ದ.ಕ., ಕೊಡಗು ಗೌಡ ಸಮಾಜ ವತಿಯಿಂದ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನಾಚರಣೆ

Advt_Headding_Middle

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು, ಇದರ ಅಧ್ಯಕ್ಷರಾದ ರವೀಂದ್ರನಾಥ್ ಕೇವಳ ರವರ ಅಧ್ಯಕ್ಷತೆಯಲ್ಲಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನಾಚರಣೆಯನ್ನು “ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ” ಲಗ್ಗೆರೆಯಲ್ಲಿ ಆಚರಿಸಲಾಯಿತು. ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ಮಾಜಿ ಅಧ್ಯಕ್ಷರು ಹಾಗೂ ರಾಜ್ಯ ನೈಸರ್ಗಿಕ ಕೃಷಿ ಸಂಚಾಲಕರಾಗಿರುವ ಪದ್ಮನಾಭ ಕೋಲ್ಚಾರ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು ಹಾಗೂ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿರುವ ಅಮ್ಮಾಜೀರ ಪೊನ್ನಪ್ಪ ರವರು ಮಾತನಾಡಿದರು.

ಅತಿಥಿಗಳಾಗಿ ಕೊಡಗು ಗೌಡ ಸಮಾಜ ಬೆಂಗಳೂರಿನ ಪದಾಧಿಕಾರಿಗಳಾದ ಸುಜಯ್ ನಟೋಳನ, ಕಾಚಿಳoಡ ಅಶೋಕ್ ಹಾಗು ಸಮಾಜ‌ ಬಂಧುಗಳು ಉಪಸ್ಥಿತರಿದ್ದರು. ಕೊಡಗು ಗೌಡ ಯುವ ವೇದಿಕೆ ಬೆಂಗಳೂರಿನ ಅಧ್ಯಕ್ಷರಾದ ಕೊಂಬನ ಪ್ರವೀಣ್ ಹಾಗೂ ಕಾರ್ಯದರ್ಶಿ ತರುಣ್ ಕೂಡಕಂಡಿ ರವರು ಉಪಸ್ಥಿತರಿದ್ದರು.

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಗೌರವ ಕಾರ್ಯದರ್ಶಿ ನಾಗೇಶ ಕುಮಾರ ಕಲ್ಲುಮುಟ್ಲು, ಜಂಟಿ ಕಾರ್ಯದರ್ಶಿಗಳಾದ ನಾಗೇಶ ಬಂಟೋಡಿ ಮತ್ತು ಚೇತನ್ ಚೆಟ್ಟಿಮಾಡ ಮಹಿಳಾ ಘಟಕದ ಅಧ್ಯಕ್ಷಿಣಿ ಶ್ರಿಮತಿ ಜ್ಯೋತಿ ಕುಶಾಲಪ್ಪ ಪೋರೆಯನ ಯುವ ಘಟಕದ ಅಧ್ಯಕ್ಷಿಣಿ ಶ್ರಿಮತಿ ನೇಹ ರೋಷನ್ ಪೋರೆಯನ ಹಾಗು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ ಗುಡ್ಡೆಮನೆ ಅಪ್ಪಯ್ಯ ಗೌಡರ ಬುದ್ದಿವಂತಿಕೆ, ನಾಯಕತ್ವ‌,‌ ಹೋರಾಟ ಹಾಗೂ ಅಮರ ಸುಳ್ಯ‌ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮೆಲುಕು ಹಾಕುವ ಮೂಲಕ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಿತು. ನಾಗೇಶ ಕುಮಾರ್ ಕಲ್ಲುಮುಟ್ಲು ರವರ ವಂದನಾರ್ಪಣೆಯೊಂದಿಗೆ ಹಾಗೂ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.