ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ

Advt_Headding_Middle

 

ಸುಳ್ಯದ ಬೆಳವಣಿಗೆಯಲ್ಲಿ ಶಾರದಾ ವಿದ್ಯಾಸಂಸ್ಥೆ ಕೊಡುಗೆಯೂ ಮಹತ್ವದ್ದು : ಎಂಎಲ್ಸಿ ಹರೀಶ್ ಕುಮಾರ್

ಹೆಣ್ಣು‌ಮಕ್ಕಳು ಶಾಲೆಗೆ ಹೋಗಲು ಅವಕಾಶ ಇಲ್ಲದ ಸಂದರ್ಭದಲ್ಲಿ ಹೆಣ್ಣು‌ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸುಳ್ಯದಲ್ಲಿ ಈ ಸಂಸ್ಥೆಯನ್ನು ಹಿರಿಯರು ಆರಂಭಿಸಿದ್ದಾರೆ. ಸುಳ್ಯದ ಬೆಳವಣಿಗೆಯಲ್ಲಿ ಶಾರದಾ ವಿದ್ಯಾಸಂಸ್ಥೆಯ ಪಾತ್ರ ಕೂಡಾ ಮಹತ್ವ ಪಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಕೆ. ಹೇಳಿದರು.

ಅವರು ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ
ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಂಘ, ರೀಡರ್ಸ್ ಕ್ಲಬ್, ಇಕೋ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.

“ಸುಳ್ಯ ಕೃಷಿ ಪ್ರಧಾನ ಕ್ಷೇತ್ರ. ಇಂತ ಗ್ರಾಮೀಣ ಭಾಗದಲ್ಲಿ ಕುರುಂಜಿ ವೆಂಕಟರಮಣ ಗೌಡರು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಈ ಭಾಗದವರಿಗೆ ಶಿಕ್ಷ ಣ ಸಿಗುವಂತೆ ಮಾಡಿದರು.‌ ಅದರ ಜತೆಗೆ ಹಿರಿಯರೆಲ್ಲ ಸೇರಿ ಈ ಸಂಸ್ಥೆಯನ್ನು ಕಟ್ಟಿದರು. ಶಿಕ್ಷಣಕ್ಕೆ ಬಡತನ ಇರಬಾರದೆನ್ನುವ ನಿಟ್ಟಿನಲ್ಲಿ ಇಂತ ಸಂಸ್ಥೆಗಳನ್ನು ಕಟ್ಟಲಾಗಿದ್ದು, ಇಲ್ಲಿ ಶಿಕ್ಷಣ ಪಡೆದವರು ಸಂಸ್ಥೆಗೆ, ಊರಿಗೆ, ದೇಶಕ್ಕೆ ಹೆಸರು ತರುವ ಸಾಧನೆ ಆಗಲಿ ಎಂದು ಹೇಳಿದರು.

ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರನ್ನು ಸನ್ಮಾನಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ದ.ಕ. ಗೌಡ ವಿದ್ಯಾಸಂಘದ ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್, ಕೋಶಾಧಿಕಾರಿ ಕಾಮಧೇನು ಮಾಧವ ಗೌಡ, ನಿರ್ದೇಶಕ ಭವಾನಿಶಂಕರ್, ಶ್ರೀ ಶಾರದಾ ಮಹಿಳಾ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಜ್ಯೋತ್ಸ್ನಾ, ಪ್ರೌಢಶಾಲಾ ಮುಖ್ಯ ಗುರು ಶ್ರೀಮತಿ ಭಾರತಿ ಹಾಗೂ ವಿದ್ಯಾರ್ಥಿನಿ ಸಂಘದ ಪದಾಧಿಕಾರಿಗಳು ಇದ್ದರು.

ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ದಾಮೋದರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಿದರು. ಉಪನ್ಯಾಸಕ ಪ್ರಸನ್ನರವರು ಶೈಕ್ಷಣಿಕ ಸಾಧಕ ವಿದ್ಯಾರ್ಥಿನಿಯರನ್ನು ಪರಿಚಯಿಸಿದರು.

ವಿದ್ಯಾರ್ಥಿನಿ ರಾಹಿಲ ಸ್ವಾಗತಿಸಿದರು. ಮನಸ್ವಿ ಹಾಗೂ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.