ಅಮರ ಪಡ್ನೂರು ಪಂಚಾಯಿತಿ ಸಿಬ್ಬಂದಿ ಲಂಚ ಪಡೆದಿಲ್ಲ : ದಾಖಲೆಗಳ ಸಿದ್ಧಪಡಿಸಲು ಮಾತ್ರ ಹಣ ನೀಡಲಾಗಿದೆ –  ಅಧ್ಯಕ್ಷರ ಸ್ಪಷ್ಟನೆ

Advt_Headding_Middle

 

ಪಂಚಾಯಿತಿ ಸದಸ್ಯ ಅಶೋಕ್‌ ಚೂಂತಾರು ಸ್ವಹಿತಾಸಕ್ತಿಗಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ

 

ಅಮರಮುಡ್ನೂರು ಗ್ರಾಮ ಪಂಚಾಯಿತಿ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಯಶವಂತ ಎಂಬವರು ಗ್ರಾಮಸ್ಥರೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ, ಹಣ ನೀಡಿದ ಗ್ರಾಮಸ್ಥರೇ ನಾನು ಲಂಚ ನೀಡಿದ್ದಲ್ಲ.‌ ದಾಖಲೆ ಸಿದ್ಧಪಡಿಸಲು ಹಣ ನೀಡಿದ್ದಾಗಿ ಗ್ರಾ.ಪಂ.ಗೆ ಮತ್ತು ಸುಳ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಲಿಖಿತ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಗ್ರಾ.ಪಂ. ಸಿಬ್ಬಂದಿ ಯಾವುದೇ ರೀತಿಯಿಂದ ಲಂಚ ಸ್ವೀಕರಿಸಿಲ್ಲ ಎಂದು ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಸ್ಪಷ್ಟಪಡಿಸಿದ್ದಾರೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಂಚಾಯತ್ ಅಧ್ಯಕ್ಷೆ ಹಾಗೂ ಸದಸ್ಯರು ಈ ಸ್ಪಷ್ಟನೆ ನೀಡಿದರು.

ಗ್ರಾಮ ಪಂಚಾಯಿತಿ ಸಿಬ್ಬಂದಿ ಯಶವಂತರು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ಗ್ರಾ.ಪಂ. ಸದಸ್ಯ ಅಶೋಕ್ ಚೂಂತಾರು ಮಾಡುತ್ತಿರುವುದು ರಾಜಕೀಯ ದ್ವೇಷದಿಂದ ಮತ್ತು ಗ್ರಾ.ಪಂ
ಗೆ ಕೆಟ್ಟ ಹೆಸರು ತರಲು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಈ ವಿಚಾರದ ಕುರಿತು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸಿಬ್ಬಂದಿಯನ್ನು ಕರೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡು ಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಸಭೆಯಲ್ಲಿ ಸಿಬ್ಬಂದಿಯನ್ನು ಅಮಾನತಿನಲ್ಲಿ ಇರಿಸಿ ತನಿಖೆ ನಡೆಸುವುದಾಗಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ ಎಂದು ಗ್ರಾ.ಪಂ. ಸದಸ್ಯರು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದೆ . ಗ್ರಾ.ಪಂ.ನಲ್ಲಿ ಇಂತಹ ಯಾವುದೇ ನಿರ್ಣಯಗಳು ಆಗಿಲ್ಲ. ಪ್ರಶಾಂತ್ ರವರಿಗೆ ನೋಟೀಸ್ ನೀಡಲು ಮಾತ್ರ ನಿರ್ಣಯಿಸಲಾಗಿತ್ತು ಎಂದು ಅವರು ಹೇಳಿದರು.

 

ಸ್ವಹಿತಾಸಕ್ತಿಗಾಗಿ ಕಾನೂನುಬಾಹಿರ ಚಟುವಟಿಕೆ: ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ಸಾರ್ವಜನಿಕ ಕೊಳವೆ ಬಾವಿಯ ಹತ್ತಿರ ತನ್ನ ಸ್ವಂತ ಬಳಕೆಗಾಗಿ ಖಾಸಗಿ ಕೊಳವೆಬಾವಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಆಗಿನ ಪಿಡಿಓ ರವರು ಪೊಲೀಸ್ ದೂರು ನೀಡಿ, ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿದೆ. ಈ ರೀತಿ ನಡೆದರೂ ಅಶೋಕ ಚೂಂತಾರು ಮತ್ತು ಆಗಿನ ಪಿಡಿಓ, ಗ್ರಾಪಂ ಅಧ್ಯಕ್ಷರು – ಸದಸ್ಯರಿಗೆ ಮಾಹಿತಿ ನೀಡದೆ ಅಶೋಕ್ ಅವರ ಪತ್ನಿ ಶೋಭಾ ಅವರ ಹೆಸರಿನಲ್ಲಿ ತನ್ನ ಪ್ರಭಾವವನ್ನು ಬಳಸಿ ಎನ್.ಒ. ಸಿ. ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಂಚಾಯಿತಿ ಗತ ವರದಿಯಲ್ಲಿ ಯೂ ಉಲ್ಲೇಖವಾಗಿಲ್ಲ. ಈ ಕುರಿತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡುತ್ತೇವೆ.

ಪಂಚಾಯತ್ ರಾಜ್ ಅಧಿನಿಯಮದಲ್ಲಿ ಯಾವುದೇ ಗ್ರಾ.ಪಂ. ಸದಸ್ಯನು ಸ್ವಹಿತಶಕ್ತಿ ಬಯಸಿದ್ದಲ್ಲಿ ಅವರ ಸದಸ್ಯತನ ರದ್ದಾಗುವುದು ಎಂಬ ಉಲ್ಲೇಖವೂ ಇದೆ. ಹೀಗೆ ಸ್ವಹಿತಾಸಕ್ತಿಯನ್ನೇ ಬಯಸಿ, ಪಂಚಾಯತ್ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಲ್ಲಿ ಪಂಚಾಯತಿ ಸದಸ್ಯರು ಎಲ್ಲರೂ ಒಂದಾಗಿ ಕಾನೂನು ಹೋರಾಟ ದೊಂದಿಗೆ ಸರಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ.

 

ಅಶೋಕ್ ಚೂಂತಾರುರವರು ಸ್ವಂತ ಜಾಗದಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ಅಧಿಕಾರಿಗಳಿಗೆ ತಪ್ಪು ತಿಳುವಳಿಕೆ ನೀಡಿ ಬಡವರಿಗೆ ಸಿಗುವ ಯೋಜನೆಯನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ. ಅಲ್ಲದೆ ಶೇಣಿ ಶಾಲೆಯ ಸಾರ್ವಜನಿಕ ರಸ್ತೆಗೆ ಬಂದ ಮೋರಿಗಳನ್ನು ಖಾಸಗಿ ವ್ಯಕ್ತಿಯ ರಸ್ತೆ ಗೆ ಅಳವಡಿಸಲಾಗಿದೆ. ಹೀಗೆ ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗ್ರಾ.ಪಂ. ಸದಸ್ಯ ಅಶೋಕ ಚೂಂತಾರು ಭಾಗಿಯಾಗಿದ್ದಾರೆ. ಇವರು ಜನಪ್ರತಿನಿಧಿಯಾದ ಬಳಿಕ ಗ್ರಾಮದಲ್ಲಿ ತನ್ನ ಅಧಿಕಾರ ಬಳಸಿ ಬಡ ಜನರಿಗೆ ಮೋಸ ಮಾಡುವುದು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಅಲ್ಲದೆ ಅಧಿಕಾರಿಗಳ ಮೇಲೂ ಸಹ ಬ್ಲಾಕ್ ಮೇಲ್ ತಂತ್ರವನ್ನು ಬಳಸಿ ಸಾರ್ವಜನಿಕ ಕೆಲಸಗಳನ್ನು ತನ್ನ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಯಾಗಿ ಕಾನೂನುಬಾಹಿರ ಚಟುವಟಿಕೆ ಮುಂದುವರಿಯುತ್ತಾ ಹೋದರೆ ನಾವು ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡುತ್ತೇವೆ. ಹಾಗೂ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಿದ್ದೇವೆ ಎಂದು ಹೇಳಿದರು.

 

ಪಂಚಾಯತ್ ಗೆ ಜಿಲ್ಲೆಯಲ್ಲೇ ಒಳ್ಳೆಯ ಹೆಸರಿದೆ

ಈ ಸಿಬ್ಬಂದಿಗಳಿಗೆಲ್ಲ ನಮ್ಮ ಅವಧಿಯಲ್ಲಿ ಪಂಚಾಯತ್ ನಲ್ಲಿ ಕೆಲಸ ಕೊಡಲಾಗಿದೆ. ನಾವು ನಾಲ್ಕು ಅವಧಿಯಲ್ಲಿ ಪಂಚಾಯತ್ ನಲ್ಲಿ ಸದಸ್ಯರಾಗಿದ್ದೆವು. ಇಲ್ಲಿ ನರೇಗಾ, ವಸತಿ ಯೋಜನೆಯಲ್ಲಿ ಸೇರಿದಂತೆ ಸಾಕಷ್ಟು‌ ಕೆಲಸಗಳಾಗಿವೆ. ಜಿಲ್ಲೆಯಲ್ಲೇ ಪಂಚಾಯತ್ ಗೆ ಒಳ್ಳೆಯ ಹೆಸರಿದೆ. ಪಂಚಾಯತ್ ಸಿಬ್ಬಂದಿಗಳು ಯಾವುದೇ‌ ಕಮಿಟ್ ಮೆಂಟ್ ಇಟ್ಟುಕೊಳ್ಳದೆ ಉತ್ತಮ ಕೆಲಸ ಮಾಡಿದ್ದಾರೆ.‌ ಅಶೋಕ್ ನಮ್ಮ‌ ಮೇಲಿನ ರಾಜಕೀಯ ದ್ವೇಷದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ.‌ ಅವರು ಬಂದ ಆರಂಭದಲೇ ಸಿಬ್ಬಂದಿಗಳಿಗೆ ಇದರ ಸೂಚನೆಯನ್ನು ನೀಡಿದ್ದರು. ಅಶೋಕ್ ರ ಕಾನೂನು ಬಾಹಿರ ಚಟುವಟಿಕೆಗೆ ಪಂಚಾಯತ್‌ ಪಿಡಿಒ ಕೂಡಾ ಸಾಥ್ ನೀಡುತ್ತಿದ್ದಾರೆ. ಅಶೋಕ್ ಪಂಚಾಯತ್ ರಾಜ್ ಬಗ್ಗೆ ಗೊತ್ತಿದೆ ಎಂದು ಹೇಳುವುದಷ್ಟೆ.‌ ಅಷ್ಟು ಗೊತ್ತಿದ್ದರೆ ಆತ ಬೋರ್ ವೆಲ್ ವಿಷಯದಲ್ಲಿ ಹಾಗೆ ಮಾಡುತ್ತಿರಲಿಲ್ಲ ಎಂದು‌ ತಾ.ಪಂ. ಮಾಜಿ ಸದಸ್ಯ ರಾಧಾಕೃಷ್ಣ ಬೊಳ್ಳೂರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಶಶಿಕಲಾ ಕೋನಡ್ಕ, ಸದಸ್ಯರಾದ ಭುವನೇಶ್ವರಿ, ಸೀತಾ ಹೆಚ್., ದಿವ್ಯ ಎಂ., ಜಯಪ್ರಕಾಶ್ ಡಿ, ರಾಧಾಕೃಷ್ಣ ಕೊರತ್ಯಡ್ಕ, ತೇಜಾವತಿ ಎಮ್, ಕೃಷ್ಣಪ್ರಸಾದ್ ಎಂ, ಜನಾರ್ದನ ಪಿ, ಬಿಜೆಪಿ ಬೂತ್ ಸಮಿತಿಯ ಅರುಣ್ ನಾಯರ್ ಕಲ್ಲು, ಕೇಶವ ಕರ್ಮಜೆ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.