ಸುಳ್ಯದ ಕೆ.ವಿ.ಜಿ. ಬಾರ್‌ಬೆಲ್ ಕ್ಲಬ್‌ನ ವೈಟ್ ಲಿಫ್ಟರ್‌ಗಳಿಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕ ಮತ್ತು ತಂಡ ಪ್ರಶಸ್ತಿ

Advt_Headding_Middle

 

ದಿನಾಂಕ 30 ಅಕ್ಟೋಬರ್‌ನಿಂದ ನವೆಂಬರ್ 1 ರವರೆಗೆ ದಾವಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ ಜೂನಿಯರ್ ವೈಟ್ ಲಿಫ್ಟರ್‌ಗಳಾದ ಎನ್ನೆಂಪಿಯುನ ಹಿತೇಶ್ ಇವರು ಯೂತ್‌ನಲ್ಲಿ ಬೆಳ್ಳಿ ಪದಕ, ಚಂದನ್ ಯೂತ್‌ನಲ್ಲಿ ಬೆಳ್ಳಿ ಹಾಗೂ ಜೂನಿಯರ್‌ನಲ್ಲಿ ಕಂಚಿನ ಪದಕ, ಎನ್ನೆಂಸಿಯ ದರ್ಶನ್ ಜೂನಿಯರ್‌ನಲ್ಲಿ ಕಂಚಿನ ಪದಕ ಮತ್ತು ಸುಳ್ಯದ ಶಾರದಾ ಕಾಲೇಜಿನ ಕುಮಾರಿ ರಕ್ಷಾ ಕೆ.ಆರ್ ಇವರು ಜೂನಿಯರ್‌ನಲ್ಲಿ ಬೆಳ್ಳಿ ಪದಕ ಜಯಿಸಿರುತ್ತಾರೆ. ಅಲ್ಲದೆ ತಂಡದ ಸದಸ್ಯರಾದ ಎನ್ನೆಂಸಿಯ ಶಶಾಂಕ್ ಪಿ.ಎನ್, ನವೀನ, ಬ್ರಿಜೇಶ್, ವಿನಾಯಕ, ತೇಜಸ್, ಪುನೀತ್, ಕಿರಣ್ ಎಸ್ ರಾವ್ ಇವರ ಉತ್ತಮ ಸಾಧನೆಯ ಫಲದ ಅಂಕಗಳಿಂದಾಗಿ ಒಟ್ಟಾರೆ ಚಾಂಪಿಯನ್‌ಶಿಪ್‌ನ ಜೂನಿಯರ್ ವಿಭಾಗದಲ್ಲಿ ಕೆ.ವಿ.ಜಿ ಬಾರ್‌ಬೆಲ್ ಕ್ಲಬ್‌ಗೆ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ ಜಯಿಸಿರುತ್ತಾರೆ.

ಸ್ಪೋರ್ಟ್ಸ್ ಏಂಡ್ ಆರ್ಟ್ಸ್ ಸುಳ್ಯ ಮತ್ತು ಕೆ.ವಿ‌.ಜಿ ಬಾರ್‌ಬೆಲ್ ಕ್ಲಬ್ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್‌ ವೈಟ್ ಲಿಫ್ಟರ್  ಎ ರಮೇಶ್ ಇವರಿಂದ ಸ್ಪರ್ಧಿಗಳೆಲ್ಲರೂ ತರಬೇತಿ ಪಡೆಯುತ್ತಿದ್ದು, ಇವರು ತಂಡದ ಕೋಚ್ ಆಗಿ ಮತ್ತು ಲೆಫ್ಟಿನೆಂಟ್ ಸೀತಾರಾಮ ಎಂ.ಡಿ, ದೈಹಿಕ ಶಿಕ್ಷಣ ನಿರ್ದೇಶಕರು ಎನ್ನೆಂಸಿ ಸುಳ್ಯ ಇವರು ಟೀಂನ ಮ್ಯಾನೇಜರ್ ಆಗಿ ತಂಡದೊಂದಿಗೆ ತೆರಳಿ ಸುಳ್ಯದ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ವೈಟ್ ಲಿಫ್ಟಿಂಗ್ ಚಾಂಪಿಯನ್‌‌ಶಿಪ್‌ನ ಮುಕ್ತ ಕೂಟದಲ್ಲಿ ಟ್ರೋಫಿ ಜಯಿಸಿದೆ.

ವೈಟ್ ಲಿಫ್ಟಿಂಗ್‌ನಲ್ಲಿ ಬಾಲಕ-ಬಾಲಕಿಯರಿಗೆ, ಪುರುಷ-ಮಹಿಳೆಯರಿಗೆ ಯೂತ್, ಜೂನಿಯರ್, ‌ಸೀನಿಯರ್‌ನಲ್ಲಿ ದೇಹ ತೂಕಕ್ಕನುಸಾರ ಪ್ರತ್ಯೇಕ ವಿಭಾಗಗಳಿದ್ದು ಎಸ್ಸೆಸೆಲ್ಸಿ, ಪಿಯುಸಿ ಮತ್ತು ಪ್ರಥಮ ಡಿಗ್ರಿಯಲ್ಲಿ ಓದುತ್ತಿರುವವರು ತರಬೇತಿ ಪಡೆಯಲು ಈ ಕೆಳಗಿನ ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.

ತರಬೇತಿ ಉಚಿತ.

ಮೊಬೈಲ್ ಸಂಖ್ಯೆ:
• 9449386970
• 9480207621

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.