಾಮಗಾರಿಗೆ ಕಾರ್ಯಾರಂಭಿಸಲಾಗುವುದು. ಜಿಲ್ಲೆಯಲ್ಲಿ ಎರಡು ಹೊಸ ಶಾಖೆ ತೆರೆಯುವ ಯೋಜನೆಯಿದೆ. ಸಂಘದ ಠೇವಣಿಯನ್ನು ಮೂರು ಕೋಟಿಗೆ ನಿಗಧಿಮಾಡಲಾಗುವುದು. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಸಂಘದಲ್ಲಿ ವ್ಯವಹರಿಸಿ, ಸದಸ್ಯರ ಠೇವಣಿಗೆ ಸೂಕ್ತ ಭದ್ರತೆಯಿದೆ. ಹೀಗಾಗಿ ಸದಸ್ಯರು ಭಯಪಡಬೇಕಾಗಿಲ್ಲ. ಮುಂದಿನ ಐದು ವರ್ಷದಲ್ಲಿ ಸಂಘವನ್ನು ಉತ್ತಮ ಸಹಕಾರಿ ಬ್ಯಾಂಕ್ ಮಾಡುವ ಇರಾದೆಯಿದೆ ಎಂದು ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಹೇಳಿದರು.
ಸದಸ್ಯರಾದ ಶೇಷಪತಿ ರೈ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಹಾಗೂ ಚಿಕ್ಕಪ್ಪ ನಾಕ್ ಸಂಘದ ಬೆಳವಣಿಗೆಯ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಯನ್ ಸುಂದರ ರೈ ಸವಣೂರು, ನಿರ್ದೇಶಕರಾದ ಡಾ|ರಾಜೇಶ್ ಎಸ್ ರೈ ಸವಣೂರು, ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು, ಎಸ್.ಯಂ ಬಾಪು ಸಾಹೇಬ್ ಸುಳ್ಯ, ಯನ್ ರಾಮಯ್ಯ ರೈ ಕೆದಂಬಾಡಿ, ವಿ.ವಿ ನಾರಾಯಣ ಭಟ್ ನರಿಮೊಗರು, ಕೆ.ಶಂಕರ ನಾಕ್ ಸವಣೂರು, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಜೈರಾಜ್ ಭಂಡಾರಿ ಪುತ್ತೂರು, ಸೀತಾರಾಮ ಶೆಟ್ಟಿ ಬಿ. ಮಂಗಳೂರು, ಮಹಾದೇವ ಎಂ. ಮಂಗಳೂರು, ಯಮುನಾ ಎಸ್ ರೈ ಗುತ್ತುಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾನಿಧಿ ವಿತರಣೆ:
ಸಹಕಾರಿ ಸಂಘದ ವಿದ್ಯಾನಿಧಿ ಯೋಜನೆಯಲ್ಲಿ ಈ ವರ್ಷ ಸುಳ್ಯ ತಾಲೂಕಿನ ಜಾಲ್ಸೂರು ಕೋಲ್ಚಾರು ಹಿ.ಪ್ರಾ ಶಾಲಾ ಏಳು ವಿದ್ಯಾರ್ಥಿಗಳಿಗೆ ತಲಾ ರೂ.೨೦೦೦ದಂತೆ ವಿದ್ಯಾನಿಧಿ ವಿತರಿಸಲಾಯಿತು.
ಪುತ್ತೂರು ಶಾಖಾ ಗುಮಾಸ್ತೆ ಕೃಪಾ ಪ್ರಾರ್ಥಿಸಿದರು. ಅಧ್ಯಕ್ಷ ಸೀತಾರಾಮ ರೈ ಸ್ವಾಗತಿಸಿದರು. ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ಆಡಳಿತ ಮಂಡಳಿ ವರದಿ ವಾಚಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕಿ ಪ್ರಜ್ಞಾಶ್ರೀ, ಕೇಂದ್ರ ಕಚೇರಿ ವ್ಯವಸ್ಥಾಪಕ ನಯನ ಕುಮಾರ್, ಕೇಂದ್ರ ಕಚೇರಿ ವ್ಯವಸ್ಥಾಪಕ ಸುನಾದ್ ರಾಜ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾರಾಟಾಧಿಕಾರಿ ಶ್ರೀಧರ ಪೂಜಾರಿ ಕೆ. ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.