ಶೇಣಿ ಶಾಲೆಯ ಆವರಣದಲ್ಲಿ ವಾಸ್ತವ್ಯವಿದ್ದ ಅನಾಥ ವ್ಯಕ್ತಿಯನ್ನು ಆಶ್ರಮಕ್ಕೆ ಸೇರಿಸಿದ ಗ್ರಾಮಸ್ಥರು

Advt_Headding_Middle

 

 

ಅಮರಪಡ್ನೂರು ಗ್ರಾಮದ ಸ .ಹಿ. ಪ್ರಾಥಮಿಕ ಶಾಲೆ ಶೇಣಿಯಲ್ಲಿ ಕೆಲವು ಸಮಯದಿಂದ ವಾಸ್ತವ್ಯ ಹೊಂದುತ್ತಿದ್ದ ಅನಾಥ ವ್ಯಕ್ತಿ ಯೊಬ್ಬರನ್ನು ಪಂಚಾಯತ್ ಸದಸ್ಯರ ‌ನೇತೃತ್ವದಲ್ಲಿ ಉಡುಪಿಯ ಕಾರುಣ್ಯ ಆಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ವ್ಯಕ್ತಿಯು ಕೆಲವು‌ ಸಮಯಗಳಿಂದ ಶಾಲಾ ವಠಾರದಲ್ಲಿ ತಂಗುತ್ತಿದ್ದುದರಿಂದ
ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಚಟುವಟಿಕೆಗಳಿಗೆ ತೊಂದರೆಯಾಗುತಿತ್ತು. ಅವರನ್ನು ಅಲ್ಲಿಂದ ಕಳುಹಿಸಿಕೊಡುವಂತೆ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ ಮಾಡಬಾಕಿಲು ರವರು ಗ್ರಾಮ ಪಂಚಾಯತ್ ಗೆ ಮತ್ತು ಸ್ಥಳೀಯ ಸದಸ್ಯರಾದ ಅಶೋಕ್ ಚೂಂತಾರುರವರ ಮೂಲಕ ಮನವಿ ಸಲ್ಲಿಸಿದ್ದರು. ಈ ವಿಚಾರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ವಾಯಿತು. ಈ ಬಗ್ಗೆ ಮುತುವರ್ಜಿ ವಹಿಸಿದ ಪಂ. ಸದಸ್ಯ ಅಶೋಕ ‌ಚೂಂತಾರು ಉಡುಪಿ ಜಿಲ್ಲೆಯ ಕಟಪಾಡಿಯ ಕಾರುಣ್ಯ ಅಭಯಾಶ್ರಮದ ಸಂಚಾಲಕರಾದ ಕುಮಾರ್ ರವರನ್ನು ಜೇಸಿ ರಾಘವೇಂದ್ರ ಪ್ರಭು ಕರ್ವಾಲು ರವರ ಮುಖಾಂತರ ಸಂಪರ್ಕಿಸಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸಿದ್ಧಿವಿನಾಯಕ ಭಟ್ ಚೂಂತಾರು ಮತ್ತು ಸತ್ಯವೆಂಕಟೇಶ್ ಹೆಬ್ಬಾರ್ ರವರ ಸಹಕಾರದೊಂದಿಗೆ ಅನಾಥ ವ್ಯಕ್ತಿ ಕೇಶವ ಭಟ್ ಎಂಬವರನ್ನು ಕಾರುಣ್ಯ ಆಶ್ರಮಕ್ಕೆ ದಾಖಲಿಸುವ ಬಗ್ಗೆ ತೀರ್ಮಾನಿಸಿ ‌ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ‌ಕಳುಹಿಸುವ‌ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರುಣ್ಯ ಅಭಯಾಶ್ರಮ ಕಟಪಾಡಿಯ ಸಂಚಾಲಕರಾದ ಕುಮಾರ್, ಜೇಸಿಐ ವಲಯ 15 ರ ಪೂರ್ವ ವಲಯ ಉಪಾಧ್ಯಕ್ಷ ಜೇಸಿ ರಾಘವೇಂದ್ರ ಪ್ರಭು ಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.