ಪಂಜ:ಯಕ್ಷಗಾನ ತಾಳಮದ್ದಳೆ-ಪದ್ಯಾಣ ಗಣಪತಿ ಭಟ್ ಸಂಸ್ಮರಣಾ ಕಾರ್ಯಕ್ರಮ

Advt_Headding_Middle

 

 

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ದೀಪಾವಳಿ ವಾರ್ಷಿಕ ಪರ್ವದ ವಿಶೇಷ ತಾಳಮದ್ದಳೆ ‘ಶ್ರೀ ರಾಮ ದರ್ಶನ ‘ಮತ್ತು ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಸಂಸ್ಮರಣಾ ಕಾರ್ಯಕ್ರಮ ನ.6.ರಂದು ಪಂಜ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿತು.
ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಕೂತ್ಕುಂಜ ವಹಿಸಿದ್ದರು.ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಜೋಷಿ ದೀಪ ಪ್ರಜ್ವಲನೆ ಗೊಳಿಸಿದರು. ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ನುಡಿನಮನ ಸಲ್ಲಿಸಿ ‘ಪದ್ಯಾಣ ಗಣಪತಿ ಭಟ್ ರವರು ಹಾಡಲೆಂದೇ ಹುಟ್ಟಿದವರು. ಕಲೆಯನ್ನು ತಪಸ್ಸಿನಂತೆ ಸ್ವೀಕರಿಸಿದರು. ಅವರು ಜೀವನಾಧಾರಕ್ಕಾಗಿ ಯಕ್ಷಗಾನ ಕಲೆಯನ್ನು ಸ್ವೀಕರಿಸಿದವರಲ್ಲ. ಕಲೆಯ ಮೇಲಿನ ಪ್ರೀತಿ ಮತ್ತು ಅದು ಅವರ ರಕ್ತಗತವಾಗಿ ಬೆಳೆದು ಬಂದಿದೆ.” ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಬಳ್ಳಕ ಹರಿಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ ,ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ , ನಾರಾಯಣ ಭಟ್ ಪದ್ಯಾಣ ವೇದಿಕೆಯಲ್ಲಿ ಉಪಸ್ಥಿತರಿದ್ದರು .
,ಹಿಮ್ಮೇಳದಲ್ಲಿ ಶ್ರೀಮತಿ ಕಾವ್ಯಶ್ರೀ ಅಜೇರು, ಪ್ರಶಾಂತ್ ರೈ ಪಂಜ,ಕು.ರಚನಾ ಚಿದ್ಗಲ್ಲು, ಚೆಂಡೆ-ಮದ್ದಳೆ ಚಂದ್ರಶೇಖರ ಗುರುವಾಯನಕೆರೆ , ಮುರಳಿಧರ ಕಲ್ಲೂರಾಯ, ಅರ್ಥಧಾರಿಗಳು ಸುಣ್ಣಂಬಳ ವಿಶ್ವೇಶ್ವರಭಟ್, ಜಬ್ಬರ್ ಸಮೋ, ಭಾಸ್ಕರ ರೈ ಕುಕ್ಕುವಳ್ಳಿ, ಪ್ರಸಾದ ಸವಣೂರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರಶಾಂತ್ ರೈ ಪಂಜ ಸ್ವಾಗತಿಸಿದರು.ಶಶಿಧರ ಮಾವಿನಕಟ್ಟೆ ನಿರೂಪಿಸಿದರು ಮತ್ತು ವಂದಿಸಿದರು.
[

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.