ಪ್ರವಾದಿ ಮುಹಮ್ಮದ್ ರ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಿಂದನೆ

Advt_Headding_Middle

 

 

ಜಗದೀಶ ಕೈವಲ್ತಡ್ಕ ಎಂಬವರ ವಿರುದ್ಧ ಎಸ್.ಡಿ.ಪಿ. ಐ ದೂರು

ಪ್ರವಾದಿ ಮಹಮ್ಮದ್ ರನ್ನು ಸಾಮಾಜಿಕ ಜಾಲತಾಣದಲ್ಲಿ
ನಿಂದಿಸಿದ್ದಾರೆಂಬ ಕಾರಣಕ್ಕೆ ಐವರ್ನಾಡಿನ ಜಗದೀಶ್ ಕೈವಲ್ತೊಡ್ಕ ಎಂಬವರ ಮೇಲೆ ಎಸ್.ಡಿ.ಪಿ.ಐ. ಬೆಳ್ಳಾರೆಯ ವಲಯದ ಉಪಾಧ್ಯಕ್ಷ ಮಹಮ್ಮದ್ ಶಫೀಕ್ ಎಂಬವರು ಬೆಳ್ಳಾರೆ ಪೋಲೀಸರಿಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಾಲಕರು ಚಪ್ಪಲಿ ಹಾಕಿಕೊಂಡು ಹೋದ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಚರ್ಚೆಗೆ ಆಸ್ಪವಾದ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಐವರ್ನಾಡು ನಿವಾಸಿಯಾದ ಜಗದೀಶ ಕೈವಲ್ತಡ್ಕ ಎಂಬಾತ ಮುಸ್ಲಿಮರು‌ ಸೇರಿದಂತೆ ಲೋಕಾಧ್ಯಂತ ಜನರು ಪ್ರೀತಿಸುವ ಮತ್ತು ಗೌರವಿಸುವ ಅಂತ್ಯ ಪ್ರವಾದಿ ಮುಹಮ್ಮದ್ ನಬಿ(ಸ.ಅ) ಕುರಿತು ಕಮೆಂಟ್ ಹಾಕಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಶಾಂತಿಯಿಂದ ಬದುಕುತ್ತಿರುವ ಸುಳ್ಯ ತಾಲೂಕಿನಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಪ್ರಚೋದಿಸಿ ಕೋಮು ಗಲಭೆ ಮಾಡಿಸಿ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡಲು ಪ್ರಯತ್ನಿಸಿದ್ದು,
ಅದೇ ರೀತಿ ಯತೀನ್ ದೇವಾಡಿಗ ಎಂಬಾತನು ಕೂಡಾ ಅಸಭ್ಯ ಕಮೆಂಟ್ ಹಾಕಿ ಅಶಾಂತಿಯನ್ನು ಹಬ್ಬಿಸಲು ಯತ್ನಿಸಿರುತ್ತಾನೆ ಇವರಿಬ್ಬರ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.