ಕೊಡಗು ಸಂಪಾಜೆ : ದೀಪಾವಳಿ ಪ್ರಯುಕ್ತ ಕ್ರೀಡಾಕೂಟ

Advt_Headding_Middle

ಕೊಡಗು ಸಂಪಾಜೆ ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಅರಮನೆತೋಟ ಹಾಗೂ ಶ್ರೀ ಮಹಾವಿಷ್ಣು ಮಿತ್ರ ಬಳಗ ಸಂಪಾಜೆ ಕೊಡಗು ಇವರ ಸಹಯೋಗದೊಂದಿಗೆ ದೀಪಾವಳಿ ಪ್ರಯುಕ್ತ ನ .೦5 ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕ್ರೀಡಾಕೂಟ ನಡೆಯಿತು.
ಸುಂದರ ಸಂಪಾಜೆ ಕ್ರೀಡಾಕೂಟದ ಉದ್ಘಾಟನೆಯನ್ನು ಕಳಗಿ ವೆಂಕಪ್ಪರವರು ನೆರವೇರಿಸಿದರು.
ವೇದಿಕೆಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷರಾದ ಶಭರೀಶ್ ಕುದ್ಕುಳಿ, ಅಧ್ಯಕ್ಷರಾದ ಕೊರಗಪ್ಪ ಅರಮನೆತೋಟ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಅಂಗನವಾಡಿ ಮಕ್ಕಳಿಗೆ ಕ್ರೀಡಾಕೂಟ, ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇರುವ ಮಕ್ಕಳಿಗೆ ಕ್ರೀಡಾಕೂಟ ಮುಗಿದ ನಂತರ ಮಹಿಳೆಯರ ಹಗ್ಗಜಗ್ಗಾಟ ನೆರವೇರಿತು. ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಪಂಚಾನನ ಗೆಳತಿಯರ ಬಳಗ ಹಾಗೂ ಶ್ರೀ ವಿಷ್ಣು ಗೆಳತಿಯರ ಬಳಗ ಪಡೆದುಕೊಂಡಿತು,
ಮಧ್ಯಾಹ್ನದ ನಂತರ ಸಂಪಾಜೆ ಗ್ರಾಮದ ಜಿ.ಕೆ. ಸುಬ್ರಮಣ್ಯ ಭಟ್ ಇವರ ಗದ್ದೆಯಲ್ಲಿ ಪುರುಷರ ಕೇಸರುಗದ್ದೆ ಹಗ್ಗಜಗ್ಗಾಟ ನೆರವೇರಿತು. ಪತಂಜಲಿ ಸಂಪಾಜೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗರುಡಾ ಪ್ರೆಂಡ್ಸ್ ಸಂಗತಡ್ಕ ಪಡೆದುಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಮಿತ್ರ ಬಳಗದ ಅಧ್ಯಕ್ಷರಾದ ಜಯಕುಮಾರ್ ಅರಮನೆತೋಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಶಿರಾಡಿ ದೈವಸ್ಥಾನದ ಅಧ್ಯಕ್ಷ ಕುಮಾರ್ ಚೆದ್ಕಾರ್, ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಕೊರಗಪ್ಪ ಅರಮನೆತೋಟ, ಮಾಜಿ ಸೈನಿಕ ಓ.ಆರ್. ಮಾಯಿಲಪ್ಪ, ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ನಿರ್ದೇಶಕ ಡಿ.ಡಿ ಯಶವಂತ, ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷರಾದ ಶಭರೀಶ್ ಕುದ್ಕುಳಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ಜಯಿಸಿದ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು. ಶ್ರೀಮತಿ ನಳಿನಿ ಪ್ರಾರ್ಥಿಸಿ, ಪವಿನ ಕೊರಗಪ್ಪ ಸ್ವಾಗತಿಸಿದರು, ವೀಣಾ ಕೊರಗಪ್ಪ ಇವರು ಗಣ್ಯರನ್ನು ಅಭಿನಂದಿಸಿದರು. ಪುರುಷೋತ್ತಮ ಬಾಳೆಹಿತ್ಲು, ಧನಂಜಯ, ಪ್ರಕಾಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.