ಎಲಿಮಲೆ : ಜೀಪು ಚಾಲಕನಿಗೆ ಮಹಿಳೆ ಹೊಡೆದ ಘಟನೆಗೆ ಟ್ವಿಸ್ಟ್

Advt_Headding_Middle

 

 

ಸತ್ಯಾಸತ್ಯತೆ ತಿಳಿಯಲು ಊರವರಿಂದ ಪಂಚಾಯತಿಕೆ

ಜ್ಯೋತಿಷಿಯ ಕೆನ್ನೆಗೆ ಬಾರಿಸಿದ ಮಹಿಳೆ

ಹಿಂದಿನ ದಿನ ಏಟು ತಿಂದ ಜೀಪು ಚಾಲಕನೊಂದಿಗೆ ಕ್ಷಮೆಯಾಚನೆ

ಸ್ಥಳೀಯ ಜ್ಯೋತಿಷಿಯೊಂದಿಗೆ ಸಂಬಂಧ ಕಲ್ಪಿಸಿ ಆಡಿಕೊಂಡಿದ್ದನೆಂಬ ಮಾಹಿತಿ ದೊರಕಿ ಎಲಿಮಲೆಯ ಮಹಿಳೆಯೊಬ್ಬರು ನಿನ್ನೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಎಲಿಮಲೆ ಪೇಟೆಯಲ್ಲಿ ಸತೀಶ ಎಂಬ ಜೀಪು ಚಾಲಕರಿಗೆ ಸಾರ್ವಜನಿಕ ಸ್ಥಳದಲ್ಲಿ ಹೊಡೆದಿದ್ದರು.
ಆದರೆ ಆ ಜೀಪು ಚಾಲಕ ಯಾರ ಬಗ್ಗೆಯೂ ಅಪ ಪ್ರಚಾರ ಮಾಡಿರಲಿಲ್ಲವೆನ್ನಲಾಗಿದೆ.
ತನ್ನ ಮೇಲೆ ಹಲ್ಲೆ ನಡೆಸಿದ ಮಹಿಳೆಯ ಕೈಯನ್ನು ತಡೆದು ಅವರು ತಾನು ಹಾಗೆ ಹೇಳಿಲ್ಲ. ನಿಮಗೆ ಹೇಳಿದವರು ಯಾರು ಎಂದು ಮಹಿಳೆಯನ್ನು ಪ್ರಶ್ನಿಸಿದಾಗ ಮಹಿಳೆ ಉತ್ತರಿಸದೆ ನನ್ನಲ್ಲಿ ದಾಖಲೆ ಇದೆ ಎಂದು ಹೇಳಿದರೆನ್ನಲಾಗಿದೆ. ದಾಖಲೆ ತೋರಿಸಿ ಎಂದಾಗ ತೋರಿಸಲು ನಿರಾಕರಿಸಿ ಹೋದರೆನ್ನಲಾಗಿದೆ.

ಏಕಾಏಕಿ ನಡೆದ ಹಲ್ಲೆ ಘಟನೆಯಿಂದ ವಿಚಲಿತರಾದ ಸತೀಶ್ ರವರು ಸ್ಥಳೀಯ ಮುಖಂಡರ ಗಮನಕ್ಕೆ ತಂದರೆಂದೂ, ಅದೇ ದಿನ ಸಂಜೆ ಮಹಿಳೆಯಲ್ಲಿ ವಿಚಾರಿಸಲು ಅವರು ಮುಂದಾದರೆಂದೂ, ಮುಖಂಡರಾದ ವೆಂಕಟ್ ವಳಲಂಬೆ, ಎ. ವಿ.ತೀರ್ಥರಾಮ, ಕೃಷ್ಣಯ್ಯ ಮೂಲೆತೋಟ ಹಾಗೂ ಎಲಿಮಲೆಯ ಚಾಲಕರು, ಸತೀಶ್ ರವರ ತಾಯಿ, ಬಂಧುಗಳು ಸೇರಿದಂತೆ ಸುಮಾರು ನೂರರಷ್ಟು ಸಾರ್ವಜನಿಕರು ಸೇರಿದ್ದರೆಂದೂ ತಿಳಿದುಬಂದಿದೆ.
ಮುಖಂಡರುಗಳು ಮಾತ್ರ ಮಹಿಳೆಯ ಬಳಿಗೆ ಹೋಗಿ ಸತೀಶ್ ಗೆ ಹೊಡೆದ ಬಗ್ಗೆ ಕೇಳಿದರು. ಅವರು ನೀಡಿದ ಮಾಹಿತಿಯಂತೆ, ಮರುದಿನ ಮಾವಿನಕಟ್ಟೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾತುಕತೆ ನಡೆಸಲು ನಿರ್ಧರಿಸಲಾಯಿತು.

ಮರುದಿನ ನಡೆದ ಮಾತುಕತೆ

ಮರುದಿನ ನಡೆದ ಮಾತುಕತೆಯಲ್ಲಿ ಸತೀಶ್ ಗುಡ್ಡೆ, ಅವರ ತಾಯಿ, ಸಂಬಂಧಿಕರು, ಊರ ಮುಖಂಡರುಗಳಾದ ಎ.ವಿ.ತೀರ್ಥರಾಮ, ವೆಂಕಟ್ ವಳಲಂಬೆ, ಕೃಷ್ಣಯ್ಯ ಮೂಲೆತೋಟ, ಜಯಂತ ಅಂಬೆಕಲ್ಲು ಮತ್ತಿತರರು ಹಾಗೂ ಎಲಿಮಲೆಯ ಚಾಲಕರು ಸೇರಿದಂತೆ ಸುಮಾರು 50ರಷ್ಟು ಮಂದಿ ಮಾವಿನಕಟ್ಟೆ ವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ ಭಾಗವಹಿಸಿದ್ದರು. ಇವರ ಜೊತೆ ಪೆಟ್ಟು ಹೊಡೆದ ಮಹಿಳೆ ಲಲಿತಾ, ಅವರ ಸಂಬಂಧಿಕರಾದ ಗದಾಧರ ಮತ್ತಿತರರು ಇದ್ದರು. ಮಾತುಕತೆಯಲ್ಲಿ ಸ್ಟುಡಿಯೋ ದ ಹರ್ಷರವರು ತನ್ನ ಬಗ್ಗೆ ಹೇಳಿರುವುದಾಗಿ ಮಹಿಳೆ ಹೇಳಿದರು. ಅದನ್ನು ನಿಮಗೆ ಹೇಳಿದ್ಯಾರೆಂದು ಪ್ರಶ್ನಿಸುವಾಗ ಆಕೆ ಯಾರ ಹೆಸರನ್ನೂ ಹೇಳುತ್ತಿರಲಿಲ್ಲ.
ಸ್ಟುಡಿಯೋ ಹರ್ಷರವರನ್ನು ಪಂಚಾತಿಕೆಗೆ ಕರೆದು ಕೇಳಿದಾಗ ” ಪ್ರಸನ್ನ ಕಾಂಪ್ಲೆಕ್ಸ್ ಮ್ಹಾಲಕರಾದ ಶಶಿಧರ ಬಲ್ಯಾಯರವರು ಘಟನೆ ನಡೆಯುವ ಮೊದಲ ದಿನ ದೂರವಾಣಿ ಕರೆ ಮಾಡಿ
ತನಗೂ ಆ ಮಹಿಳೆಗೂ ಸಂಬಂಧವಿದೆಯೆಂದು ಅಪಪ್ರಚಾರವಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಮರುದಿನ ರಾತ್ರಿ ಜ್ಯೋತಿಷ್ಯರು ದೂರವಾಣಿ ಕರೆ ಮಾಡಿ ಅಪಪ್ರಚಾರವಾಗಿರುವ ಬಗ್ಗೆ ನೀವೇ ಹೇಳಿದ್ದು ಎಂದು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ ನಾನು ಅದನ್ನು ಹೇಳಿಯೂ ಇಲ್ಲ. ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ ಎಂದು ಬಲವಾಗಿ ವಿರೋಧಿಸಿದ್ದೇನೆ. ನಾನು ದೂರವಾಣಿ ಕರೆ ಮಾಡಿ ಮಾತನಾಡಿರುವ ಬಗ್ಗೆ ದಾಖಲೆ ಇದೆ ” ಎಂದು ವಿವರ ನೀಡಿದರು.

ಆ ಸಂದರ್ಭದಲ್ಲಿ ತಮಗೆ ಹೇಳಿದ್ಯಾರೆಂದು ಪಂಚಾತಿಕೆದಾರರು ಮಹಿಳೆಯನ್ನು ಮತ್ತೆ ಪ್ರಶ್ನಿಸಿದಾಗ ” ತನಗೆ ಜ್ಯೋತಿಷ್ಯರು ಹೇಳಿದ್ದೆಂದು ” ಮಹಿಳೆ ಒಪ್ಪಿಕೊಂಡರು. ಹೀಗಾಗಿ ಪಂಚಾತಿಕೆ ಸ್ಥಳಕ್ಕೆ ಬರಬೇಕೆಂದು ಜ್ಯೋತಿಷಿ ಶಶಿಧರ ಬಲ್ಯಾಯರನ್ನು ಫೋನ್ ಮಾಡಿ ಕರೆಯಲಾಯಿತು. ಮೊದಲು ಒಪ್ಪಿದ ಸತ್ಯನಾರಾಯಣರು ನಂತರ, ” ನನ್ನನ್ನು ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಅಲ್ಲಿಗೆ ಹೋಗುವುದು ಬೇಡ ಎಂದಿದ್ದಾರೆ. ಅವರು ಹೇಳದೇ ನಾನು ಬರಲಾಗುವುದಿಲ್ಲ. ಬರಲೇ ಬೇಕೆಂದಿದ್ದರೆ ಸರ್ಕಲ್ ಜತೆಗೆ ಬರುವುದಾಗಿ ಹೇಳಿದರೆನ್ನಲಾಗಿದೆ.

ಮಧ್ಯಾಹ್ನದ ವರೆಗೆ ಕಾದ ಪಂಚಾತಿಕೆದಾರರು ಜ್ಯೋತಿಷಿಯನ್ನು ವಿಚಾರಿಸಿಕೊಂಡು ಬರಲು ಆ ಮಹಿಳೆ, ಆಕೆಯ ನಿಕಟ ಬಂಧು ಗದಾಧರ ಬಾಳುಗೋಡು, ಸ್ಟುಡಿಯೋ ಹರ್ಷರನ್ನು ಕಳುಹಿಸಿಕೊಟ್ಟರು. ಅವರು ಜ್ಯೋತಿಷ್ಯರ ಮನೆಗೆ ಹೋಗಿ ವಿಚಾರಿಸಿ , ಹರ್ಷರು ಅಪಪ್ರಚಾರ ಮಾಡಿದ ಬಗ್ಗೆ ಇರುವ ದಾಖಲೆ ತೋರಿಸಲು ಆಗ್ರಹಿಸಿದಾಗ ಜ್ಯೋತಿಷಿ ದಾಖಲೆ ನೀಡಲು ಹಿಂದೇಟು ಹಾಕಿದರೆನ್ನಲಾಗಿದೆ. ಇನ್ನಷ್ಟು ಒತ್ತಾಯಿಸಿದಾಗ ತಾನು ಹಿಂದಿನ ದಿನ ಹರ್ಷರಿಗೆ ಫೋನ್ ಮಾಡಿ ನೀವೇ ಹೇಳಿದ್ದೆಂದು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದ ಫೋನ್ ಕರೆಯ ರೆಕಾರ್ಡನ್ನು ಕೇಳಿಸಿದರೆನ್ನಲಾಗಿದೆ. ಅದರಲ್ಲಿ ಹರ್ಷರು ಅಪಪ್ರಚಾರ ಮಾಡುವ ವಿಚಾರ ಇಲ್ಲದಿದ್ದುದರಿಂದ ಕೋಪಗೊಂಡ ಮಹಿಳೆ ಜ್ಯೋತಿಷ್ಯರಿಗೆ ಕಪಾಳಮೋಕ್ಷ ಮಾಡಿದರೆನ್ನಲಾಗಿದೆ.
ಬಳಿಕ ಅಲ್ಲಿಂದ ಪಂಚಾತಿಕೆ ಸ್ಥಳಕ್ಕೆ ಹಿಂತಿರುಗಿದ ಮಹಿಳೆ ‘ ಸರಿಯಾಗಿ ತಿಳಿದುಕೊಳ್ಳದೆ ಸಾರ್ವಜನಿಕವಾಗಿ ಹೊಡೆದ ತಪ್ಪಿಗೆ ಸತೀಶ್ ಗುಡ್ಡೆ ಮತ್ತು ಅವರ ತಾಯಿಯ ಕಾಲು ಹಿಡಿದು ಕ್ಷಮೆ ಕೇಳಿದರೆಂದೂ, ಅಲ್ಲಿಗೆ ಪ್ರಕರಣ ಮುಕ್ತಾಯಗೊಂಡಿತೆಂದೂ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.