ಸುಳ್ಯದಲ್ಲಿ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಮಾವೇಶ

Advt_Headding_Middle

‌‌

 

ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ ಪುತ್ತೂರು ಸುಳ್ಯ ಉಪಗ್ರಹ ಶಾಖೆಯ ಪ್ರತಿನಿಧಿಗಳ ಸಮಾವೇಶವು ಉಡುಪಿ ಗಾರ್ಡನ್ ಹೋಟೆಲ್ ಗ್ರಾಂಡ್ ಪರಿವಾರ ಸಭಾಭವನದಲ್ಲಿ ನ.೧ ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶಾಖೆಯ ಎ.ಒ.ಐ ಪ್ರಕಾಶ್ ರೈ ಸಾರಕರೆ ಯವರು ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ರತ್ನಾಕರ ರೈ ಜಿ, ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಎ.ಒ.ಐ ರಮೇಶ್ ಕುಮಾರ್ ಮೂಲ್ಕಿ, ಉಡುಪಿ ವಿಭಾಗ ಎ.ಒ.ಐ ಎ.ಎಸ್.ಲೋಕೇಶ್ ಶೆಟ್ಟಿ,‌ ರಾಜ್ಯ ಸಮಿತಿ ಎ.ಒ.ಐ ಕಾರ್ಯದರ್ಶಿ ಕೇಶವ ಪ್ರಭು, ಉಡುಪಿ ವಿಭಾಗ ಎ.ಒ.ಐ ಕೋಶಾಧಿಕಾರಿ ಎಂ.ರಘುನಾಥ ಶೆಟ್ಟಿ, ಪುತ್ತೂರು ಶಾಖೆಯ ಎ.ಒ.ಐ ಸ್ಥಾಪಾಧ್ಯಾಕ್ಷ ಎಂ.ಸುಬ್ರಹ್ಮಣ್ಯ ಭಟ್, ಗೌರವಾಧ್ಯಕ್ಷ ಪ್ರಕಾಶ್ ಕುಮಾರ್ ಕೆ, ‌ಪುತ್ತೂರು ಶಾಖೆಯ ಎ.ಒ.ಐ.ಉಪಾಧ್ಯಕ್ಷ ಶಂಕರಲಿಂಗಂ ಕೆ ತೊಡಿಕಾನ,‌ಅಧ್ಯಕ್ಷೆ ಚಂದ್ರಾವತಿ ಎಂ, ಕಾರ್ಯದರ್ಶಿ ಚಂದ್ರಶೇಖರ ಎಸ್ ರವರು ಉಪಸ್ಥಿತರಿದ್ದರು.
ಐದು ಮಂದಿ ಹಿರಿಯ ಪ್ರತಿನಿಧಿಗಳು ನಿರ್ಮಲರಾವ್, ವೆಂಕಟ್ರಮಣ ಭಟ್,‌ ಭಾಸ್ಕರ ಕೆ.ಎಸ್,‌ಅಬ್ದುಲ್ಲ, ಶ್ರೀಧರ ಕೆ.ಎಸ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಲ್.ಐ.ಸಿ ಕೈಪಿಡಿಯನ್ನು ಅಧ್ಯಕ್ಷರು ಬಿಡುಗಡೆಗೊಳಿಸಿದರು. ಎಲ್.ಐ.ಸಿ.ಕುರಿತು ಸಂಪನ್ಮೂಲ ವ್ಯಕ್ತಿ ರತ್ನಾಕರ ರೈ ಯವರು ಮಾಹಿತಿ ನೀಡಿದರು.
ಶಂಕರಲಿಂಗಂ ಕೆ ತೊಡಿಕಾನ ರವರು ಪ್ರಾಸ್ತಾವಿಕ ಮಾತನಾಡಿದರು.
ಗಾಯಕಿ ಆರತಿ ಪುರುಷೋತ್ತಮ ಪ್ರಾರ್ಥಿಸಿದರು.ಶಿವರಾಮ ಕರುವಾಜೆ ಸ್ವಾಗತಿಸಿದರು.ಮಾಧವ ಜಾಲ್ಸೂರು ವಂದಿಸಿದರು. ಪದ್ಮನಾಭ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ 45 ವರ್ಷಗಳ ಕಾಲ ಸಲ್ಲಿಸಿದ ಸೇವೆ ಗಾಗಿ ಪತ್ರಕರ್ತ ಗಂಗಾಧರ ಮಟ್ಟಿ ಅವರನ್ನು ಎಲ್ಐಸಿ ಪ್ರತಿನಿಧಿ ಗಳ ಸಮಾವೇಶ ದಲ್ಲಿ ಸನ್ಮಾನಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.