ತಂಟೆಪ್ಪಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ಒದಗಿಸುವಂತೆ ಸಂಸದರಿಗೆ ಮನವಿ

Advt_Headding_Middle

 

 

ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ ನಾಲ್ಗುತ್ತು ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಲೋಕೇಶ್ ತಂಟೆಪ್ಪಾಡಿ ಪ್ರಧಾನಮಂತ್ರಿಗಳಿಗೆ 2016ರಲ್ಲಿ ಪತ್ರ ಬರೆದು ಮನವಿ ಮಾಡಿದ್ದರು . ಪ್ರಧಾನ ಮಂತ್ರಿಯವರಿಗೆ ಸಲ್ಲಿಸಿದ ಮನವಿಗೆ ಕ್ರಮಕೈಗೊಳ್ಳುವಂತೆ ಪ್ರಧಾನಿ ಕಾರ್ಯಾಲಯದಿಂದ ನಿರ್ದೇಶಿಸಲಾಗಿತ್ತು . ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಗಳೂರು ರವರು ಸ್ಥಳ ಪರಿಶೀಲಿಸಿ ತಂಟೆಪ್ಪಾಡಿ ನಾಲ್ಗುತ್ತು ಮಣ್ಣಿನ ರಸ್ತೆಯನ್ನು 600 ಮೀಟರ್ ಉದ್ದಕ್ಕೆ ಕಾಂಕ್ರೀಟ್ ಮಾಡಿ ಅಭಿವೃದ್ಧಿಪಡಿಸಲು ರೂ 40. ಲಕ್ಷ ಅನುದಾನದ ಅಗತ್ಯವಿರುತ್ತದೆ ಎಂದು ಮುಖ್ಯಕಾರ್ಯನಿರ್ವಣಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಇವರಿಗೆ ವರದಿ ಸಲ್ಲಿಸಿರುತ್ತಾರೆ . ಆದರೆ ಈ ಮೊತ್ತವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಯಾವುದೇ ಲೆಕ್ಕ ಶೀರ್ಷಿಕೆಯಡಿ ಲಭ್ಯವಿಲ್ಲದ ಕಾರಣ ಜಿಲ್ಲಾ ಪಂಚಾಯತ್ ನವರು ಸರಕಾರದ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ರವರಿಗೆ ದಿನಾಂಕ 15/09/2016ರಂದು ಮನವಿ ಮಾಡಿರುತ್ತಾರೆ .ಆದರೆ ಕಾಮಗಾರಿಗೆ ಯಾವುದೇ ಅನುದಾನ ಈವರೆಗೆ ಬಿಡುಗಡೆಗೊಳ್ಳದೆ ಇರುವುದರಿಂದ ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರನ್ನು ಲೋಕೇಶ್ ತಂಟೆಪ್ಪಾಡಿ ಯವರು ಭೇಟಿ ಮಾಡಿ ಮನವಿ ನೀಡಿ ಈ ಭಾಗದ ರೈತರ ಬಹು ಮುಖ್ಯ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು .ಈ ಸಂದರ್ಭದಲ್ಲಿ ಬೆಳ್ಳಾರೆ ಜೇಸಿಸ್ ನ ಅಧ್ಯಕ್ಷ ಪದ್ಮನಾಭ ಕಲಾಸುಮಾ ಕೃಷ್ಣಪ್ಪಬಂಬಿಲ ದಯಾಕರ ಆಳ್ವ ರವರು ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.