ಎಂ.ಎಲ್.ಎ. ಚುನಾವಣೆಯಲ್ಲಿ ಆದಿದ್ರಾವಿಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿ

Advt_Headding_Middle

 

ರಾಜಕೀಯ ಪಕ್ಷಗಳಿಗೆ ಆದಿದ್ರಾವಿಡ ಯುವ ವೇದಿಕೆ ಒತ್ತಾಯ

 

ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಆದಿದ್ರಾವಿಡ ಸಮುದಾಯದ ಅಭ್ಯರ್ಥಿಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ನೀಡಬೇಕೆಂದು ನಾವು ಎಲ್ಲ ಪಕ್ಷಗಳ ನಾಯಕರುಗಳಿಗೆ ಮನವಿ ಮಾಡುವುದಾಗಿ ಆದಿದ್ರಾವಿಡ ಯುವ ವೇದಿಕೆ ಒತ್ತಾಯಿಸಿದೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಯುವ ವೇದಿಕೆ ಜಿಲ್ಲಾಧ್ಯಕ್ಷ ರಾಮಚಂದ್ರರು, ತಾಲೂಕಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಆದಿದ್ರಾವಿಡ ಸಮುದಾಯದವರಿದ್ದಾರೆ. ಈ ಸಮುದಾಯವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮುಂದುವರಿಯಲು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯದ ಅಭ್ಯರ್ಥಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ನಾವು ಎಲ್ಲ ರಾಜಕೀಯ ಮುಖಂಡರುಗಳಿಗೆ ಮನವಿ ಮಾಡಲಿದ್ದೇವೆ ಎಂದು ಹೇಳಿದರು.

 

ನಮ್ಮಲ್ಲಿ 30 ಕ್ಕಿಂತಲೂ ಹೆಚ್ಚು‌ ಮಹಮ್ಮಾಯಿ ದೇವಸ್ಥಾನವಿದೆ. ಅದರಲ್ಲಿ 22 ದೇವಸ್ಥಾನ ವಷ್ಟೇ ಜೀರ್ಣೋದ್ಧಾರ ಆಗಿದೆ. ಇದಕ್ಕೆ ಸರಕಾರದಿಂದ ಅನುದಾನಗಳು ದೊರೆಯಬೇಕಾಗಿದೆ. ಕಾಲೋನಿಗಳಲ್ಲಿ ಸ್ಮಶಾನದ ಅವಶ್ಯಕತೆ ಇದೆ. ರಸ್ತೆಗಳು ಅಭಿವೃದ್ಧಿ ಆಗಬೇಕಿದೆ. ಈಗಿನ ಶಾಸಕರು ಅನುದಾನ ಒದಗಿಸಿದ್ದಾರೆ. ಇನ್ನೂ ಬೇಕಾಗಿದೆ ಎಂದು ಹೇಳಿದರು.

ನಾವು ಕಳೆದ ಎರಡು ಅವಧಿಯಿಂದ ನಮ್ಮ ಸಮುದಾಯದವರಿಗೆ ಅವಕಾಶ ನೀಡಲು ಕೇಳಿದ್ದೆವು. ಮುಂದಿನ ಬಾರಿ ಎಂದು‌ ದೂಡುತ್ತಿದ್ದಾರೆ.‌ ಈ ಬಾರೀ ನೀಡಲೇಬೇಕು. ಅವಕಾಶ ಸಿಗದಿದ್ದರೆ ಏನು ಮಾಡುವುದೆಂದು ನಾವು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

 

ರಾಜ್ಯ ಸರಕಾರ ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ 24 ಸಾವಿರ ಕೋಟಿ ಮೀಸಲಿಟ್ಟಿದ್ದು ಇದರಲ್ಲಿ ನಾಲ್ಕರಷ್ಟು ಭಾಗ ಮಾತ್ರ ಸಮಾಜದ ಅಭಿವೃದ್ಧಿಗೆ ಖರ್ಚಾಗುತ್ತಿದ್ದು ಸುಳ್ಯ ತಾಲೂಕಿನ ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಗೆ ಬರುವ ಅನುದಾನದಲ್ಲಿ ಬೇರೆ ಯಾವುದು ಮೋರಿ ಅನೇಕಟ್ಟು ಇನ್ನಿತರ ಯೋಜನೆಗಳಿಗೆ ಉಪಯೋಗಿಸದೆ ಅನುದಾನವನ್ನು ಎಸ್ಸಿ ಎಸ್ಟಿ ಹಾಗೂ ಆದಿದ್ರಾವಿಡ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಬೇಕು ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಆದಿ ದ್ರಾವಿಡ ಯುವ ವೇಗವಾಗಿ ಜಿಲ್ಲಾಧ್ಯಕ್ಷ ರಾಮಚಂದ್ರ ಬಿ.ಕೆ., ಸಂಘಟನಾ ಕಾರ್ಯದರ್ಶಿ ರಮೇಶ್ ಬೂಡು, ಅಶ್ವಿನ್ ಅಜ್ಜಾವರ, ಲಕ್ಷ್ಮಣ ನಾವೂರು, ಸತೀಶ್ ಬಿಳಿಯಾರು, ದಾಮೋದರ ಬೇರ್ಯ, ಸತೀಶ್ ಪಂಜಿಗುಂಡಿ, ಗೋಪಾಲ ಅರಂಬೂರು, ಕೇಶವ ಕಲ್ಪಡ, ಚಂದ್ರಕಾಂತ್ ಮೂಡಾಯಿತೋಟ, ಸುಂದರ ಬೇರ್ಯ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.