ಕಲ್ಮಡ್ಕ ಗ್ರಾಮದ ಬೂತ್ ಸಂಖ್ಯೆ 135 ರ ಬಿ ಜೆ ಪಿ ಸ್ಥಾನೀಯ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ

Advt_Headding_Middle

 

 

ಕಲ್ಮಡ್ಕ ಗ್ರಾಮದ ಬೂತ್ ಸಂಖ್ಯೆ 135ರ ಬಿ.ಜೆ .ಪಿ ಸ್ಥಾನೀಯ ಸಮಿತಿ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು.

ಸನ್ಮಾನ್ಯ ಸಚಿವರಾದ ಎಸ್. ಅಂಗಾರರವರು ನಾಮಫಲಕ ಅಳವಡಿಸಿದರು.
ಈ ಸಂದರ್ಭದಲ್ಲಿ ಬಿ .ಜೆ .ಪಿ ಮಂಡಲ ಸಮಿತಿಯ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸನ್ಮಾನ್ಯ ಸಚಿವರು ಮಾತನಾಡುತ್ತಾ ಗ್ರಾಮಾಭಿವೃದ್ಧಿಗಾಗಿ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು .
ಬೆಳ್ಳಾರೆ ಬಿ.ಜೆ. ಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ವಸಂತ ನಡುಬೈಲು, ಸುಭೋದ್ ಶೆಟ್ಟಿ ಮೇನಾಲ, ಕೂಸಪ್ಪಗೌಡ ಮುಗುಪ್ಪು, ಶ್ರೀನಾಥ್ ಬಾಳಿಲ, ಜಾಹ್ನವಿ ಕಾಂಚೋಡು, ಸಮಿತಿಯ ಸಂಚಾಲಕರಾದ ಶ್ರೀ. ರಮೇಶ್ ಕೆ. ತಿಪ್ಪನಕಜೆ, ಅಧ್ಯಕ್ಷೆ ನಳಿನಾಕ್ಷಿ ವಿ. ಆಚಾರ್ಯ, ಬಾಳಿಲ ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷ ಭಟ್. ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಾಲಕರಾದ ರಮೇಶ್ ಕೆ. ತಿಪ್ಪನಕಜೆ ಹಾಗೂ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಸಚಿವರಿಗೆ ಹಾರ ,
ಫಲ- ಪುಷ್ಪ ನೀಡಿ , ಶಾಲು ಹಾಕಿ ಸನ್ಮಾನಿಸಿದರು.
ಕಾರ್ಯದರ್ಶಿ ತೀರ್ಥಾನಂದ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.