ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Advt_Headding_Middle

ರೂ.1.ಕೋಟಿಗೂ ಮಿಕ್ಕಿ ವ್ಯವಹಾರ, ರೂ.7.ಲಕ್ಷ ನಿವ್ವಳ ಲಾಭ

ಪಂಜ ಉತ್ಪಾದಕರ ಸಹಕಾರ ಸಂಘದ 2020 -21 ನೇ ಸಾಲಿನ ಸರ್ವಸದಸ್ಯರ 35ನೇ ವಾರ್ಷಿಕ ಸಾಮಾನ್ಯ ಸಭೆ ಅ.30.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷ ಚನಿಯಪ್ಪ ಕುಳ್ಳಕೋಡಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ ,ನವೀನ್ ಕೆಬ್ಲಾಡಿ, ಸತೀಶ್ ಬಿ ,ಉದಯ ಬಿ ,ನಾರಾಯಣ ನಾಯ್ಕ, ಶ್ರೀಮತಿ ಸಾವಿತ್ರಿ, ವಿಸ್ತರಣಾಧಿಕಾರಿ ಹರೀಶ್ ಕುಮಾರ್ , ವೈದ್ಯಾಧಿಕಾರಿ ಡಾ.ಸಚಿನ್ ,ಕಾರ್ಯದರ್ಶಿ ಕೇಶವ. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘವು 2020-21 ಸಾಲಿನಲ್ಲಿ ಒಟ್ಟು ರೂ.1ಕೋಟಿ 24 ಲಕ್ಷ 11189.98 ವ್ಯವಹಾರ ನಡೆಸಿ ರೂ.7ಲಕ್ಷ6ಸಾವಿರದ 593.37 ನಿವ್ವಳ ಲಾಭ ಗಳಿಸಿ ದಾಖಲೆಯಾಗಿದೆ.ಶೇ.25 ಷೇರು ಡಿವಿಡೆಂಡ್, ಪ್ರತೀ ಲೀಟರ್ ಗೆ 97 ಪೈಸೆ ಬೋನಸ್ ನೀಡಲಿದೆ.ಆಡಿಟ್ ವರ್ಗೀಕರಣ ‘ಎ’ ತರಗತಿ ಹೊಂದಿದೆ.
ಎಂದು ಸಂಘದ ಚನಿಯಪ್ಪ ಕುಳ್ಳಕೋಡಿ ರವರು ಹೇಳಿದರು.
ಪಶು ವೈದ್ಯಾಧಿಕಾರಿ ಡಾ.ಸಚಿನ್ ಜಾನುವಾರುಗಳ ಸಾಕಾಣಿಕೆ ಮತ್ತು ಗುಣಮಟ್ಟದ ಹಾಲು ಪೂರೈಕೆ ಕುರಿತು ಮಾಹಿತಿ ನೀಡಿದರು.
ಕಾರ್ಯದರ್ಶಿ ಯವರ ಅವ್ಯವಹಾರ ಆರೋಪ ಇರುವುದಾಗಿ ಕೆಲವು ಸದಸ್ಯರು ಪ್ರಶ್ನಿಸಿ ಚರ್ಚಿಸಿರು.ಈ ಕುರಿತು ವಿಸ್ತಾರಣಾಧಿಕಾರಿ ಹರೀಶ್ ಕುಮಾರ್ ಉತ್ತರಿಸಿ ” ನಾವು ಒಕ್ಕೂಟದ ವತಿಯಿಂದ ಸಂಘದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದೇವೆ ಎಲ್ಲಿಯೂ ಅವ್ಯವಹಾರ ನಡೆದಿಲ್ಲ. ಸಂಘವು ಉತ್ತಮ ಲಾಭಾಂಶದಲ್ಲಿದೆ. ಕಾರ್ಯದರ್ಶಿ ಬೇರೆ ಮೆಂಬರ್ ಶೀಪ್ ನಲ್ಲಿ ಹಾಲು ಹಾಕಿದ್ದಾರೆ .ಕಾರ್ಯದರ್ಶಿಯವರ ಮನೆಯಲ್ಲಿ ಜಾನುವಾರು ಇದೆ.ಇಲ್ಲಿ ವ್ಯತ್ಯಾಸ ಕಂಡು ಬಂದಿದೆ.ಅದನ್ನು ಅವರು ಒಪ್ಪಿ ಕೊಂಡು ಹಣ ತುಂಬಿದ್ದಾರೆ.ಇದನ್ನು ಅವ್ಯವಹಾರ ಎಂದು ಹೇಳಲು ಆಗುವುದಿಲ್ಲ ಎಂದು ವಿವರಿಸಿದರು.
2020- 21 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಸಂಘದ ನಿರ್ದೇಶಕಿ ಶ್ರೀಮತಿ ಯಶೋದಾ ಬಿಳಿಮಲೆ ಪ್ರಥಮ, ದೇವದಾಸ್ ಕೆಬ್ಲಾಡಿ ದ್ವಿತೀಯ, ಶ್ರೀಮತಿ ರಾಜೀವಿ.ಪಿ. ತೃತೀಯ ಸ್ಥಾನ ಗಳಿಸಿದ್ದಾರೆ. ಇದೇ ವೇಳೆ ಸಂಘದ ಕಾರ್ಯದರ್ಶಿ ಸ್ಥಾನದಿಂದ ಸ್ವಯಂ ನಿವೃತ್ತಿ ಹೊಂದಲಿರುವ ಕೇಶವ. ಕೆ. ಮತ್ತು 25 ವರುಷ ಸಂಘದ ಅಧ್ಯಕ್ಷರಾಗಿ
ಸೇವೆಗೈದ , ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ಸಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವನಿತಾ ಕರಿಮಜಲು ಪ್ರಾರ್ಥಿಸಿದರು. ಚನಿಯಪ್ಪ ಕುಳ್ಳಕೋಡಿ ಸ್ವಾಗತಿಸಿದರು.ಚಂದ್ರಶೇಖರ ಶಾಸ್ತ್ರಿ ಸಿ ರವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಕೇಶವ. ಕೆ. ವರದಿ ವಾಚಿಸಿದರು. ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.