ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅಳವಡಿಸುವಂತೆ ಮನವಿ

Advt_Headding_Middle

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅಳವಡಿಸುವಂತೆ ನ.1 ರಂದು ಸುಳ್ಯ ಜೈ ತುಳುನಾಡ್ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.

ದೇವಳದ ಲಾಂಛನದಲ್ಲೂ, ಆಮಂತ್ರಣ ಪತ್ರಿಕೆಗಳಲ್ಲೂ ತುಳು ಲಿಪಿ ಹಾಗೂ ತುಳು ಬಾಷೆ ಅಳವಡಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಳು ಲಿಪಿ ಕಲಿಕೆ ಕಾರ್ಯಕ್ರಮ ನಡೆಸುವಂತೆಯೂ ಮನವಿಯಲ್ಲಿ ಕೇಳಿಕೊಳ್ಳಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ ಹಾಗೂ ಕಾರ್ಯನಿರ್ವಹಣ ಅಧಿಕಾರಿ ಡಾ.ನಿಂಗಯ್ಯ ಅವರಿಗೆ ಜೈ ತುಳುನಾಡ್ ಇದರ ವತಿಯಿಂದ ಮನವಿ ಸಲ್ಲಿಸಲಾಯಿತು. ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಸನ್ನ ದರ್ಬೆ, ಜೈ ತುಳುನಾಡ್ ಸಂಘಟನೆಯ ಜಗದೀಶ್ ಗೌಡ ಕಲ್ಕಳ, ಮನೋಜ್ ಗೌಡ, ಗೋಪಿ ಚಂದನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.