ಶೇಣಿ: ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಬಸ್ ತಂಗುದಾಣ ಲೋಕಾರ್ಪಣೆ

Advt_Headding_Middle

ಸರಕಾರದಿಂದ ದೊರಕುವ ಸೌಲಭ್ಯಗಳನ್ನೇ ಅವಲಂಬಿಸದೆ ತಮ್ಮ ಊರಿಗೆ ಬೇಕಾದ ಸೌಲಭ್ಯಗಳನ್ನು ತಾವೇ ಮಾಡಿಕೊಂಡು ಶೇಣಿಯ ಶ್ರೀಕೃಷ್ಣ ಸೇವಾ ಸಮಿತಿಯ ಯುವಕರ ತಂಡ ಆದರ್ಶ ಮೆರೆದಿದ್ದಾರೆ.
ಅಮರಪಡ್ನೂರು ಗ್ರಾಮದ ಶೇಣಿಯಲ್ಲಿ ಹಲವು ವರ್ಷಗಳಿಂದ ಶ್ರೀಕೃಷ್ಣ ಸೇವಾ ಸಮಿತಿ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೆಲವು ತಿಂಗಳ ಹಿಂದೆಯಷ್ಟೆ ಅನಾರೋಗ್ಯ ಪೀಡಿತರಾಗಿ, ವಾಸಕ್ಕೆ ಯೋಗ್ಯ ಮನೆಯಿಲ್ಲದ ಸಂಕಷ್ಟದಲ್ಲಿದ್ದ ಮಾಣಿಕ ಎಂಬವರಿಗೆ ದಾನಿಗಳ ಸಹಕಾರದಿಂದ ಮನೆ ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇದೀಗ ಇದೇ ಯುವಕರ ತಂಡ ಮತ್ತೊಂದು ಹೆಜ್ಜೆ ಮುಂದಿಟ್ಟು ಸಾರ್ವಜನಿಕ ಬಸ್ ನಿಲ್ದಾಣವನ್ನು ನಿರ್ಮಿಸಿದ್ದು, ನ. 3ರಂದು ಬಸ್ ತಂಗುದಾಣ ಲೋಕಾರ್ಪಣೆಗೊಂಡಿತು.


ನಿವೃತ್ತ ಕನ್ನಡ ಉಪನ್ಯಾಸಕರಾದ ಅನಂತ ಪದ್ಮನಾಭ ಗೋಪಾಲಕಜೆ ತಂಗುದಾನವನ್ನು ಉದ್ಘಾಟಿಸಿ ಯುವಕರ ಕಾರ್ಯವನ್ನು ಶ್ಲಾಘಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿಯ ಅಧ್ಯಕ್ಷ ಮಾಧವ ಗೌಡ ಪಿಂಡಿಬನ ವಹಿಸಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅತಿಥಿಗಳಾಗಿ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ, ನಿವೃತ್ತ ಶಿಕ್ಷಕ ರಘುನಾಥ ಕಾಯಾರ, ಅಮರಪಡ್ನೂರು ಸ.ಉ.ಹಿ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರಮಾಕಿಶೋರಿ ಕೆ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ.ಜಿ. ಭಾಗವಹಿಸಿ ಶುಭ ಹಾರೈಸಿದರು. ಶ್ರೀಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು. ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿಯ ಪೂರ್ವಾಧ್ಯಕ್ಷ ವಿಶ್ವನಾಥ ಮೋಟುಕಾನ ಸ್ವಾಗತಿಸಿದರು. ಶೇಣಿ ಬೈದೆರುಗಳ ಗರಡಿಯ ಆಡಳಿತ ಮೊಕ್ತೇಸರರಾದ ಧರ್ಮಪಾಲ ಶೇಣಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಗೌರವಾಧ್ಯಕ್ಷ ಧರ್ಮಪಾಲ ಶೇಣಿ ವಂದಿಸಿದರು.

“ವಾಹನ ಚಾಲನೆ ಮಾಡುವಾಗ ಅತೀ ವೇಗದಿಂದ ಚಲಾಯಿಸಿ ಅನಾಹುತ ಮಾಡಿಕೊಂಡು ಆಸರೆಯಾಗಬೇಕಾದ ಕುಟುಂಬಕ್ಕೆ ಹೊರೆಯಾಗಬಾರದು. ಸರಕಾರದ ಕಾನೂನನ್ನು ಪಾಲಿಸಿಕೊಂಡು ವ್ಯವಹರಿಸಿ.
ವಿದ್ಯಾವಂತರು ಯಾವುದಾದರೂ ಒಂದು ಕೆಲಸಮಾಡಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಸಕ್ತಿಯಿರುವ ವಿದ್ಯಾವಂತರಿಗೆ ನನ್ನ ಬಿಡುವಿನ ಸಮಯದಲ್ಲಿ ನನಗೆ ತಿಳಿದಿರುವ ಮಾಹಿತಿ ಅಥವಾ ಯಾವ ಪುಸ್ತಕ ಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತೇನೆ. ಅತೀ ಬಡವರಿದ್ದರೆ ಪುಸ್ತಕದ ಖರ್ಚುನ್ನು ಭರಿಸುತ್ತೇನೆ” – ಆಂಜನೇಯ ರೆಡ್ಡಿ ಪಿ.ಎಸ್.ಐ. ಬೆಳ್ಳಾರೆ ಪೊಲೀಸ್ ಠಾಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.