ಕೊಡಗು ಸಂಪಾಜೆ : ಸನ್ಮಾನ ಕಾರ್ಯಕ್ರಮ

Advt_Headding_Middle

ಕೊಡಗು ಸಂಪಾಜೆ ಗ್ರಾಮದ ಶ್ರೀ ಪಂಚಾನನ ಭಜನಾ ತಂಡದ ಸದಸ್ಯರಿಗೆ ತಂಡದ ವತಿಯಿಂದ ಸನ್ಮಾನ ಕಾರ್ಯವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅ. ೩೧ ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ರಮಾದೇವಿ ಬಾಲಚಂದ್ರ ಕಳಗಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಮಿನಾಕುಮಾರಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಹೇಮಾವತಿ ಬಾಳೆಹಿತ್ಲು, ಪಂಚಾನನ ಭಜನಾ ತಂಡದ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಕಲಾಯಿ, ಶ್ರೀ ಗೋಪಾಲ ಕಲಾಯಿ, ಭಜನಾ ತಂಡದ ಸದಸ್ಯರಾದ ಭರತ್ ಕೇನಾಜೆ, ಲಕ್ಷ್ಮಿ ಕೇನಾಜೆ, ಶಭರೀಶ್ ಕುದ್ಕುಳಿ ಸಂಪಾಜೆ ಭಾಗವಹಿಸಿದ್ದರು, ಭಜನಾ ತಂಡದ ಸದಸ್ಯರುಗಳ ಪ್ರಾರ್ಥನೆಯೊಂದಿಗೆ ಮೊದಲ್ಗೊಂಡು, ಕನ್ನಡ ಚಿತ್ರರಂಗದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಿಧನಕ್ಕೆ ಮೌನಾಚಾರಣೆಯ ಮೂಲಕ ಸಂತಾಪ ಸೂಚಿಸಿ, ಭಜನಾ ತಂಡ ಅಭಿವೃದ್ಧಿ ಪಥ ಸೇರಲಿ ಎಂದು ಶುಭ ಹಾರೈಸಿದರು. ತಂಡದ ಸದಸ್ಯರಾದ ಭರತ್ ಕೆನಾಜೆ ದಂಪತಿಗಳನ್ನು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವದಿಂದ ಸನ್ಮಾನಿಸಿದರು, ಕಾರ್ಯಕ್ರಮದಲ್ಲಿ ಶ್ರೀಲತಾ ಕೊಯನಾಡು ಸ್ವಾಗತಿಸಿ ನಿರೂಪಿಸಿ, ಅನಿತಾ ಸಂಪಾಜೆ ಗಣ್ಯರನ್ನು ಅಭಿನಂದಿಸಿದರು. ಸಮಾರಂಭಕ್ಕೆ ಭಜನಾ ತಂಡದ ಸದಸ್ಯರು ಹಾಗೂ ಸದಸ್ಯರ ಪೋಷಕರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.