ಅಜ್ಜಾವರದಲ್ಲಿ ವಿದ್ಯಾರ್ಥಿ ಸಾಹಿತ್ಯ ಸಂಭ್ರಮ

Advt_Headding_Middle

 

 

ಕ.ಸಾ.ಪ. ಮತ್ತು ಸುವಿಚಾರ ಸಾಹಿತ್ಯ ವೇದಿಕೆ ನೇತೃತ್ವ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸುವಿಚಾರ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ 2021, ವಿದ್ಯಾರ್ಥಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಸರಕಾರಿ- ಪ್ರೌಢ ಶಾಲೆ ಅಜ್ಜಾವರ ಇಲ್ಲಿ ನ.2ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮೀನಾಕ್ಷಿ ಗೌಡ.ಎಂ ಪೂರ್ವಾಧ್ಯಕ್ಷರು, ಕ. ಸಾ. ಪ.ಸುಳ್ಯಇವರು ದೀಪೋಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋಪಿನಾಥ್ ಎಂ ಮುಖ್ಯ ಶಿಕ್ಷಕರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ದಯಾನಂದ ಆಳ್ವ ಕೋಶಾಧ್ಯಕ್ಷರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗುರುರಾಜ್ ಅಧ್ಯಕ್ಷರು, ಪಯಸ್ವಿನಿ ಜೇಸಿ ಸುಳ್ಯ, ಶ್ರೀಮತಿ ರಜನಿ
ಗೋರಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಅಜ್ಜಾವರ, ಶ್ರೀಮತಿ ಶಶ್ಮಿ ಭಟ್, ಅಧ್ಯಕ್ಷರು ಧನಲಕ್ಷ್ಮೀ ಮಹಿಳಾ ಮಂಡಲ ಅಜ್ಜಾವರ, ಶ್ರೀಮತಿ ಗಿರಿಜಾ ಎಂ.ವಿ, ಕಾರ್ಯದರ್ಶಿ, ಸುವಿಚಾರ ಸಾಹಿತ್ಯ ವೇದಿಕೆ, ತೇಜಸ್ವಿ ಕಡಪಳ, ಗೌರವ ಕಾರ್ಯದರ್ಶಿಗಳು, ಸುವಿಚಾರ ಸಾಹಿತ್ಯ ವೇದಿಕೆ ಇವರುಗಳು ಭಾಗವಹಿಸಿದ್ದು ಕನ್ನಡ ನಾಡು ನುಡಿಗೆ ಜೀವ ಮಾನವಿಡೀ ನಾವು ಗೌರವಿಸಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶ್ರೀಮತಿ ಲೀಲಾ ಮನಮೋಹನ್ ಉಪಾಧ್ಯಕ್ಷರು ಗ್ರಾ. ಪo. ಅಜ್ಜಾವರ ಇವರು ಮತ್ತು ಎಲ್ಲಾ ಅತಿಥಿಗಳು ಈ ಕಾರ್ಯಕ್ರಮ ದ ನಿಮಿತ್ತ ಹಮ್ಮಿಕೊಂಡಿದ್ದ ಭಾಷಣ,ನಾಡಗೀತೆ, ಚಿತ್ರಕಲೆ ಹಾಗೂ ಪುಷ್ಪ ಪ್ರದರ್ಶನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿ ನಾಯಕ ವರುಣ್ 10 ನೇ ತರಗತಿ ಕನ್ನಡ ನಾಡು ನುಡಿ ಸಂಸ್ಕೃತಿ ಯ ಬಗ್ಗೆ ಮಾತನಾಡಿದರು. ಶಾಲೆಯ ಶಿಕ್ಷಕಿ ಶ್ರೀಮತಿ ವಿದ್ಯಾಶಂಕರಿ ಯಸ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಗೋಪಿನಾಥ್ ಎಂ.ಇವರು ವಂದನಾರ್ಪಣೆಗೈದರು. ಶ್ರೀಮತಿ ಹೇಮಲತಾ ಜೆ.ಎಂ ಇವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಚಂದ್ರಶೇಖರ ಭಟ್. ಎ ಇವರು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.